More

    ಇನ್ನಾದರೂ ನಿಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ರಯ್ಯಾ..

    ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ಈಗಾಗಲೇ ಸಿದ್ಧವಾಗಿರುವ ಸಿನಿಮಾಗಳು ಓಟಿಟಿ ವೇದಿಕೆಯಲ್ಲಿ ಬಿಡುಗಡೆಗೆ ತಯಾರಿ ನಡೆಸಿವೆ. ಹೀಗಿರುವಾಗಲೇ ಇದೀಗ ನಿರ್ಮಾಪಕರ ಸಂಘ ಎ ಲಿಸ್ಟ್​ನಲ್ಲಿರುವ ಕಲಾವಿದರಿಗೆ ಮುಂದಿನ ದಿನಗಳಲ್ಲಿ ಸಂಭಾವನೆ ಕಡಿಮೆ ಮಾಡಿಕೊಳ್ಳಲು ಮನವಿ ಮಾಡಿದೆ.

    ದನ್ನೂ ಓದಿ: ಇನ್ನಷ್ಟು ಕೋಟಿ ಬಾಚಿಕೊಂಡ ಪ್ರಿಯಾಂಕಾ … ಅಮೇಜಾನ್​ ಜತೆಗೆ ಹೊಸ ಡೀಲ್

    ‘ಸದ್ಯ ನಾವೆಲ್ಲ ಮೊದಲಿನಂತಿಲ್ಲ. ಈಗಿನ ಜಗತ್ತೇ ಬೇರೆಯದಾಗಿದೆ. ಹಣಕಾಸಿನ ವ್ಯವಹಾರಗಳು ತಲೆಕೆಳಗಾಗಿವೆ. ಹಾಗಾಗಿ ಎ ಲಿಸ್ಟ್ ಸಿನಿಮಾ ಕಲಾವಿದರು, ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಈ ಹಿಂದೆ ನೀಡುತ್ತಿದ್ದ ಸಂಭಾವನೆಯನ್ನು ಈಗ ನೀಡಲು ಆಗುವುದಿಲ್ಲ. ಹಾಗಾಗಿ ಸಂಭಾವನೆಯಲ್ಲಿ ಕಡಿತ ಮಾಡಿಕೊಳ್ಳಲೇಬೇಕು‘ ಎಂದು ಮನವಿ ಮಾಡಿದೆ.
    ನಿರ್ಮಾಪಕರ ಈ ಮನವಿಗೆ ಈಗಾಗಲೇ ಬಿಟೌನ್​ನ ಒಂದಷ್ಟು ಸ್ಟಾರ್ ಕಲಾವಿದರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ನಿರ್ಮಾಪಕರ ಉಳಿವಿಗಾಗಿ ಕೈ ಜೋಡಿಸಿದ್ದು, ಸಂಭಾವನೆ ಕಡಿತ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇನ್ನು ಕೆಲವರು, ನಿರ್ಮಾಣದಲ್ಲಿ ಸಾಥ್ ನೀಡಿ, ಬಂದ ಆದಾಯದಲ್ಲಿ ಸರಿಸಮ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ‘777 ಚಾರ್ಲಿ’ ಬಳಗ ಸೇರಿದ ದಾನಿಶ್​ ಸೇಠ್​

    ಒಟ್ಟಿನಲ್ಲಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾಕ್ಷೇತ್ರ ಅಕ್ಷರಶಃ ನೆಲಕಚ್ಚಿದೆ. ಶೂಟಿಂಗ್​ ಶುರುವಾದರೂ, ಚಿತ್ರಮಂದಿರದಲ್ಲಿ ಸಿನಿಮಾ ಯಾವಾಗ ಬಿಡುಗಡೆ ಎಂಬುದು ಯಾರಿಗೂ ಗೊತ್ತಿಲ್ಲ. ಒಂದು ವೇಳೆ ಬಿಡುಗಡೆಗೆ ಅನುಮತಿ ನೀಡಿದರೂ, ಜನರನ್ನು ಚಿತ್ರಮಂದಿರಕ್ಕೆ ಕರೆತರುವುದಾದರೂ ಹೇಗೆ ಎಂದು ತಲೆಕೆಡಿಸಿಕೊಂಡು ಕುಳಿತಿದ್ದಾರೆ ಸಿನಿಮಾದವರು. (ಏಜೆನ್ಸೀಸ್​)

    ಕಮಾಂಡೋ ಪರವಾಗಿ ಕಂಗನಾ ಬ್ಯಾಟಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts