More

    ಹಾಸನ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರಜ್ವಲ್ ರೇವಣ್ಣ; ಆಸ್ತಿ ಮೌಲ್ಯ ನಾಲ್ಕು ಪಟ್ಟು ಹೆಚ್ಚಳ

    ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್​ ರೇವಣ್ಣ ಗುರುವಾರ (ಮಾರ್ಚ್​ 28) ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಈ ವೇಳೆ ಅವರು 40.84 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಇದರಲ್ಲಿ 5.44 ಕೋಟಿ ರೂ. ಮೊತ್ತದ ಚರಾಸ್ತಿ ಹಾಗೂ 35.40 ಕೋಟಿ ರೂ. ಮೊತ್ತದ ಸ್ಥಿರಾಸ್ತಿ ಸೇರಿದೆ. 2019ರ ಚುನಾವಣಾ ಅಫಿಡವಿಟ್ ಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಳವಾಗಿದೆ.

    2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತಮ್ಮ ಒಟ್ಟು ಆಸ್ತಿ ಮೌಲ್ಯ 9.78 ಕೋಟಿ ರೂಪಾಯಿ ಎಂದು ಘೋಷಿಸಿದ್ದರು. ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಾಗಿರುವ ಪ್ರಜ್ವಲ್ ಅವರು 4.49 ಕೋಟಿ ರೂ. ಬಾಧ್ಯತೆ ಹೊಂದಿದ್ದು, ಸರ್ಕಾರದ ಬಾಕಿ 3.04 ಕೋಟಿ ರೂ. ಇರುವುದಾಗಿ ತಿಳಿಸಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮೊದಲು ಪ್ರಜ್ವಲ್ ರೇವಣ್ಣ ದೇವರ ಮೊರೆ ಹೋಗಿದ್ದು, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ನಾಮಪತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಹುಟ್ಟೂರು ಹರದನಹಳ್ಳಿಯಲ್ಲಿ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಆಶೀರ್ವಾದ ಪಡೆದ ಪ್ರಜ್ವಲ್​ ತಮ್ಮ ತಾತನವರಿಂದ ಸೂಚಕರಾಗಿ ನಾಮಪತ್ರಕ್ಕೆ ಸಹಿ ಮಾಡಿಸಿಕೊಂಡರು. ಪ್ರಜ್ವಲ್​ಗೆ ಶಾಸಕರಾದ ರೇವಣ್ಣ, ಸ್ವರೂಪ್​ ಪ್ರಕಾಶ್​, ಎ.ಮಂಜು, ಸಿಎನ್ ಬಾಲಕೃಷ್ಣ ಸಾಥ್​ ನೀಡಿದ್ದಾರೆ.

    Prajwal Revanna

    ಇದನ್ನೂ ಓದಿ: ತಮಾಷೆಗಾಗಿ ಸ್ನೇಹಿತನ ಗುದನಾಳಕ್ಕೆ ಗಾಳಿ ಬಿಟ್ಟ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

    ಪ್ರಜ್ವಲ್‌ ರೇವಣ್ಣ 2018-19ರಲ್ಲಿ ತಮ್ಮ ಸಾಮಾನ್ಯ ಆದಾಯ 6.48 ಲಕ್ಷ ರೂ. ಹಾಗೂ ಕೃಷಿ ಆದಾಯ 26.98 ಲಕ್ಷ ರೂ. ಎಂದು ಘೋಷಿಸಿದ್ದಾರೆ. 2022-23ರಲ್ಲಿ 36.14 ಲಕ್ಷ ರೂ. ಸಾಮಾನ್ಯ ಆದಾಯ ಹಾಗೂ 42.41 ಲಕ್ಷ ರೂ. ಕೃಷಿ ಆದಾಯ ಗಳಿಸಿರುವುದಾಗಿ ಹಾಗೂ 9.29 ಲಕ್ಷ ರೂ. ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 57 ಲಕ್ಷ ರೂ. ನಗದು ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.

    ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ರೂ. ಆದಾಯಗಳಿಸಿರುವುದಾಗಿ ಹೇಳಿಕೊಂಡಿರುವ ಪ್ರಜ್ವಲ್, ಕೃಷಿಯೇತರ ಮೂಲದಿಂದ 1.33 ಕೋಟಿ ರೂ. ಆದಾಯ ಗಳಿಕೆ ಮಾಡಿದ್ದೇನೆ ಎಂದಿದ್ದಾರೆ. ಹಾಗೆಯೇ 31 ಹಸು, 4 ಎತ್ತು, ಒಂದು ಟ್ರ‍್ಯಾಕ್ಟರ್ ಹೊಂದಿರುವ ಪ್ರಜ್ವಲ್ ರೇವಣ್ಣ, ಬೆಂಗಳೂರು ಮೈಸೂರು ಸೇರಿ ವಿವಿಧೆಡೆ ವಾಣಿಜ್ಯ ಕಟ್ಟಡ, ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

    4.48 ಕೋಟಿ ರೂ. ಸಾಲವನ್ನೂ ಪ್ರಜ್ವಲ್ ರೇವಣ್ಣ ಹೊಂದಿದ್ದಾರೆ. ಕುಪೇಂದ್ರ ರೆಡ್ಡಿಯಿಂದ 1 ಕೋಟಿ ರೂ. ಸಾಲ ಪಡೆದಿದ್ದರೆ, ಮತ್ತೊಬ್ಬ ಅತ್ತೆ ಶೈಲಜಾ ಅವರಿಂದ 10 ಲಕ್ಷ ರೂಪಾಯಿ, ತಂದೆ ರೇವಣ್ಣ ಅವರಿಂದ 86.21 ಲಕ್ಷ ರೂ., ಡಾ ಸಿಎನ್‌ ಮಂಜುನಾಥ್‌ ಪತ್ನಿ ಅನುಸೂಯಾ ಅವರಿಂದ 22 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ. ಸರಕಾರಕ್ಕೆ 3.04 ಕೋಟಿ ರೂ. ತೆರಿಗೆಯನ್ನೂ ಬಾಕಿ ಉಳಿಸಿಕೊಂಡಿದ್ದಾರೆ. ಸಹೋದರ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣಗೆ 1.56 ಕೋಟಿ ರೂ. ಸಾಲ ನೀಡಿರುವುದಾಗಿ ಉಮೇದುವಾರಿಕೆಯಲ್ಲಿ ಉಲ್ಲೇಖಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts