More

    ಇನ್ನೊಂದು 250 ಕೋಟಿ ರೂ. ಚಿತ್ರದಲ್ಲಿ ಪ್ರಭಾಸ್​!

    ಮುಂಬೈ: ಪ್ರಭಾಸ್​ ಅಭಿನಯದ ಚಿತ್ರಗಳೆಂದರೆ, ಅದರ ಬಜೆಟ್​ ಮಿನಿಮಮ್​ 200 ಕೋಟಿ ದಾಟಬೇಕು ಎಂಬ ಅಲಿಖಿತ ನಿಯಮವೊಂದು ಚಿತ್ರರಂಗದ ವಲಯದಲ್ಲಿ ಶುರುವಾಗಿರುವ ಹಾಗೆ ಕಾಣುತ್ತಿದೆ. ಏಕೆಂದರೆ, ‘ಬಾಹುಬಲಿ’ ನಂತರ ಪ್ರಭಾಸ್​ ಅಭಿನಯದ ಯಾವುದೇ ಚಿತ್ರ ತೆಗೆದುಕೊಳ್ಳಿ. ಅದರ ಬಜೆಟ್​ 200 ಕೋಟಿ ದಾಟುತ್ತಿದೆ. ಈಗ ಆ ಸಾಲಿಗೆ ಇನ್ನೊಂದು ಹೊಸ ಚಿತ್ರ ಸೇರಿದೆ.

    ಇದನ್ನೂ ಓದಿ: ಹಿರಿಯ ಪೋಷಕ ನಟಿ ಬಿ.ಜಯಾ ಇನ್ನಿಲ್ಲ! ಕಣ್ಣೀರ ಕಡಲಲ್ಲಿ ಚಿತ್ರರಂಗ

    ಈಗಾಗಲೇ ಪ್ರಭಾಸ್​, ‘ರಾಧೇ ಶ್ಯಾಮ್​’, ‘ಸಲಾರ್’ ಮತ್ತು ‘ಆದಿಪುರುಷ್​’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದ್ದು, ಯಾವುದೂ ಮುಕ್ತಾಯವಾಗಿಲ್ಲ. ಇದೆಲ್ಲದರ ಜತೆಗೆ, ಅಮಿತಾಭ್​ ಬಚ್ಚನ್​ ಮತ್ತು ದೀಪಿಕಾ ಪಡುಕೋಣೆ ಜತೆಗೆ ಒಂದು ಸೈನ್ಸ್​ ಫಿಕ್ಷನ್​ ಚಿತ್ರದಲ್ಲಿ ನಟಿಸುವುದಕ್ಕೆ ಪ್ರಭಾಸ್​ ಒಪ್ಪಿಕೊಂಡಿದ್ದು, ಆ ಚಿತ್ರದ ಚಿತ್ರೀಕರಣ ಮುಂದಿನ ವರ್ಷಕ್ಕೆ ಹೋಗಿದೆ.

    ಈ ಮಧ್ಯೆ, ಅವರು ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿರುವ ಸುದ್ದಿ ಇದೆ. ಈ ಆಕ್ಷನ್​ ಚಿತ್ರವನ್ನು ‘ವಾರ್​’ ಮತ್ತು ‘ಪಠಾಣ್​’ ಖ್ಯಾತಿಯ ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದು, ಈ ಚಿತ್ರದ ಬಜೆಟ್​ ಸಹ 250 ಕೋಟಿ ಎಂದು ಹೇಳಲಾಗುತ್ತಿದೆ. ಸದ್ಯ ಪ್ರಭಾಸ್​ ಮತ್ತು ಸಿದ್ಧಾರ್ಥ್​ ಇಬ್ಬರೂ ಬೇರೆಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ, ಅವೆಲ್ಲ ಮುಗಿಸಿಯೇ ಈ ಚಿತ್ರಕ್ಕೆ ಕೈಹಾಕುತ್ತಾರಂತೆ. ಅಂದರೆ, ಈ ಚಿತ್ರ ಪ್ರಾರಂಭವಾಗುವದೇನಿದ್ದರೂ 2023 ಆದರೆ ಆಶ್ಚರ್ಯವಿಲ್ಲ.

    ಇದನ್ನೂ ಓದಿ: ‘ಡಾರ್ಲಿಂಗ್’ ಕೃಷ್ಣ ಹುಟ್ಟುಹಬ್ಬಕ್ಕೆ ‘ಶುಗರ್ ಫ್ಯಾಕ್ಟರಿ’ಯಿಂದ ಈ ಉಡುಗೊರೆ

    ಅಂದಹಾಗೆ, ಈ ಚಿತ್ರದಲ್ಲಿ ಪ್ರಭಾಸ್​ ಮೊದಲ ಬಾರಿಗೆ ರಾ ಏಜೆಂಟ್​ ಪಾತ್ರವನ್ನು ನಿರ್ವಹಿಸುತ್ತಿದ್ದು, ಅವರ ಕೆರಿಯರ್​ನಲ್ಲೇ ಇದೊಂದು ವಿಭಿನ್ನ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಸ್ಪೈ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಸಿದ್ಧಾರ್ಥ್​ ದೊಡ್ಡ ಹೆಸರು ಮಾಡಿದ್ದು, ಈ ಚಿತ್ರವನ್ನು ಸಹ ದೇಶ-ವಿದೇಶಗಳ ಅದ್ಭುತ ಲೊಕೇಶನ್​ಗಳಲ್ಲಿ ಸೆರೆಹಿಡಿಯಲಾಗುತ್ತದಂತೆ.

    ಹೃತಿಕ್​ ಜತೆಗೆ ನಟಿಸಲು ಒಲ್ಲೆ ಎಂದ ಮನೋಜ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts