More

    ಕನ್ನಡ ಬರಿ ಭಾಷೆಯಲ್ಲ ಅದು ಸಂಸ್ಕೃತದ ಆಗರ: ಪೋರ್ಟ್​ಲ್ಯಾಂಡ್ ಕನ್ನಡ ಕೂಟದ ನಾಡಹಬ್ಬದಲ್ಲಿ ನಾಗಾಭರಣ

    ಪೋರ್ಟ್​ಲ್ಯಾಂಡ್​: ಅಮೆರಿಕದ ಪೋರ್ಟ್​ಲ್ಯಾಂಡ್ ಕನ್ನಡ ಕೂಟ ನಾಡ ಹಬ್ಬವನ್ನು ಇಂದು ಆಚರಿಸಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡದ ಅಘೋಷಿತ ರಾಜ್ಯ ಗೀತೆ  ಎಂದೇ ಕನ್ನಡಿಗರ ಮನೆ ಮಾತಗಿರುವ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣಲ್ಲಿ ಮೆಟ್ಟಬೇಕು” ಗೀತೆಯ ಸಾಲುಗಳನ್ನು ಹೇಳುವ ಮುಖಾಂತರ ಕನ್ನಡ ಅಬಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 2ಸಾವಿರ ವರ್ಷಗಳ ಪರಂಪರೆ ಹೊಂದಿರುವ ಕನ್ನಡ ಬರಿ ಭಾಷೆಯಲ್ಲ ಅದು ಸಂಸ್ಕೃತದ ಆಗರ ಎಂದರು.

    ಇದನ್ನೂ ಓದಿ: ಆಂಗ್ಲಭಾಷೆಯ ಭ್ರಮೆಯಿಂದ ಹೊರಬನ್ನಿ: ಚಂದ್ರಶೇಖರ ಕಂಬಾರ

    ನಂತರ ಮಾತನಾಡಿದ ಚಕ್ರವರ್ತಿ ಸೂಲಿಬೆಲೆಯವರು ನಾವು ಕರ್ನಾಟಕದಲ್ಲಿಯೇ ಇದ್ದು ಕನ್ನಡವನ್ನು ಕಟ್ಟುವ, ಉಳಿಸುವ-ಬೇಳೆಸುವ, ನಮ್ಮ ಭಾಷೆ-ಸಂಸ್ಕ್ರತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದರೆ, ನೀವು ನಾಡಿನಿಂದ ಬಹುದುರ ಇದ್ದರೂ ಸಹ ಮನಸ್ಸನ್ನು ಕರ್ನಾಟಕಲದಲಿಯೇ ಉಳಿಸುವ ಪ್ರಯತ್ನಕ್ಕೆ ನಾನು ಶತಶತ ನಮನಗಳನ್ನು ತಿಳಿಸುತ್ತೇನೆ ಎಂದರು.
    ಇಲ್ಲಿ ಅನೇಕರು ರಾಜ್ಯೋತ್ಸವ ಬಂದಾಗ ಕನ್ನಡದ ಬಗ್ಗೆ ಮತನಾಡಿ ಸುಮ್ಮನಾಗುತ್ತಿರವಾಗ, ದೂರದ ದೇಶದಲ್ಲಿರುವ ತಮಗೆ ಕನ್ನಡ ಒಂದು ದಿನದ ಹಬ್ಬವಲ್ಲಿ ಬದಲಿಗೆ ಕಳೆದು ಹೋಗಿರುವುದನ್ನ ಗಳಿಸಲಿಕ್ಕೆ ಮಾಡುವ ಪ್ರಯತ್ನ ಎಂದರು.
    ನಂತರ ನೆಡೆದ ಚಿಣ್ಣರ ಛದ್ಮವೇಷ, ಅಂತ್ಯಾಕ್ಷರಿ ಪೋರ್ಟ್ ಲ್ಯಾಂಡ್ ಕನ್ನಡಿಗರಿಗೆ ಮುದ ನೀಡಿದವು.

    ಮೂಕ ಭಾಷೆ ಕಲಿಸಿ ನಂತರ ಜೀವಾವಧಿ ಶಿಕ್ಷೆ ವಿಧಿಸಿತು ಕೋರ್ಟ್!  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts