More

    ಪರಿಪೂರ್ಣ ಶಿಕ್ಷಣಕ್ಕೆ ಪೂರ್ಣಪ್ರಜ್ಞ ಖ್ಯಾತಿ, ಅಗತ್ಯ ಸೌಲಭ್ಯಗಳೊಂದಿಗೆ ವಿದ್ಯಾಭ್ಯಾಸ ಸಂಸ್ಥೆಯ ಗರಿಮೆ

    ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ ಪದವಿಪೂರ್ವ ಶಿಕ್ಷಣ. ಈ ಹಂತದಲ್ಲಿ ಒಬ್ಬ ವಿದ್ಯಾರ್ಥಿಗೆ ಏನೆಲ್ಲ ಸೌಲಭ್ಯ, ಸೌಕರ್ಯ, ಅವಶ್ಯಕತೆಗಳು ಬೇಕೋ ಅದೆಲ್ಲವೂ ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನಲ್ಲಿ ಲಭ್ಯ.

    ಅದಮಾರು ಶ್ರೀ ವಿಬುಧೇಶ ತೀರ್ಥ ಸ್ವಾಮೀಜಿ ಉಡುಪಿ ಜನತೆಗೆ ಒಳ್ಳೆಯ ಪದವಿ ಶಿಕ್ಷಣ ಸಿಗಬೇಕೆಂಬ ಸದುದ್ದೇಶದಿಂದ 1960ರಲ್ಲಿ ಪೂರ್ಣಪ್ರಜ್ಞ ಪದವಿ ಕಾಲೇಜು ಸ್ಥಾಪಿಸಿದರು. ಪದವಿ ಪೂರ್ವ ಮತ್ತು ಪದವಿ ಸಂಯುಕ್ತವಾಗಿದ್ದ ಈ ಕಾಲೇಜು 2001ರಲ್ಲಿ ಸರ್ಕಾರದ ನಿಯಮದಂತೆ ಪದವಿಪೂರ್ವ ಭಾಗ ಪ್ರತ್ಯೇಕಗೊಂಡು ಸ್ವಾಮೀಜಿ ಆಶಯದಂತೆ ಅನುದಾನ ರಹಿತವಾಗಿ ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಾಗಿ ರೂಪುಗೊಂಡು ಸುಸಜ್ಜಿತ ಕಟ್ಟಡಗಳೊಂದಿಗೆ 20 ವರ್ಷಗಳಿಂದ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

    ಸಂಸ್ಥೆಯ ಈಗಿನ ಅಧ್ಯಕ್ಷರಾದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಗುರುಗಳ ಮಾರ್ಗದಲ್ಲಿಯೇ ಮುಂದುವರಿದು ವಿಜ್ಞಾನ ವಿಭಾಗಕ್ಕೆ ಪ್ರತ್ಯೇಕ ವಿಶ್ವವಿಜ್ಞಾನಮ್ ಕಟ್ಟಡ, ಅತ್ಯಾಧುನಿಕ ಸುಸಜ್ಜಿತ ಪ್ರಯೋಗಾಲಯಗಳನ್ನು ಒದಗಿಸಿದ್ದಾರೆ. ನವೀನ ವಿನ್ಯಾಸದ ಪ್ರಾಂಶುಪಾಲ, ಉಪಪ್ರಾಂಶುಪಾಲರ ಕೊಠಡಿ, ವಿನೂತನ ಕಚೇರಿ, ಸ್ಮಾರ್ಟ್‌ಕ್ಲಾಸ್, ಸಿಸಿಟಿವಿ ವ್ಯವಸ್ಥೆ, ಬೃಹತ್ ಗ್ರಂಥಾಲಯ, ಸುಗ್ರಾಸ ಕ್ಯಾಂಟೀನ್, ಶ್ರೇಷ್ಠ ದರ್ಜೆ ಒಳಾಂಗಣ ಕ್ರೀಡಾಂಗಣ, ಬಾಲಕ ಹಾಗೂ ಬಾಲಕಿಯರ ವಸತಿ ನಿಲಯ, ಸಿಇಟಿ, ನೀಟ್, ಜೆಇಇ ಮೈನ್, ಸಿಎ ಫೌಂಡೇಶನ್ ಪರೀಕ್ಷೆಗೆ ಕಾಲೇಜಿನಲ್ಲೇ ಪ್ರತ್ಯೇಕ ವ್ಯವಸ್ಥೆ, ಹೀಗೆ ಆಧುನಿಕ ಕಾಲಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ಒಂದೇ ಸೂರಿನಲ್ಲಿಡಿಯಲ್ಲಿ ಸಿಗುವಂತೆ ವ್ಯವಸ್ಥೆ ಮಾಡಿ ಉಡುಪಿ ಪೂರ್ಣಪ್ರಜ್ಞ ಕಾಲೇಜನ್ನೂ ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ಕಾಲೇಜಾಗಿ ಸ್ವಾಮೀಜಿ ಬೆಳೆಸುತ್ತಿದ್ದಾರೆ. ಸಂಸ್ಥೆಯ ಗೌರವ ಕಾರ್ಯದರ್ಶಿ, ವಕೀಲ ಪ್ರದೀಪ್ ಕುಮಾರ್ ಸ್ವಾಮೀಜಿಯವರ ಆಶಯವನ್ನು ಕಾರ್ಯರೂಪಕ್ಕೆ ತರುತ್ತಿದ್ದು, ಸಂಸ್ಥೆಯನ್ನು ಮಾದರಿ ಕಾಲೇಜಾಗಿ ಮಾರ್ಪಡಿಸಿದ್ದಾರೆ.

    ಕೋವಿಡ್ ಮುಂಜಾಗ್ರತಾ ಕ್ರಮ: ಕೋವಿಡ್-19ನ ಹಾವಳಿಯಿಂದ ಪ್ರಸ್ತುತ ಕಾಲೇಜಿನಲ್ಲಿ ಮೌಖಿಕ ಶಿಕ್ಷಣ ಕೊಡಲು ಸಾಧ್ಯವಾಗದಿದ್ದರೂ ಆನ್‌ಲೈನ್ ಕ್ಲಾಸ್ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಕಾಲೇಜಿನಲ್ಲೂ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸೇಶನ್ ಕ್ರಮ ಅನುಸರಿಸಲಾಗಿದೆ.

    ಪಿಪಿಸಿ ಸಾಧನೆಗಳ ಹೆಜ್ಜೆ: ಉಡುಪಿ ಪಿಪಿಸಿ ಸ್ಥಾಪನೆಯಾದಾಗಿನಿಂದ ಈವರೆಗೂ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಿದೆ. 2018-19ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ.100 ಫಲಿತಾಂಶದೊಂದಿಗೆ 581 ವಿದ್ಯಾರ್ಥಿಗಳಲ್ಲಿ 328 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಿಜ್ಞಾನ ವಿಭಾಗದಲ್ಲಿ 3 ರ‌್ಯಾಂಕು ಮತ್ತು ವಾಣಿಜ್ಯ ವಿಭಾಗದಲ್ಲಿ 3 ರ‌್ಯಾಂಕು ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಸಿಇಟಿಯಲ್ಲಿ 90ನೇ ರ‌್ಯಾಂಕ್, ಜೆಇಇ ಮೈನ್‌ನಲ್ಲಿ 25 ಮಂದಿ ಅರ್ಹತೆ, ಸಿಎ ಫೌಂಡೇಶನ್‌ನಲ್ಲಿ 32 ಮಂದಿ ತೇರ್ಗಡೆ ಹೊಂದಿರುತ್ತಾರೆ. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯಮಟ್ಟದಲ್ಲಿ ಅತ್ಯಂತ ಹೆಚ್ಚು ಬಹುಮಾನ ಗಳಿಸಿದೆ. ಕ್ರೀಡಾ ಸ್ಪರ್ಧೆಗಳಲ್ಲಿ ಬಹಳಷ್ಟು ಬಹುಮಾನ ಟ್ರೋಫಿಗಳನ್ನು ಪಡೆದಿದೆ. ಶಿಸ್ತಿಗೆ ಪ್ರಥಮ ಪ್ರಾಶಸ್ತ್ಯ ಕೊಡುವ ಈ ಸಂಸ್ಥೆಯಲ್ಲಿ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಗೆ ದಾಖಲಾತಿ ನಡೆಯುತ್ತಿದ್ದು, ಬಹಳಷ್ಟು ಮಂದಿ ಪ್ರವೇಶಾತಿ ಹೊಂದಿದ್ದಾರೆ.

    ಆದರ್ಶ ವಿದ್ಯಾಸಂಸ್ಥೆ: ಪೂರ್ಣಪ್ರಜ್ಞ ಕಾಲೇಜು ಹೆಸರಿಗೆ ತಕ್ಕ ಹಾಗೆ ಪರಿಪೂರ್ಣ ಶಿಕ್ಷಣ ನೀಡುವ ಆದರ್ಶ ವಿದ್ಯಾಸಂಸ್ಥೆ. ಲಕ್ಷಾಂತರ ಮಂದಿ ಹಳೇ ವಿದ್ಯಾರ್ಥಿಗಳನ್ನು ಹೊಂದಿರುವ ಈ ಸಂಸ್ಥೆಯನ್ನು ಇನ್ನಷ್ಟು ಎತರಕ್ಕೆ ಕೊಂಡೊಯ್ಯಬೇಕೆಂಬ ಸಂಕಲ್ಪದಿಂದ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.poornaprajnapuc.com ನೋಡಬಹುದು. ಪ್ರವೀಣ್ ಕುಮಾರ್: 9448153565, ಗುರುರಾಜ್: 9845295124 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts