ಪ್ರಾಯೋಗಿಕ ಅಧ್ಯಯನಕ್ಕೆ ಮಹತ್ವದ ಸ್ಥಾನ ನೀಡಿ

blank

ಚಿಕ್ಕೋಡಿ : ತಾಂತ್ರಿಕ ವಿದ್ಯಾಭ್ಯಾಸ ಹಾಗೂ ಉದ್ಯಮಕ್ಕೆ ಸಾಕಷ್ಟು ಅಂತರವಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಶ್ರಮಿಸಬೇಕು. ಪ್ರಾಯೋಗಿಕ ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದು ಬೆಂಗಳೂರಿನ ಕೊಡನೆಸ್ಟ್ ಕಂಪನಿಯ ಸಹಸಂಸ್ಥಾಪಕ ಪ್ರಭಾಕರನ್ ಜಿ. ಹೇಳಿದರು.

ಚಿಕ್ಕೋಡಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಈಚೆಗೆ ಬೆಂಗಳೂರಿನ ಎಸ್. ನಿಜಲಿಂಗಪ್ಪ ಕಾಲೇಜಿನಲ್ಲಿ ಹಮ್ಮಿಕೊಂಡ ಮಿಲನ- 2020 ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ, ಇಂಟರ್ನ್‌ಶಿಪ್ ಅನ್ನು ಶಿಕ್ಷಕರು ವರ್ಷಕ್ಕೊಮ್ಮೆ ಉದ್ಯಮದಲ್ಲಿ ಪಡೆದುಕೊಳ್ಳಲು ಕಾಲೇಜಿನ ಆಡಳಿತ ಮಂಡಳಿ ಅವಕಾಶ ನೀಡಬೇಕು ಎಂದರು.

ಹಳೆಯ ವಿದ್ಯಾರ್ಥಿಗಳು ತಮ್ಮ ಕಂಪನಿಗೆ ವಹಿಸಿರುವ ಪ್ರಾಜೆಕ್ಟ್‌ಗಳನ್ನು ಕಾಲೇಜಿನಲ್ಲಿರುವ ಪ್ರಸ್ತುತ ವಿದ್ಯಾರ್ಥಿಗಳಿಗೆ ನೀಡಿ ಅವುಗಳನ್ನು ಪರಿಹರಿಸಬೇಕು. ಯಾವುದೇ ಕಂಪನಿ ಆಯ್ಕೆಮಾಡುವ ಹಂತದಲ್ಲಿ ಕೇವಲ ಮನೋಭಾವ, ಮೂಲಜ್ಞಾನ ಮಾತ್ರ ಪರಿಶೀಲಿಸಲಾಗುವುದು. ವ್ಯಕ್ತಿ ತನ್ನ ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ಸಾಧಿಸಬೇಕಾದರೆ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಬೇರೆ ಬೇರೆಯಾಗಿಯೇ ಪರಿಗಣಿಸಬೇಕು ಎಂದರು.

ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದ ಸಂಬಂಧವನ್ನು ಮತ್ತಷ್ಟು ಅನ್ಯೋನ್ಯಗೊಳಿಸಲು ಹಳೆಯ ವಿದ್ಯಾರ್ಥಿಗಳ ಸಮಾವೇಶ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.

ಅಸೋಸಿಯೇಷನ್ ಅಧ್ಯಕ್ಷ ಸಂದೀಪ ಶಿವರುದ್ರನವರ, ವಿವಿಧ ಕಂಪನಿಗಳ ಮಾನವ ಸಂಪನ್ಮೂಲ ವ್ಯವಸ್ಥಾಪಕ ಅನಿಲ ತೆಲೆಕ್, ಅಭಿಷೇಕ ಕುಂಬಾರ, ಸರಸ್ವತಿ ಹಿರೇಮಠ, ಮಹಮದ್ ಖಾಲಂದರ ಖಾನ, ಅಜಯ ಯಾಲವರ, ವಿನಯ ಕಟಗೇರಿ, ನಿತಿನ ಕಮತೆ ಭಾಗವಹಿಸಿದ್ದರು.

ವಿಭಾಗ ಮುಖ್ಯಸ್ಥರಾದ ಸತೀಶ ಭೋಜಣ್ಣವರ, ವೀರಭದ್ರ ಬೂದ್ಯಾಳ, ಬಸವರಾಜ ಚೌಕಿಮಠ, ಪ್ರದೀಪ ಹೊದ್ಲೂರ, ಡಾ. ರುದ್ರಗೌಡ ಪಾಟೀಲ, ಸಚಿನ ಮೆಕ್ಕಳಕಿ ಉಪಸ್ಥಿತರಿದ್ದರು. ವಿಜಯ ಹಾಲಪ್ಪನವರ ಸ್ವಾಗತಿಸಿದರು. ವಿದ್ಯಾಶ್ರೀ ಮುತ್ತೆಪ್ಪಗೋಳ, ಪ್ರನಾಲಿ ಕಿಂಡಾಲಕರ ನಿರೂಪಿಸಿದರು. ದೀಪಕ ಜುಂಜರವಾಡ ವಂದಿಸಿದರು.

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…