More

    ಸಾಂಸ್ಕೃತಿಕ ಭವನ ಉದ್ಘಾಟನೆ ಮುಂದೂಡಿಕೆ

    ಮುಳಗುಂದ: ಸಮೀಪದ ನೀಲಗುಂದ ಗ್ರಾಮದಲ್ಲಿ ಶನಿವಾರ ಉದ್ದೇಶಿಸಲಾದ ಸಾಂಸ್ಕೃತಿಕ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಗ್ರಾಮಸ್ಥರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ರದ್ದು ಪಡಿಸಲಾಯಿತು.

    ಗ್ರಾಮದಲ್ಲಿ ಅಂದಾಜು 10 ಲಕ್ಷ ರೂ.ಗಳ ವೆಚ್ಚದಲ್ಲಿ 2017-18ರ ವಿಶೇಷ ಘಟಕ ಯೋಜನೆಯಲ್ಲಿ ನಿರ್ವಿುತಿ ಕೇಂದ್ರದಿಂದ ಸಾಂಸ್ಕೃತಿಕ ಭವನ ನಿರ್ವಿುಸಲಾಗಿದೆ. ಈ ಕಟ್ಟಡದ ಉದ್ಘಾಟನೆ ಹಾಗೂ ವಾಚನಾಲಯದ ಭೂಮಿ ಪೂಜೆಯನ್ನು ಶನಿವಾರ ನಿಗದಿಪಡಿಸಲಾಗಿತ್ತು. ಆದರೆ, ಸಾಂಸ್ಕೃತಿಕ ಭವನದ ಉದ್ಘಾಟನೆಯ ಮುನ್ನಾದಿನ ಸರ್ಕಾರದ ಯಾವುದೇ ಅನುಮತಿಯಿಲ್ಲದೆ ಹಾಗೂ ಜಿಪಂ ಸಭೆಯಲ್ಲಿ ಠರಾವು ಪಾಸ್ ಮಾಡದೇ ಕಾಂಗ್ರೆಸ್ ಕಾರ್ಯಕರ್ತರು ದಿ. ರವಿಕುಮಾರ ಇನಾಮತಿ ಸಾಂಸ್ಕೃತಿಕ ಭವನ ಎಂದು ನಾಮಕರಣ ಮಾಡಿದ್ದಾರೆ. ಇದನ್ನು ಖಂಡಿಸಿ ಬಿಜೆಪಿ ಅಲ್ಪಸಂಖ್ಯಾತರ ಯುವಮೋರ್ಚಾದ ಅಧ್ಯಕ್ಷ ರವಿ ವಗ್ಗನವರ ಹಾಗೂ ಇತರರು ವಿರೋಧ ವ್ಯಕ್ತ ಪಡಿಸಿದರು. ಈ ವೇಳೆ ಗದಗ ಎಪಿಎಂಸಿ ಸದಸ್ಯ ಅಪ್ಪಣ್ಣ ಇನಾಮತಿಯವರ ಜತೆ ವಾಗ್ವಾದ ನಡೆಯಿತು. ಬಳಿಕ ಶಾಸಕ ಎಚ್.ಕೆ. ಪಾಟೀಲರ ನಿರ್ಣಯದಂತೆ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಯಿತು. ನಂತರ ಶಾಸಕರು ವಾಚನಾಲಯ ಕಟ್ಟಡದ ಅಡಿಗಲ್ಲು ಸಮಾರಂಭವನ್ನಷ್ಟೇ ನೆರವೇರಿಸಿದರು.

    ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ (ಪಾಟೀಲ), ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ತಾಪಂ ಅಧ್ಯಕ್ಷ ವಿದ್ಯಾಧರ ದೊಡಮನಿ, ಜಿಪಂ ಸದಸ್ಯರಾದ ಸಿದ್ದು ಪಾಟೀಲ, ತಾಪಂ ಸದಸ್ಯ ಮುತ್ತಪ್ಪ ದೊಡಮನಿ, ಗ್ರಾಪಂ ಸದಸ್ಯರಾದ ಪ್ರವೀಣ ಬಂಗಾರಿ, ಸುನೀಲ ಬಂಗಾರಿ, ಕುಬೇರಡ್ಡಿ ಬಂಗಾರಿ, ನವೀನ ಬಂಗಾರಿ ಇತರರಿದ್ದರು.

    ಸರ್ಕಾರದ 10 ಲಕ್ಷ ರೂ.ಗಳ ಅನುದಾನದಲ್ಲಿ ಕಟ್ಟಲಾದ ಸಾಂಸ್ಕೃತಿಕ ಭವನಕ್ಕೆ ರಾತ್ರೋರಾತ್ರಿ ದಿ. ರವಿ ಇನಾಮತಿಯವರ ಹೆಸರನ್ನು ನಾಮಕರಣ ಮಾಡಿದ್ದನ್ನು ಬಿಜೆಪಿ ಕಾರ್ಯಕರ್ತರು ತಡೆದಿದ್ದು ಸೂಕ್ತವಾಗಿದೆ. ಇದರಲ್ಲಿ ಕಾಂಗ್ರೆಸ್​ನ ಗೂಂಡಾಗಿರಿ ಎದ್ದು ಕಾಣುತ್ತದೆ.

    | ಅನಿಲ ಮೆಣಸಿನಕಾಯಿ, ಬಿಜೆಪಿ ಯುವ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts