More

    ಅಭಿವೃದ್ಧಿ ಕಾಮಗಾರಿಗಳ ಕಳಪೆ, ವಿಳಂಬ

    ಕೋಲಾರ: ನಗರಸಭೆಯ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕಳಪೆ ಹಾಗೂ ಅಪೂರ್ಣ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ನಗರಸಭೆ ಸದಸ್ಯರು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

    ನಗರಸಭೆಯ ಸಮೀಪ ಜಮಾಯಿಸಿದ ಸದಸ್ಯರು ಸಹಜವಾಗಿಯೇ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ ನಗರದಲ್ಲಿನ ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಮಾಹಿತಿ ಕೇಳಿದ್ದಾರೆ. ಇದಕ್ಕೆ ಅಽಕಾರಿಗಳು ಹಾರಿಕೆ ಉತ್ತರ ನೀಡಿದ ಹಿನ್ನೆಲೆಯಲ್ಲಿ ಕೆರಳಿದ ಸದಸ್ಯರು ದಿಢೀರನೆ ಪ್ರತಿಭಟನೆ ಕುಳಿತು, ಎವಿಜೆ ಲಕ್ಷಿ÷್ಮನಾರಾಯಣ ಗುತ್ತಿಗೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಶಿವಾನಂದ, ಎಇಇ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು.

    ಸದಸ್ಯ ಅಂಬರೀಶ್ ಮಾತನಾಡಿ, ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಹಿಂದೆ ಉಳಿದಿವೆ. ವಿವಿಧ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿರುವ ಎವಿಜೆ ಲಕ್ಷ್ಮೀನಾರಾಯಣ ಅವರು ವಿನಾಕಾರಣ ವಿಳಂಬ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ನಗರೋತ್ಥಾನ-೪ರ ಯೋಜನೆಯಲ್ಲಿ ೧೭ ಕೋಟಿ ರೂ. ವೆಚ್ಚದಲ್ಲಿ ೫ ಕೋಟಿ ರೂ. ಮಾತ್ರ ವೆಚ್ಚ ಆಗಿರಬಹುದು. ಯೋಜನಾ ನಿರ್ದೇಶಕ ಕಚೇರಿಯಲ್ಲಿನ ಅಧಿಕಾರಿಗಳ, ಇಂಜಿನಿಯರ್ ವೈಫಲ್ಯದಿಂದ ಗುತ್ತಿಗೆದಾರ ಇಷ್ಟ ಬಂದAತೆ ಮಾಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

    ನಗರದಲ್ಲಿ ರಸ್ತೆಗಳು ಹದಗೆಟ್ಟಿವೆ, ಚರಂಡಿಗಳ ಕಾಮಗಾರಿ ಅಪೂರ್ಣಗೊಂಡಿವೆ. ಬಹುತೇಕ ಕಡೆ ರಸ್ತೆಗಳನ್ನು ಅಗೆದು ಜಲ್ಲಿಕಲ್ಲು ಹಾಕಿ ಬಿಡಲಾಗಿದೆ. ಇದರಿಂದಾಗಿ ವಾಹನ ಸವಾರರು ನಗರಸಭೆ ಅಽಕಾರಿಗಳ, ಸದಸ್ಯರ ವಿರುದ್ಧ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿಗಳ ವಿಳಂಬದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕೈಗೊಳ್ಳದೆ ಇರುವುದು ವಿಷಾದಕರ ಸಂಗತಿ ಎಂದು ಕಿಡಿಕಾರಿದರು.

    ಗುತ್ತಿಗೆದಾರ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ಕೆಲಸದ ಗುಣಮಟ್ಟ ಪರಿಶೀಲನೆ ಮಾಡಬೇಕಾಗಿರುವ ಇಂಜಿನಿಯರ್ ಶ್ರೀನಿವಾಸ್ ಗುತ್ತಿಗೆದಾರನ ಕೈಗೊಂಬೆಯಂತೆ ಆಡುತ್ತಾರೆ. ಜನರ ಪ್ರಶ್ನೆಗಳಿಗೆ ಉತ್ತರ ನೀಡಕ್ಕಾಗದೆ ಅಸಹಾಯಕರಾಗಿದ್ದೇವೆ. ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ದೂರಿದರು.

    ಎಸ್‌ಎನ್‌ಆರ್ ಸರ್ಕಲ್, ಕಾರಂಜಿಕಟ್ಟೆ, ಅಂತರಗಂಗೆ, ಅಮ್ಮವಾರಿ ಪೇಟೆಯಲ್ಲಿ ಡಾಂಬರೀಕರಣ ಮಾಡಿರುವುದು ಬಿಟ್ಟರೆ ಬೇರೇನು ಕೆಲಸಗಳು ಆಗಿಲ್ಲ. ಈಗಾಗಲೇ ಮಳೆಗಾಲ ಶುರುವಾಗಿದೆ. ಯಾವುದೇ ರೀತಿ ಅನಾಹುತಗಳು ಸಂಭವಿಸಿದರು ಅಧಿಕಾರಿಗಳು, ಗುತ್ತಿಗೆದಾರನೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

    ಅಧಿಕಾರಿಗಳಿಗೆ ನಗರದ ಜನತೆಯ ಸಮಸ್ಯೆಗಳ ಬಗ್ಗೆ ಗಂಭೀರತೆಯಿಲ್ಲದಂತಾಗಿದೆ. ಕಳಪೆ ಕಾಮಗಾರಿ, ವಿಳಂಬ ಆಗುತ್ತಿರುವ ಬಗ್ಗೆ ಮೊದಲಿನಿಂದಲೂ ತಮ್ಮ ಗಮನಕ್ಕೆ ತೆಗೆದುಕೊಂಡು ಬಂದಿದ್ದೇವೆ. ಆದರೂ ಯಾಕೆ ಗುತ್ತಿಗೆದಾರನ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಸದಸ್ಯ ಪ್ರಸಾದ್‌ಬಾಬು ಪೌರಾಯುಕ್ತ ಶಿವಾನಂದ ಅವರನ್ನು ತರಾಟೆಗೆ ತೆಗೆದುಕೊಂಡರು.
    ಕಾಮಗಾರಿ ಬೇಗ ಪೂರ್ಣಗೊಳಿಸದೆ ಇರುವ ಬಗ್ಗೆ ಹಲವಾರು ನೋಟಿಸ್ ನೀಡಲಾಗಿದೆ ಎಂದು ಪೌರಾಯುಕ್ತ ಸಮಜಾಯಿಷಿ ನೀಡಿದರು. ಇದರಿಂದ ಕೆರಳಿದ ಸದಸ್ಯರು ನೋಟಿಸ್ ನೀಡಿರುವುದು ನಿಜವೆಯಾದರೆ ತೋರಿಸಿ ಎಂದು ತಾಕೀತು ಮಾಡಿದರು.
    ಪ್ರತಿಭಟನೆಯಲ್ಲಿ ಇದಾಯತ್ ಉಲ್ಲಾ, ಎಸ್.ಆರ್.ಮುರಳಿ ಗೌಡ, ರಮೇಶ್, ನಾರಾಯಣಮ್ಮ, ಸೂರಿ, ಇಮ್ರಾನ್, ಇದಾಯತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts