More

    ಮಕ್ಕಳಲ್ಲಿ ಆದರ್ಶ ವ್ಯಕ್ತಿತ್ವ ದೇಶ ಭಕ್ತಿ ಬೆಳೆಸುವ ಶಿಕ್ಷಣ ಬೇಕು; ರೋಹಿತ ಚಕ್ರತೀರ್ಥ

    ರಾಣೆಬೆನ್ನೂರ: ಇಂದಿನ ದಿನಮಾನದಲ್ಲಿ ಮಕ್ಕಳಲ್ಲಿ ಆದರ್ಶ ವ್ಯಕ್ತಿತ್ವ, ದೇಶ ಭಕ್ತಿ ಬೆಳೆಸುವ ಶಿಕ್ಷಣದ ಅವಶ್ಯಕತೆಯಿದೆ ಎಂದು ಚಿಂತಕ, ಬರಹಗಾರ ರೋಹಿತ ಚಕ್ರತೀರ್ಥ ಹೇಳಿದರು.
    ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ 87ನೇ ವರ್ಷದ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಗುರುಕುಲದ ಶಿಕ್ಷಣ ಮತ್ತು ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಕೇವಲ ಉಪದೇಶ ಮಾಡದೆ ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವೂ ಒಳಗೊಂಡಿದೆ. ವಸುದೈವ ಕುಟುಂಬ ಎನ್ನುವುದು ನಮ್ಮ ಶಿಕ್ಷಣ. ಹೀಗಾಗಿ ಭಾರತೀಯ ಶಿಕ್ಷಣ ವ್ಯವಸ್ಥೆ ಭಾರತಕ್ಕೆ ಮಾತ್ರವಲ್ಲ ಪ್ರಪಂಚಕ್ಕೆ ಅವಶ್ಯವಿದೆ ಎಂದರು.
    ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು.
    ದಸರಾ ಹಬ್ಬದ ಆಚರಣೆ ಹಾಗೂ ಮಹತ್ವದ ಕುರಿತು ಪರಿವರ್ತನ ಟ್ರಸ್ಟ್ ಅಧ್ಯಕ್ಷ ಡಾ. ಎಸ್.ಜಿ. ವೈದ್ಯ ಉಪನ್ಯಾಸ ನೀಡಿದರು.
    ಪ್ರಮುಖರಾದ ಕೆ.ಎನ್. ಷಣ್ಮುಖ, ಲಕ್ಷ್ಮೀ ಅಡಿಕೆ, ಸತ್ಯನಾರಾಯಣ ವಿಶ್ವರೂಪ, ಚಿದಂಬರ ಜೋಶಿ, ಮಹೇಶ ನಾಡಿಗೇರ, ಅರವಿಂದ ಐರಣಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts