More

    ಬಿಗ್​ಬಾಸ್​ ಮನೆ ಪ್ರವೇಶಿಸಲು ಭಾರಿ ಸಂಭಾವನೆ ಪಡೆದ ಹಾಟ್​ ಬ್ಯೂಟಿ ಪೂನಂ ಬಜ್ವಾ!

    ಹೈದರಾಬಾದ್​: “ತಂಗಿಗಾಗಿ” ಚಿತ್ರದಲ್ಲಿ ನಟ ದರ್ಶನ್​ಗೆ ನಾಯಕಿಯಾಗಿದ್ದ ಬಹುಭಾಷಾ ನಟಿ ಪೂನಂ ಬಜ್ವಾ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ತೆಲುಗಿನಲ್ಲಿ ಮೂಡಿಬರುತ್ತಿರುವ ರಿಯಾಲಿಟಿ ಶೋ ಬಿಗ್​ಬಾಸ್ 4ನೇ ಆವೃತ್ತಿಯ ಸ್ಪರ್ಧಾಳುವಾಗಿ ಬಿಗ್​ ಮನೆಗೆ ಎಂಟ್ರಿ ಕೊಡಲು ತಯಾರಾಗಿದ್ದಾರೆ.

    ಇದನ್ನೂ ಓದಿ: VIDEO| ನಾನು ಒಳ್ಳೆಯ ಹುಡುಗಿಯಲ್ಲ, ನನಗೆ ದಯಾಮರಣ ಪಾಲಿಸಿ: ನಟಿ ಜಯಶ್ರೀ ರಾಮಯ್ಯ ಅಳಲು

    ಬಿಗ್​ಬಾಸ್​ ಹೌಸ್​ ಪ್ರವೇಶಿಸಲು ಪೂನಂ ಪಡೆದಿರುವ ಸಂಭಾವನೆ ಇದೀಗ ಭಾರಿ ಸುದ್ದಿಯಾಗಿದೆ. ಮನೆಯಲ್ಲಿ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ. ಅವರನ್ನು ಉಳಿಸಿಕೊಳ್ಳುವುದು ಅಥವಾ ಬಿಡುವುದು ವೀಕ್ಷಕರಿಗೆ ಬಿಟ್ಟ ವಿಚಾರ. ಆದರೆ, ಬಿಗ್​ಬಾಸ್​ ಮನೆ ಪ್ರವೇಶಿಸಲು ಪೂನಂ ಭಾರಿ ಮೊತ್ತವನ್ನೇ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ 45 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ನೋಡಲು ಸುಂದರವಾಗಿ, ತುಂಬಾ ಬೋಲ್ಡ್​ ಪಾತ್ರಗಳಲ್ಲಿ ಪೂನಂ ಅಭಿನಯಿಸಿದ್ದರೂ ಇತ್ತೀಚೆಗೆ ಅವಕಾಶಗಳು ಕಡಿಮೆಯಾಗಿವೆ. ಅದರಲ್ಲೂ ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿ ಪೂನಂ ಕಾಣಿಸಿಕೊಂಡರು. ಇದರ ಹೊರತಾರ ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲೂ ಪೂನಂ ಬಣ್ಣ ಹಚ್ಚಿದ್ದಾರೆ.

    ಅಕ್ಕಿನೇನಿ ನಾಗಾರ್ಜುನ ಅಭಿನಯದ ಬಾಸ್​ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಬಳಿಕ ತೆಲುಗಿನಲ್ಲೂ ಪೂನಂ ಅವರಿಗೆ ಒಳ್ಳೆಯ ಹೆಸರಿದೆ. ಬಿಗ್​ಬಾಸ್​ ಸೀಸನ್​ 4ರ ಆಪ್ತ ಮೂಲಗಳು ಹೇಳುವ ಪ್ರಕಾರ ಪೂನಂ ಈಗಾಗಲೇ ಶೋಗೆ ಬರಲು ಒಪ್ಪಿಗೆ ನೀಡಿ ಸಹಿ ಹಾಕಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಅಭಿಮಾನಿ ನೀಡಿದ ಗಿಫ್ಟ್​​ ಬಾಕ್ಸ್​ ತೆರೆದ ನಟಿ ಕೀರ್ತಿ ಸುರೇಶ್​ಗೆ ಶಾಕ್​ ಆಗಿತ್ತಂತೆ!​

    ಇನ್ನು ಬಿಗ್​ಬಾಸ್​ 4ನೇ ಆವೃತ್ತಿ ಮುಂದಿನ ಆಗಸ್ಟ್​ ತಿಂಗಳಲ್ಲಿ ಸ್ಟಾರ್​ ಮಾ ಚಾನೆಲ್​ನಲ್ಲಿ ಪ್ರಸಾರವಾಗಲಿದೆ. ಮತ್ತೆ ಕಾರ್ಯಕ್ರಮದ ನಿರೂಪಣೆ ಮಾಡಲು ಅಕ್ಕಿನೇನಿ ನಾಗಾರ್ಜುನ ಅವರು ತಯಾರಿ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ವರ್ಕ್​ ಫ್ರಂ ಹೋಮ್​ ಕೇಳಿದ್ದೀರಿ, ಇದೀಗ ಶೂಟ್ಸ್​ ಫ್ರಂ ಹೋಮ್​ ಶುರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts