More

    ರಚಿತಾ ಹುಟ್ಟುಹಬ್ಬಕ್ಕೆ ‘ಲಿಲ್ಲಿ’ ತಂಡದ ಗಿಫ್ಟ್​!

    ಬೆಂಗಳೂರು: ಕನ್ನಡದಲ್ಲಿ ಸದ್ಯಕ್ಕೆ ಮೂರ್ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿರುವ ರಚಿತಾ ರಾಮ್​ , ‘ಲಿಲ್ಲಿ’ ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಈ ವರ್ಷದ ಆರಂಭದಲ್ಲೇ ಆಗಿತ್ತು. ಆದರೆ, ಆ ಚಿತ್ರದ ವಿಶೇಷತೆ ಏನು ಎಂಬ ವಿಷಯವನ್ನು ಚಿತ್ರತಂಡದವರು ಹೇಳಿಕೊಂಡಿರಲಿಲ್ಲ.

    ಇದನ್ನೂ ಓದಿ: ಬಂಧನ ಭೀತಿಯಲ್ಲಿ ತನಗೆ ಕರೊನಾ ಇದೆಯೆಂದು ಅನುಶ್ರೀ ಡ್ರಾಮ ಮಾಡ್ತಾರಂತೆ!

    ಇನ್ನೇನು, ಚಿತ್ರ ಶುರುವಾಗಬೇಕು ಎನ್ನುವಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ ಚಿತ್ರೀಕರಣ ಮುಂದೂಡಲಾಗಿತ್ತು. ಸದ್ಯ ರಚಿತಾ ಒಂದೆರೆಡು ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ, ಅವೆಲ್ಲಾ ಮುಗಿಸಿ, ‘ಲಿಲ್ಲಿ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಮಧ್ಯೆ, ರಚಿತಾ ಹುಟ್ಟುಹಬ್ಬದ ಅಂಗವಾಗಿ, ಚಿತ್ರತಂಡದವರು ಮೊದಲ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

    ‘ಲಿಲ್ಲಿ’ ಚಿತ್ರದ ಪೋಸ್ಟರ್​ಗಳನ್ನು ನೋಡುತ್ತಿದ್ದರೆ, ಇದೊಂದು ಪಕ್ಕಾ ಸೈನ್ಸ್​ ಫಿಕ್ಷನ್​ ಚಿತ್ರ ಇರಬಹುದು ಎಂದನಿಸುತ್ತದೆ. ಆದರೆ, ಚಿತ್ರತಂಡದವರು ಮಾತ್ರ ಇದುವರೆಗೂ, ಕಥೆ ಏನಿರಬಹುದು ಮತ್ತು ಇದರಲ್ಲಿ ರಚಿತಾ ಅವರ ಪಾತ್ರ ಏನಾಗಿರಬಹುದು ಎಂಬ ರಹಸ್ಯವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ.

    ಇದನ್ನೂ ಓದಿ: ಹಸ್ತಮೈಥುನ ದೃಶ್ಯದಲ್ಲಿ ನಟಿಸಲು ಶ್ರುತಿ ಹಾಸನ್ ರೆಡಿ?: ಯಾವ ಚಿತ್ರ ಎಂಬುದರ ಕುತೂಹಲಕರ ಮಾಹಿತಿ ಇಲ್ಲಿದೆ

    ‘ಲಿಲ್ಲಿ’ ಚಿತ್ರವನ್ನು ವಿಜಯ್​ ಗೌಡ ಎನ್ನುವವರು ನಿರ್ದೇಶನ ಮಾಡುತ್ತಿದ್ದು, ನಾಗರಾಜ್​ ಮತ್ತು ಎಸ್​. ಸುಬ್ರಮಣಿ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ‘ರಂಗಿತರಂಗ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಲಿಯಂ ಡೇವಿಡ್​, ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಲಿದ್ದಾರೆ. ಇನ್ನು ವೀರೀಶ್​ ಗೌಡ ಎನ್ನುವವರು ಚಿತ್ರಕ್ಕೆ ಮ್ಯೂಸಿಕ್​ ಕಂಪೋಸ್​ ಮಾಡುತ್ತಿದ್ದಾರೆ.

    VIDEO| ಜೂ.ಅಂಬಿ ಬರ್ತ್​ಡೇ ಸಂಭ್ರಮಕ್ಕೆ ಸಿಕ್ತು ಸ್ಪೆಷಲ್​ ಗಿಫ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts