More

    ಯೋಗಾಥಾನ್ ಗಿನ್ನಿಸ್ ದಾಖಲೆ ಕಾರ್ಯಕ್ರಮ ಮುಂದೂಡಿಕೆ

    ಚಿತ್ರದುರ್ಗ:ಕೇಂದ್ರದ ಆಯುಷ್ ಮಂತ್ರಾಲಯದ ಸಹಯೋಗದೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೆ.17 ರಂದು ಬೆಳಗ್ಗೆ 9 ಗಂಟೆಗೆ ನಗರದಲ್ಲಿ ಆಯೋಜಿಸಿದ್ದ ಯೋಗಥಾನ್-2022ರ ಕಾರ‌್ಯಕ್ರಮ ಮುಂದೂಡಲಾಗಿದೆ.

    ಗಿನ್ನಿಸ್ ದಾಖಲೆ ಉದ್ದೇಶದಿಂದ ಏರ್ಪಡಿಸಿದ್ದ ಈ ಕಾರ‌್ಯಕ್ರಮವನ್ನು ವಿಧಾನ ಮಂಡಲದ ಅಧಿವೇಶನ,ವಿಶ್ವವಿದ್ಯಾಲಯ/ಕಾಲೇಜುಗಳ ಪರೀಕ್ಷೆಗಳು ಹಾಗೂ ಮಳೆ ಆಗುವ ಸಾಧ್ಯತೆ ಹಿನ್ನಲೆಯಲ್ಲಿ ಮುಂದೂಡಲಾಗಿದೆ.
    ಆದ್ದರಿಂದ ಯೋಗಥಾನ್‌ಗೆ ನೋಂದಣಿಯಾಗಿದ್ದ ಎಲ್ಲ ಶಾಲಾ-ಕಾಲೇಜುಗಳು,ಯೋಗ ತರಬೇತುದಾರರು,ಯೋಗ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಮುಂದುವರಿಸಬೇಕು.

    ಕಾರ‌್ಯಕ್ರಮದ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದೆಂದು ಕಾರ‌್ಯಕ್ರಮದ ಜಿಲ್ಲಾ ಸಂಯೋಜಕ ಬಿ.ಎಸ್.ಮಂಜುನಾಥ್,ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.

    ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ,ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ.ಗಿರೀಶ್,ಡಾ.ಶಿವಕುಮಾ ರ್,ಶಿಕ್ಷಣ ಇಲಾಖೆ ಅಧಿಕಾರಿ ಪರಶುರಾಮಪ್ಪ,ನೆಹರು ಯುವ ಕೇಂದ್ರದ ಅಧಿಕಾರಿ ಸುಹಾಸ್,ಭಾರತೀಯ ಯೋಗ ಶಿಕ್ಷಣ ಸಂಸ್ಥೆ,ಶ್ರೀ ಪತಂಜಲಿ ಯೋಗ ಸಂಸ್ಥೆ ಸೇರಿದಂತೆ ನಾನಾ ಯೋಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಯೋಗ ಶಿಕ್ಷಕರು ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts