More

    ಜನಸಂಖ್ಯೆ ನಿಯಂತ್ರಣ ಜಾಗತಿಕ ಸಮಸ್ಯೆ

    ಸಿಂಧನೂರು: ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿ ಅವಶ್ಯವಾಗಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಪಾಟೀಲ್ ಹೇಳಿದರು.

    ಜನಸಂಖ್ಯೆ ದಿನಾಚರಣೆ ಅಂಗವಾಗಿ ನಗರದಲ್ಲಿ ಆರೋಗ್ಯ ಇಲಾಖೆ ಹಾಗೂ ಸನ್‌ರೈಸ್ ಗ್ರೂಪ್ ಇನ್‌ಸ್ಟಿಟ್ಯೂಟ್ ನರ್ಸಿಂಗ್ ಕಾಲೇಜ್ ಆಶ್ರಯದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಸನ್‌ರೈಸ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಸಿರಿಲ್ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ಜಗತ್ತಿನ ಎಲ್ಲ ದೇಶಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಬಡತನ, ಆರ್ಥಿಕ ಸಮಸ್ಯೆಗಳ ಜತೆಗೆ ಮಹಿಳೆಯರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳಾಗುತ್ತಿವೆ ಎಂದರು.

    ಹಿರಿಯ ಆರೋಗ್ಯ ಅಧಿಕಾರಿ ಸಂಗಪ್ಪ, ಸಂಸ್ಥೆ ಅಧ್ಯಕ್ಷ ಇರ್ಫಾನ್ ಸನ್, ಪ್ರಾಚಾರ್ಯ ವಸಿಂ ಹುಸೇನ್, ಚಕ್ರವರ್ತಿ, ಬಿಎಚ್‌ಒ ಗೀತಾ ಹಿರೇಮಠ, ಲಾಜರ್ ಸಿರಿಲ್, ಉಪನ್ಯಾಸಕರಾದ ಆಶುಪಾಷಾ, ಬಸವಲಿಂಗ, ರಾಜೇಶ್, ಶರೀಫ್, ಭವಾನಿ, ಜ್ಞಾನೇಶ್ವರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts