More

    ಮಳೆ ಹಾನಿ ವರದಿ ಸರ್ಕಾರಕ್ಕೆ ಸಲ್ಲಿಸಿ

    ಔರಾದ್: ಕಮಲನಗರ, ಔರಾದ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾದ ಸ್ಥಳಕ್ಕೆ ಶಾಸಕ ಪ್ರಭು ಚವ್ಹಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಅಧಿಕಾರಿಗಳ ತಂಡದೊAದಿಗೆ ದಾಬಕಾ(ಸಿ), ಭಂಡಾರಕುಮಟಾ, ಚಿಮ್ಮೇಗಾಂವ, ಮದನೂರ, ಕಮಲನಗರ, ಹೊಳಸಮುದ್ರ, ಮುಧೋಳ(ಬಿ), ಹೆಡಗಾಪುರ, ಸಂತಪುರ, ಶೆಂಬೆಳ್ಳಿ, ವಡಗಾಂವ, ಚಿಂತಾಕಿ, ಯನಗುಂದಾ, ಕೊಳ್ಳೂರ, ಬೋರಾಳ, ಔರಾದ್(ಬಿ) ಸೇರಿ ಹಲವೆಡೆ ಸಂಚರಿಸಿ ಮನೆ ಮತ್ತು ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದರು.
    ಭಂಡಾರಕುಮಟಾ, ಹೆಡಗಾಪುರಗಳಲ್ಲಿ ಮಳೆಯಿಂದ ಶಿಥಿಲಗೊಂಡ ಮನೆಗಳಿಗೆ ಭೇಟಿ ನೀಡಿದರು. ತೀವ್ರ ಮಳೆಯಿಂದ ಕ್ಷೇತ್ರದ ಅನೇಕ ಕಡೆ ಮನೆಗಳು ಕುಸಿದಿವೆ. ಕಂದಾಯ ಅಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು.
    ಬೆಳೆ ಹಾನಿ ಕುರಿತು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಅಗತ್ಯ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.
    ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದಾಗ, ನಿರಂತರ ಮಳೆಯಿಂದ ಹಲವೆಡೆ ವಿದ್ಯುತ್ ಕಂಬ ಉರುಳಿವೆ, ತಂತಿ ಕಡಿತಗೊಂಡಿವೆ. ತಕ್ಷಣ ಸರಿಪಡಿಸಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಮದನೂರದಲ್ಲಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರಿಂದ ಆಗುತ್ತಿರುವ ತೊಂದರೆ ಬಗ್ಗೆ ಸ್ಥಳೀಯರು ಗಮನ ಸೆಳೆದರು. ತಕ್ಷಣವೇ ಸಂಬAಧಿಸಿದ ಗುತ್ತಿಗೆದಾರರಿಗೆ ದೂರವಾಣಿಯಲ್ಲಿ ಮಾತನಾಡಿ ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಬೇಕು ಎಂದು ಸೂಚಿಸಿದ ಚವ್ಹಾಣ್, ಅಧಿಕಾರಿಗಳೂ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದರು.
    ತಹಸೀಲ್ದಾರ್ ಮಲ್ಲಿಕಾರ್ಜುನ, ನಾಗರಾಜ ನಾಯಕ್, ಕಮಲನಗರ ತಾಪಂ ಇಒ ಶಿವಕುಮಾರ ಘಾಟೆ, ಸಹಾಯಕ ಕೃಷಿ ನಿರ್ದೇಶಕಧೂಳಪ್ಪ, ಅಧಿಕಾರಿಗಳಾದ ಸುಭಾಷ, ವೀರಶೆಟ್ಟಿ ರಾಠೋಡ್, ರವಿ ಕಾರಬಾರಿ, ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಶಿವಾಜಿರಾವ ಪಾಟೀಲ್ ಮುಂಗನಾಳ, ಸಚಿನ್ ರಾಠೋಡ್, ಯೋಗೇಶ ಪಾಟೀಲ್, ಪ್ರವೀಣ ಕಾರಬಾರಿ, ಕೇರಬಾ ಪವಾರ್, ಅಮೃತರಾವ ವಟಗೆ, ಧನರಾಜ ಗುಡ್ಡಾ, ಅಶೋಕ ಮೇತ್ರೆ, ಧೋಂಡಿಬಾ ನರೋಟೆ, ಶರಣಪ್ಪ ಪಂಚಾಕ್ಷರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts