More

    ಕಳಪೆ ಬಿತ್ತನ ಬೀಜದಿಂದ ರೈತರಿಗೆ ನಷ್ಟ

    ರಾಯಚೂರು: ಕಳಪೆ ಬಿತ್ತನೆ ಬೀಜ ಮಾರಾಟಗಾರರ ವಿರುದ್ಧ ಕ್ರಮಕೈಗೊಳ್ಳುವುದರ ಜತೆಗೆ ರೈತರಿಗೆ ಗುಣಮಟ್ಟದ ಬೀಜ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಒತ್ತಾಯಿಸಿದೆ.

    ಇದನ್ನೂ ಓದಿ: ಕೃಷಿ ವಿವಿಯಲ್ಲಿ ಬಿತ್ತನೆ ಬೀಜ ಮಾರಾಟ

    ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಸಂಘಟನೆಯ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು. ಹಿಂದಿನ ವರ್ಷ ಕಳಪೆ ಬಿತ್ತನೆ ಬೀಜದಿಂದಾಗಿ ಸೂಕ್ತ ಇಳುವರಿ ಬಾರದೆ ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗುವಂತಾಯಿತು ಎಂದು ದೂರಿದರು.

    ಈ ಮೊದಲು ಗಂಡು ಮತ್ತು ಹೆಣ್ಣು ಹತ್ತಿ ಬಿತ್ತನೆ ಬೀಜವನ್ನು ಪ್ರತ್ಯೇಕ ಪ್ಯಾಕೇಟ್‌ಗಳಲ್ಲಿ ಕೊಡುತ್ತಿದ್ದರು. ಈಗ ಒಂದೇ ಪಾಕೇಟ್‌ನಲ್ಲಿ ನೀಡುತ್ತಿದ್ದು, ಇದರಿಂದ ಗಂಡು ಮತ್ತು ಹೆಣ್ಣು ಬೀಜಗಳ ಅನುಪಾತದಲ್ಲಿ ತೊಂದರೆಯಾಗಿ ಕಡಿಮೆ ಇಳುವರಿ ಬಂದು ನಷ್ಟಕ್ಕೆ ಗುರಿಯಾಗುವಂತಾಗಿದೆ.

    ಬಿತ್ತನೆ ಬೀಜದ ಬೆಲೆಯನ್ನು ಎಗ್ಗಿಲ್ಲದೆ ಏರಿಕೆ ಮಾಡುತ್ತಿದ್ದು, ಬೀಜಗಳ ಪ್ಯಾಕೇಟ್‌ಗಳ ಮೇಲಿರುವ ಎಂಆರ್‌ಪಿ ದರಕ್ಕೆ ಮಾರಾಟ ಮಾಡುತ್ತಿಲ್ಲ. ಕೆಲವು ಅಂಗಡಿಯವರು ದಾಸ್ತಾನು ಇಲ್ಲವೆಂದು ಕೃತಕ ಅಭಾವ ಸೃಷ್ಟಿಸಿ ಜಾಸ್ತಿಗೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts