More

    ಇದು ಕಾರ್ಯಸಾಧುವಲ್ಲ, ಅಂತಿಮ ಸೆಮಿಸ್ಟರ್​ ಪರೀಕ್ಷೆ ಮುಂದೂಡಿ; ಮೋದಿಗೆ ಪತ್ರ ಬರೆದು ಒತ್ತಾಯ

    ನವದೆಹಲಿ: ಅಂತಿಮ ಸೆಮಿಸ್ಟರ್​ ಹಾಗೂ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲೇಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿದೆ. ಸೆಪ್ಟಂಬರ್​ ಒಳಗಾಗಿ ಈ ಪರೀಕ್ಷೆಗಳನ್ನು ಮುಗಿಸಬೇಕೆಂದು ಸ್ಪಷ್ಟಪಡಿಸಿದೆ.

    ಆದರೆ, ಹಲವು ರಾಜ್ಯಗಳು ಇದನ್ನು ವಿರೋಧಿಸಿವೆ. ಅಂತೆಯೇ ಮಹಾರಾಷ್ಟ್ರ ಕೂಡ ತೀವ್ರವಾಗಿ ವಿರೋಧಿಸಿದೆ. ಆದರೂ ಕೇಂದ್ರ ತನ್ನ ನಿಲುವಿನಿಂದ ಹಿಂದೆ ಸರಿದಿಲ್ಲ. ಪರೀಕ್ಷೆ ನಡೆಸಲೇ ಬೇಕಾಗಿರುವುದರಿಂದ ವಿವಿಗಳು ದಿನಾಂಕಗಳನ್ನು ಪ್ರಕಟಿಸಿ ಸಿದ್ಧತೆ ನಡೆಸಿವೆ.

    ಇದನ್ನೂ ಓದಿ; ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ಸಾವು? ಇನ್ನು ಸಹೋದರಿಯದ್ದೇ ಆಧಿಪತ್ಯ? 

    ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದು ಕಾರ್ಯಸಾಧುವಲ್ಲ, ಹೀಗಾಗಿ ಅವುಗಳನ್ನು ಮುಂದೂಡಿ ಎಂದು ಶಿವಸೇನೆ ನಾಯಕ, ಸಚಿವ ಆದಿತ್ಯ ಠಾಕ್ರೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ಮಹಾರಾಷ್ಟ್ರ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ರೆಡ್​ ಜೋನ್​ಗಳು ಜಾಸ್ತಿಯಾಗುತ್ತಿವೆ. ಸಾರ್ವಜನಿಕ ಸಾರಿಗೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಹೆಚ್ಚಿನ ಜನರು ಮನೆಯಿಮದಲೇ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ವಿವಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಪರೀಕ್ಷೆಗಳನ್ನು ನಡೆಸಲು ಮುಂದಾಗಿವೆ. ಇದು ಸಮಂಜಸವಲ್ಲ, ಕಾರ್ಯಸಾಧುವೂ ಅಲ್ಲ. ಹೀಗಾಗಿ ಅವುಗಳನ್ನು ಮುಂದೂಡಿ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿ; ವಾಹನ ಸವಾರರಿಗೆ ಶುಭ ಸುದ್ದಿ; ಡಿ.31ರವರೆಗೂ ಲೈಸೆನ್ಸ್​, ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ 

    ಒಂದೆಡೆ, ಕರೊನಾ ಹೆಚ್ಚಳ ಹಿನ್ನೆಲೆ ಶಾಲಾ- ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಹೀಗಾಗಿ ಪರೀಕ್ಷೆ ನಡೆಸುವುದರ ಬಗ್ಗೆ ಮರುಪರಿಶೀಲನೆ ಮಾಡಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

    ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್​ಲಾಕ್​ 4.0 ಹೀಗಿರುತ್ತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts