More

    ರೈತರಿಗೇಕೆ ಸಿಬಿಲ್ ಸ್ಕೋರ್?

    ಹಾಸನ: ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಲಾಭ ಪಡೆಯಲು ಬ್ಯಾಂಕ್‌ಗಳು ಸಿಬಿಲ್ ಸ್ಕೋರ್ ನಿಯಮ ಅನ್ವಯಿಸುತ್ತಿರುವುದರಿಂದ ಅರ್ಹರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಅಧಿಕಾರಿಗಳು ಫಲಾನುಭವಿ ರೈತರಿಗೆ ಸಾಲ ನೀಡುವಾಗಿನ ನಿಯಮಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್‌ಗಳಿಗೆ ಸೂಚಿಸಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ನಿರ್ದೇಶನ ಹಮ್ಮಿಕೊಂಡಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬ್ಯಾಂಕ್‌ಗಳ ನಿಯಮಾವಳಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
    ಬಡವನಿಗೆ ಸಹಾಯ ಆಗಲೆಂದೆ ವಿವಿಧ ಯೋಜನೆಯಲ್ಲಿ ರೈತರಿಗೆ ಸಾಲ, ಸಹಾಯಧನ ನೀಡಲಾಗುತ್ತದೆ. ಆದರೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಿಬಿಲ್ ಸ್ಕೋರ್ ಕೇಳಿದರೆ ಅವರು ಹೇಗೆ ಉತ್ತಮ ಅಂಕ ಹೊಂದಿರುವುದನ್ನು ಸಾಬೀತು ಮಾಡಲು ಸಾಧ್ಯ? ಈ ನಿಯಮದಿಂದ ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕಾದ ಅರ್ಹ ಅಶಕ್ತರು ಸೌಲಭ್ಯದಿಂದ ವಂಚಿತರಾಗುತ್ತಾರೆ. ಹೀಗಾಗಿ ಹಣ ಇಲ್ಲದವರನ್ನು ಕೈ ಹಿಡಿದು ಮೇಲೆತ್ತಲೆಂದೇ ಸರ್ಕಾರ ರೂಪಿಸಿದ ಯೋಜನೆ ಗುರಿ ತಲುಪುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ವಿಷಯದಲ್ಲಿ ಸುಧಾರಣಾ ಕ್ರಮ ಜಾರಿಗೊಳಿಸಬೇಕು ಎಂದು ಸೂಚಿಸಿದರು.
    ಅಧಿಕಾರಿಗಳಿಗೆ ತರಾಟೆ: ಸಮರ್ಪಕ ಮಾಹಿತಿ ನೀಡದ ಹಾಗೂ ಸಭೆಗೆ ಗೈರಾದ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಂಸದ ಪ್ರಜ್ವಲ್ ರೇವಣ್ಣ, ಸಭೆಗೆ ಬಂದಿದ್ದ ಕಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
    1 ತಿಂಗಳು ಮುಂಚಿತವಾಗಿ ಸಭೆ ಆಯೋಜನೆ ಬಗ್ಗೆ ಎಲ್ಲ ಇಲಾಖೆಗಳಿಗೂ ಮಾಹಿತಿ ಕಳುಹಿಸಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಹಾಜರಾಗಬೇಕು ಎಂದು ತಿಳಿಸಲಾಗಿತ್ತು. ಹೀಗಿದ್ದರೂ ಪ್ರಮುಖ ಅಧಿಕಾರಿಗಳು ಬಂದಿಲ್ಲ. ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್‌ಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts