More

    ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಯತ್ನ

    ಹುಕ್ಕೇರಿ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಹಿಂದುಳಿದ, ಬಡ ಹಾಗೂ ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ 15 ವಸತಿ ನಿಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ 12 ನಿಲಯಗಳನ್ನು ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಉಮೇಶ ಕತ್ತಿ ಹೇಳಿದ್ದಾರೆ.

    ಸೋಮವಾರ ಪಟ್ಟಣದ ಗಜಬರವಾಡಿ ಬಳಿ ಲೋಕೋಪಯೋಗಿ ಇಲಾಖೆಯಿಂದ 3.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ರಾಜ್ಯದಲ್ಲಿಯೇ ಹೆಚ್ಚಿನ ಅನುದಾನ ತಂದು ಜನಪರ ಕಾರ್ಯ ಮಾಡಿದ ಕೀರ್ತಿ ಶಾಸಕ ಉಮೇಶ ಕತ್ತಿಗೆ ಸಲ್ಲುತ್ತದೆ ಎಂದರು.

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಗಾರ್ಗಿ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಾಚಯ್ಯ ಹಿರೇಮಠ, ನಿರ್ದೇಶಕ ಪರಗೌಡ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ಸದಸ್ಯರಾದ ರಾಜು ಮುನ್ನೋಳಿ, ಶಂಕರ ಗೋಟೂರೆ, ರೇಖಾ ಚಿಕ್ಕೋಡಿ, ಸುರೇಖಾ ಗಳತಗಿಮಠ, ಪಾರವ್ವ ಲಠ್ಠಿ, ಫರೀದಾ ಮುಲ್ಲಾ, ಅಶೋಕ ಗುರಾಣಿ, ಎಸ್.ಕೆ. ಹುಕ್ಕೇರಿ, ಪಿ.ಆರ್. ಕಾಮತ, ಗುರುರಾಜ ಕಲ್ಯಾಣಶೆಟ್ಟಿ, ಶಿವಾನಂದ ಗುಡಗನಟ್ಟಿ, ಎ.ಬಿ. ಪಟ್ಟಣಶೆಟ್ಟಿ, ರಾಜಶೇಖರ ಪಾಟೀಲ, ಮೋಹನ ಜಾಧವ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts