More

    ಅಧಿಕಾರ ರಾಜಕಾರಣದಿಂದಾಗಿ ಜಾತಿ ವ್ಯವಸ್ಥೆ ಗಟ್ಟಿಗೊಳ್ಳುತ್ತಿದೆ

    ಚಿತ್ರದುರ್ಗ: ಇವತ್ತಿನ ಅಧಿಕಾರ ಕೇಂದ್ರಿತ ರಾಜಕಾರಣ,ಜಾತಿ ವ್ಯವಸ್ಥೆಯನ್ನು ಹೆಚ್ಚು,ಹೆಚ್ಚಾಗಿ ಗಟ್ಟಿಗೊಳಿಸುತ್ತಿದೆಯೇ ಹೊರತು,ಆರ್ಥಿಕಾಭಿವೃದ್ಧಿ, ಜೀವಶಾಸ್ತ್ರಾಧಾರಿತ ಆಳ ಪರಿಸರ ಪ್ರಜ್ಞೆಯಿಂದ ಕೂಡಿಲ್ಲವೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ,ಹಿರಿಯ ಸಾಹಿತಿ ಪ್ರೊ.ರಾಘವೇಂ ದ್ರ ಪಾಟೀಲ ಹೇಳಿದರು.

    ಚಿತ್ರದುರ್ಗದ ಮುಕ್ತ ವೇದಿಕೆ ಮತ್ತು ದಾವಣಗೆರೆ ಏಕಾಂತಗಿರಿ ಪ್ರಕಾಶನ ಸಂಸ್ಥೆಯಿಂದ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಲೇಖಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಅವರ ‘ಬೋಧಿವೃಕ್ಷದ ಕೆಳಗೆ’ಕೃತಿ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಿ ಮಾತನಾ ಡಿ,ಅಧಿಕಾರಕ್ಕಾಗಿ ಜಾತಿ ರಾಜಕಾರಣ ಕಾಣುತ್ತಿದ್ದರೂ,ಆರೋಗ್ಯ ಪೂರ್ಣ ಸಾಮಾಜಿಕ ಜೀವನ ನೆಲೆಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ನೈತಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಸುಸ್ಥಿರ ಮತ್ತು ಸಹನೀಯ ಅಭಿವೃದ್ಧಿ ಸಾಧ್ಯತೆಗಳ ವಿವರಣೆಯನ್ನು 1998ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕೃತ ಈ ಕೃತಿಯಲ್ಲಿ ಕಾಣಬಹುದಾಗಿದೆ ಎಂದರು.

    ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಲಿಂಗಪ್ಪ ಅವರು ಮಾತನಾಡಿ,ಅರ್ಥಶಾಸ್ತ್ರಕ್ಕೆ ಜೀವ ಕೊಡುವ ಕೆಲಸವನ್ನು ಕಳೆದ ಎರಡೂವರೆ ದಶಕ ಗ ಳಿಂದ ಮಲ್ಲಿಕಾರ್ಜುನಪ್ಪ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಬೋಧಿವೃಕ್ಷದ ಪುಸ್ತಕ ಓದಿದರೆ 25 ವರ್ಷಗಳ ಹಿಂದಿನ ದೇಶದ ಆರ್ಥಿಕ ಪರಿಸ್ಥಿತಿಯ ಅರಿವಾಗುತ್ತದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಪ್ರೊ.ಚಂದ್ರಶೇಖರ ತಾಳ್ಯ ಮಾತನಾಡಿ,ಈಗಿನ ಅರ್ಥಶಾಸ್ತ್ರ ಬಂಡವಾಳ ಕೇಂದ್ರಿತವಾಗಿದೆ. ಅರ್ಥ ಶಾಸ್ತ್ರ ಹೇಗಿರಬೇಕೆಂದು 12 ಶತಮಾನದಲ್ಲೇ ಬಸವಣ್ಣ ಹೇಳಿದ್ದಾರೆ. ಕಲುಷಿತ ಮನಸ್ಸನ್ನು ಮೊದಲು ಸ್ವಚ್ಚಗೊಳಿಸಿಕೊಳ್ಳಬೇಕು. ಆರ್ಥಿಕ, ರಾಜಕೀಯ,ಧಾರ್ಮಿಕ ರಂಗ ಹೊಲೆಸೆದ್ದು ಹೋಗಿದೆ ಎಂದು ಬೇಸರಿಸಿದರು.

    ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ,ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್,ಮಲ್ಲಿಕಾರ್ಜುನಪ್ಪ, ಕೃಷ್ಣಮೂರ್ತಿ,ಕವಿ ರಾಜೇಂದ್ರ ಪ್ರಸಾದ್ ಮಾತನಾಡಿದರು.ಜಿ.ಎಸ್.ಉಜ್ಜಿನಪ್ಪ ಪ್ರಾರ್ಥಿಸಿದರು. ಕೃತಿ ಪ್ರಕಾಶಕ ಡಾ.ಓಬಳೇಶ್ ಸ್ವಾಗತಿಸಿ,ಪ್ರೊ.ಚನ್ನಬಸಪ್ಪ ನಿರೂಪಿಸಿ ವಂದಿಸಿದರು.
    ಡಾ.ಲೋಕೇಶ್‌ಅಗಸನಕಟ್ಟೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ,ಸಿ.ಬಿ.ಶೈಲಾ,ಪ್ರಾಧ್ಯಾಪಕ ಡಾ. ಸಂಜೀವ ಕುಮಾರ ಪೋತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts