More

    ಆರೋಗ್ಯ ಚೆನ್ನಾಗಿದ್ದರೆ ಉತ್ತಮ ಓದು ಸಾಧ್ಯ

    ಮಸ್ಕಿ: ವಿದ್ಯಾರ್ಥಿಗಳು ಓದಿನೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಉತ್ತಮ ಆರೋಗ್ಯ ಹೊಂದಿದ್ದರೆ ವಿದ್ಯಾಭ್ಯಾಸ ಚೆನ್ನಾಗಿ ಮಾಡಬಹುದು ಎಂದು ಆಯುಷ್ ಇಲಾಖೆ ವೈದ್ಯ ಮಹಮ್ಮದ್ ಪಾಷಾ ಹೇಳಿದರು.

    ಪಟ್ಟಣದ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಆಯುಷ್ ಇಲಾಖೆ ಮತ್ತು ಮಟ್ಟೂರಿನ ಆರ್ಯುವೇದ ಚಿಕಿತ್ಸಾ ಕೇಂದ್ರದಿಂದ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ವೈದ್ಯರಾದ ಡಿ.ಎಚ್.ಹುಲ್ಲೂರು ಹಾಗೂ ಹೀರಾಬಾಯಿ, ಮನೆ ಮದ್ದುಗಳ ಬಗ್ಗೆ ಮಾಹಿತಿ ನೀಡಿದರು. ಋತುಮಾನಕ್ಕೆ ಅನುಗುಣವಾಗಿ ಆಹಾರ ಸೇವನೆ, ವೈಯಕ್ತಿಕ ಶುಚಿತ್ವ ಕುರಿತು ಜಾಗೃತರಾಗಿ ಉತ್ತಮ ಜೀವನ ಶೈಲಿ ರೂಡಿಸಿಕೊಳ್ಳಬೇಕು ಎಂದರು. ವಸತಿ ಶಾಲೆಯ ಪ್ರಚಾರ್ಯ ಚನ್ನಬಸಪ್ಪ ಎಚ್.ನರ್ಸಿಂಗ್ ಅಧಿಕಾರಿ ಪ್ರಶಾಂತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts