ಹೈದರಾಬಾದ್: ಬಾಹುಬಲಿ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ನಟ ಪ್ರಭಾಸ್ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ತಮ್ಮ ಕನಸಿನ ಕಾರನ್ನು ಪ್ರಭಾಸ್ ಅವರು ಅದ್ಧೂರಿಯಾಗಿ ಆಹ್ವಾನ ಮಾಡಿದ್ದಾರೆ.
ಪ್ರಭಾಸ್, ನ್ಯೂ ಲ್ಯಾಂಬೋರ್ಗಿನಿ ಅವೆಂಟಡರ್ ಎಸ್ ಹೆಸರಿನ ಐಷಾರಾಮಿ ಕಾರಿನ ಒಡೆಯರಾಗಿದ್ದಾರೆ. ಅದರ ಬೆಲೆ ಎಷ್ಟಿರಬಹುದೆಂದು ಗೆಸ್ ಮಾಡ್ತೀರಾ? ಅಂದಾಜು ಸಿಗುತ್ತಿಲ್ಲವಾ? ಹಾಗಾದ್ರೆ ನಾವೇ ಅದರ ಬೆಲೆ ಎಷ್ಟು ಅಂತಾ ಹೇಳ್ತೀವಿ ಮುಂದೆ ಓದಿ..
ಇದನ್ನೂ ಓದಿರಿ: ಪತ್ನಿ ಸರಿಯಿಲ್ಲ ಎಂದು ಕಣ್ಣೀರುಹಾಕಿ ಸಂಬಂಧ ಬೆಳೆಸಿದ- ಎಲ್ಲವನ್ನೂ ಒಪ್ಪಿಸಿ ಮೋಸ ಹೋದೆ ಮೇಡಂ…
ಅಂದಹಾಗೆ ಹೊಸ ಕಾರಿನ ಬೆಲೆ ಬರೋಬ್ಬರಿ 6 ಕೋಟಿ ರೂಪಾಯಿ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಭಾಸ್ ಕಾರಿನದ್ದೇ ಸದ್ದಾಗಿದೆ. ಅಲ್ಲದೆ, ನಿಧಾನವಾಗಿ ಕಾರು ಓಡಿಸಿ ಎಂದು ನೆಚ್ಚಿನ ನಟನಿಗೆ ಅಭಿಮಾನಿಗಳ ಜಾಲತಾಣ ಮೂಲಕವೇ ಮನವಿ ಮಾಡಿದ್ದಾರೆ. ಹೀಗಾಗಿ ಸಾಕಷ್ಟು ಕಾಮೆಂಟ್ಗಳು ವ್ಯಕ್ತವಾಗಿವೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಹುನಿರೀಕ್ಷಿತ ರಾಧೆಶ್ಯಾಮ್ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಜುಲೈ 30 2021ಕ್ಕೆ ತೆರೆಗೆ ಬರಲಿದೆ. ಇದರೊಂದಿಗೆ ಸಲಾರ್ ಚಿತ್ರದಲ್ಲೂ ಪ್ರಭಾಸ್ ನಟಿಸಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆ ಆಗಲಿದೆ. (ಏಜೆನ್ಸೀಸ್)
ಫೋನ್ನಲ್ಲಿ ಬಾಡಿಗೆದಾರನ ಮಾತು ಕೇಳಿ ಆತನ ಮನೆಗೆ ಹೋದ ಮಾಲೀಕನಿಗೆ ಕಾದಿತ್ತು ಬಿಗ್ ಶಾಕ್!
ಕಾಫಿ ಕೃಷಿಯಲ್ಲಿ ಧರ್ಮರಾಜ್ ಖುಷಿ; ಒಂದು ಎಕರೆ ಜಮೀನಿನಲ್ಲಿ 1 ಟನ್ ಕಾಫಿ ಕೊಯ್ಲು..
ಆರೋಪಿ ಜತೆಗೆ 16 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು ಕಟ್ಟಿಹಾಕಿ ಮೆರವಣಿಗೆ: ಕುಟುಂಬಸ್ಥರು ಭಾಗಿ!