More

    ಸಣ್ಣ ವಯಸ್ಸಿಗೆ ಕ್ಯಾನ್ಸರ್​ಗೆ ಬಲಿಯಾದ ಖ್ಯಾತ ನಟ, ಫಲಕಾರಿಯಾಗಲಿಲ್ಲ ಚಿಕಿತ್ಸೆ: ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರು

    ಚೆನ್ನೈ: ಇನ್ನೂ ಬಾಳಿ ಬದುಕಿ, ಹಲವು ಸಿನಿಮಾಗಳಲ್ಲಿ ನಟಿಸಬೇಕಿದ್ದ ನಟ ಚಿಕಿತ್ಸೆ ಫಲಕಾರಿಯಾಗದೇ ಮಾರಕ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾರೆ.

    ಅಸ್ಸಾಂನ ಖ್ಯಾತ ನಟ ಕಿಶೋರ್​ ದಾಸ್​ ತಮ್ಮ 30ನೇ ವಯಸ್ಸಿಗೆ ಸಾವನ್ನಪ್ಪಿರುವುದು ದುರಂತವೇ ಸರಿ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕಿಶೋರ್​ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಅಸ್ಸಾಂನ ಖ್ಯಾತ ನಟನಾಗಿದ್ದ ಕಿಶೋರ್​ಗೆ ಸಾಕಷ್ಟು ಸಿನಿಮಾಗಳ ಅವಕಾಶವಿತ್ತು. ಇತ್ತಿಚೆಗೆ ತಾನು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಮ್ಮ ಫೋಟೋ ಸಹಿತ ಪೋಸ್ಟ್​ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿದೆ.

    ನಿಮಗಾಗಿ ಕಾದು ಕುಳಿತಿದ್ದೇವೆ ಎಂಬ ಅಸ್ಸಾಂ ಜನರು ಕಿಶೋರ್​​ ಸಂಪೂರ್ಣ ಗುಣಮುಖರಾಗಿ ವಾಪಸ್ಸಾಗುತ್ತಾರೆ. ತಮ್ಮ ನೆಚ್ಚಿನ ನಟನನ್ನು ಮತ್ತೆ ಕಣ್ತುಂಬಿಕೊಳ್ಳುತ್ತೇವೆ ಅಂದುಕೊಂಡಿದ್ದರು. ಆದರೆ ಮಹಾಮಾರಿ ಕ್ಯಾನ್ಸರ್​ ಅವರನ್ನು ಬಲಿ ಪಡೆದಿದೆ. (ಏಜೆನ್ಸೀಸ್​)

    ಸಿಬ್ಬಂದಿ ಕೊರತೆಯಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರದಲ್ಲಿ ವಿಳಂಬ: ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts