More

    ಹೃದಯದ ಆರೋಗ್ಯಕ್ಕೆ, ರಕ್ತದ ಪ್ರಕೃತಿ ಸುಧಾರಿಸಲು ಮಾರ್ಜಾಲಾಸನ ಮಾಡಿ

    ಹೃದಯದ ಆರೋಗ್ಯ ಹೆಚ್ಚಿಸುವ ಹಾಗೂ ಬೆನ್ನಿಗೆ ಅಗತ್ಯವಾದ ಚಲನೆಯನ್ನು ನೀಡುವ ಆಸನವೆಂದರೆ ಮಾರ್ಜಾಲಾಸನ. ಸಂಸ್ಕೃತದಲ್ಲಿ ಮಾರ್ಜಾಲ ಎಂದರೆ ಬೆಕ್ಕು. ಬೆಕ್ಕಿನಂತೆ ಕೂರುವ ಭಂಗಿ ಈ ಆಸನದಲ್ಲಿದೆ.

    ಪ್ರಯೋಜನಗಳು : ಹೃದಯಕ್ಕೆ ಮತ್ತು ಬೆನ್ನಿನ ಭಾಗಕ್ಕೆ ಮಸಾಜ್​ ದೊರಕುತ್ತದೆ. ಬೆನ್ನು ಮೂಳೆ ವಿಸ್ತರಿಸುತ್ತದೆ. ರಕ್ತ ಪ್ರಕೃತಿ ಸುಧಾರಿಸುತ್ತದೆ. ಕುತ್ತಿಗೆಯ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಗರ್ಭಿಣಿ ಸ್ತ್ರೀಯರಿಗೆ ಸುಲಭ ಪ್ರಸವವಾಗಲು ಸಹಕಾರಿ. ಹೃದಯದ ಶಾಂತತೆಗೆ ಕಾರಣವಾಗುತ್ತದೆ. ಭುಜಗಳು, ಮಣಿಕಟ್ಟುಗಳು ಬಲಗೊಳ್ಳುತ್ತವೆ.

    ಇದನ್ನೂ ಓದಿ: 44ರ ಹರೆಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್!

    ಅಭ್ಯಾಸ ಕ್ರಮ : ಜಮಖಾನದ ಮೇಲೆ ವಜ್ರಾಸನದಲ್ಲಿ ಕೂರುವುದು. ಕೈಗಳ ಮೇಲೆ ಮತ್ತು ಮೊಣಕಾಲುಗಳ ಮೇಲೆ ಬೆಕ್ಕಿನಂತೆ ಕೂರುವುದು. ನಂತರ ಉಸಿರನ್ನು ತೆಗೆದುಕೊಳ್ಳುತ್ತಾ, ಬಲಗಾಲನ್ನು ನಿಧಾನಕ್ಕೆ ಹಿಂದಕ್ಕೆ ನೇರವಾಗಿಸಿ, ಎತ್ತುವುದು. ತಲೆಯನ್ನು ಮೇಲಕ್ಕೆ ಎತ್ತಿ ದೃಷ್ಟಿಯನ್ನು ಸಹ ನೇರವಾಗಿಸಬೇಕು. ಸ್ವಲ್ಪ ಹೊತ್ತು ಹಾಗೇ ಇದ್ದು, ಉಸಿರನ್ನು ಬಿಡುತ್ತಾ ಎತ್ತಿದ ಕಾಲನ್ನು ನಿಧಾನವಾಗಿ ಇಳಿಸುವುದು. ಮತ್ತೆ ಇದೇ ರೀತಿ ಇನ್ನೊಂದು ಕಾಲನ್ನು ಅಂದರೆ ಎಡಗಾಲನ್ನು ಹಿಂದಕ್ಕೆ ಚಾಚಿ ಎತ್ತುವುದು. ತಲೆಯನ್ನು ಎತ್ತಿ ದೃಷ್ಟಿ ನೇರವಾಗಿಸಿ ಸ್ವಲ್ಪ ಹೊತ್ತು ಹಾಗೇ ಇರುವುದು. ನಂತರ ಕಾಲನ್ನು ಇಳಿಸುವುದು. ಅಭ್ಯಾಸವಾದ ಮೇಲೆ ಎರಡು ಮೂರು ಬಾರಿ ಹೀಗೇ ಮಾಡಿ, ವಿಶ್ರಮಿಸುವುದು.

    ತುಂಬಾ ಬೆನ್ನು ಅಥವಾ ಕುತ್ತಿಗೆ ನೋವು ಇರುವವರು ಮಾರ್ಜಾಲಾಸನ ಮಾಡುವುದು ಸೂಕ್ತವಲ್ಲ.

    ಮಕ್ಕಳು ಎತ್ತರವಾಗಲು ಈ ಸರಳ ಯೋಗಾಸನ ಸಹಕಾರಿ!

    ಸಿಎಂ ಮನೆ ಮುಂದೆ ಮಹಿಳೆಯ ಏಕಾಂಗಿ ಪ್ರತಿಭಟನೆ! ಕಾರಣ ಏನು ಗೊತ್ತೆ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts