More

    ಪೂಜಾ ಪುನಸ್ಕಾರಗಳು ಭಾರತೀಯ ಸಂಪ್ರದಾಯ

    ರಬಕವಿ/ಬನಹಟ್ಟಿ: ಭಾರತೀಯರಾದ ನಾವು ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.

    ರಬಕವಿ ಜೀರಗಾಳ ಪರಿವಾರದವರ ಮನೆಯಂಗಳದಲ್ಲಿ ನಡೆದ ಪಾದಪೂಜಾ ಸಮಾರಂಭದಲ್ಲಿ ಭಕ್ತರಿಂದ ಪಾದ ಪೂಜೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.

    ತಂದೆ-ತಾಯಿ ಮಾಡಿದ ಆಚಾರ-ವಿಚಾರಗಳನ್ನು ಮಕ್ಕಳು ಅನುಸರಿಸುತ್ತವೆ. ಮಕ್ಕಳು ಬಾಲ್ಯಾವಸ್ಥೆಯಲ್ಲಿರುವಾಗಲೇ ಸಂಸ್ಕೃತಿ ಸಂಸ್ಕಾರ ನೀಡಿದರೆ ಅದು ಪಾರಂಪರಿಕವಾಗಿ ನಡೆದುಕೊಂಡು ಹೋಗುತ್ತದೆ. ಎಷ್ಟೇ ಹಣ ಗಳಿಸಿದರೂ ಅಧ್ಯಾತ್ಮದ ಅರಿವು ಯಾರಿಗಿರುತ್ತದೆಯೋ ಅವರಲ್ಲಿ ದಾನ ಧರ್ಮದ ಕಾರ್ಯಗಳು ನಡೆಯುತ್ತಿರುತ್ತವೆ. ದೇವರು ಕೊಟ್ಟ ಕಾಲಕ್ಕೆ ದಾನ ಧರ್ಮಗಳನ್ನು ಮಾಡುತ್ತಲೆ ಇರಬೇಕು. ಇದರಿಂದ ನೆಮ್ಮದಿ ಹಾಗೂ ಆರೋಗ್ಯವಂತ ಬದುಕು ಸಾಗಿಸಬಹುದು ಎಂದರು.

    ಇಂದು ಜನರು ಆರೋಗ್ಯದತ್ತ ಗಮನಹರಿಸದೆ ಆಹಾರ ಹಾಗೂ ಜೀವನ ಶೈಲಿ ಮರೆಯುತ್ತಿದ್ದಾರೆ. ಆದ್ದರಿಂದ ಸಾವಯವ ಕೃಷಿ ಪದಾರ್ಥಗಳನ್ನು ಬೆಳೆಯುವುದು ಮತ್ತು ಬಳಸುವುದು ಆಗಬೇಕು. ರೈತರು ಕೂಡ ವಾಣಿಜ್ಯಬೆಳೆಗಳನ್ನು ಬೆಳೆಯುವುದು ತಪ್ಪಲ್ಲ, ಆದರೆ ಅದನ್ನೇ ಸಾವಯವವಾಗಿ ಬೆಳೆಯಿರಿ ಎಂದು ಸಲಹೆ ನೀಡಿದರು.

    ಶಂಕರ ಜೀರಗಾಳ, ವಿಶ್ವನಾಥ ಕೊಕಟನೂರ, ಡಾ. ಬಸವರಾಜ ಡಂಗಿ, ಡಾ. ದೀಪಾಲಿ ಡಂಗಿ, ಪ್ರವೀಣಕುಮಾರ ಪಾವಟೆ, ಡಾ. ಸಿದ್ದು ವಂಟಗುಡಿ, ರಾಜು ಗಾಣಿಗೇರ, ಡಾ. ವಿನೋದ ಮೇತ್ರಿ, ಸವಿತಾ ಜೀರಗಾಳ, ಸಾವಿತ್ರಿ ಗಾಣಿಗೇರ, ಅಶ್ವಿನಿ ಕೊಕಟನೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts