More

    ಪ್ರತಿಪಕ್ಷಗಳು ಬಹಿಷ್ಕರಿಸಿರುವ ಬಾಂಗ್ಲಾದೇಶ ಚುನಾವಣೆಯ ಮತದಾನ ಮುಕ್ತಾಯ: ಮತ ಎಣಿಕೆ ಆರಂಭ

    ಢಾಕಾ: ಬಾಂಗ್ಲಾದೇಶದ ಚುನಾವಣಾ ಅಧಿಕಾರಿಗಳು ಭಾನುವಾರ ಮತಗಳ ಎಣಿಕ ಆರಂಭಿಸಿದ್ದು, ಸೋಮವಾರ ಬೆಳಗ್ಗೆ ಫಲಿತಾಂಶ ಹೊರಬೀಳಲಿದೆ.

    ಈ ಚುನಾವಣೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಅವಾಮಿ ಲೀಗ್​ನ ಪ್ರಧಾನಿ ಶೇಖ್ ಹಸೀನಾ ಅವರು ಐದನೇ ಅವಧಿಗೆ ಅಧಿಕಾರಕ್ಕೆ ಮರಳುವ ಸಾಧ್ಯತೆಗಳು ನಿಚ್ಚಳವಾಗಿವೆ.

    ಈ ಹಿಂದೆ ಬಡತನದಿಂದ ಬಳಲುತ್ತಿದ್ದ ದೇಶದಲ್ಲಿ ಹಸೀನಾ ಅವರ ನೇತೃತ್ವದಲ್ಲಿ ಆರ್ಥಿಕ ಬೆಳವಣಿಗೆ ನಡೆದಿವೆ. ಆದರೆ ಅವರ ಸರ್ಕಾರವು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ನಿರ್ದಯ ವಿರೋಧದ ದಮನದ ಆರೋಪ ಎದುರಿಸುತ್ತಿದೆ.

    ಮತ ಎಣಿಕೆ ಆರಂಭವಾಗಿದೆ ಎಂದು ಚುನಾವಣಾ ಆಯೋಗದ ವಕ್ತಾರ ಶರೀಫುಲ್ ಆಲಂ ತಿಳಿಸಿದ್ದಾರೆ.

    ಪ್ರತಿಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ), ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಚುನಾವಣೆಯಲ್ಲಿ ಭಾಗವಹಿಸದಂತೆ ಜನರನ್ನು ಒತ್ತಾಯಿಸಿದೆ.

    ಆದರೆ 76 ವರ್ಷದ ಹಸೀನಾ ಅವರು ನಾಗರಿಕರು ಮತದಾನ ಮಾಡಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಂಬಿಕೆ ತೋರಿಸಬೇಕು ಎಂದು ಕರೆ ನೀಡಿದ್ದಾರೆ.

    ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೇಖ್​ ಹಸಿನಾ ಅವರು, ಬಿಎನ್‌ಪಿಯು ಭಯೋತ್ಪಾದಕ ಸಂಘಟನೆಯಾಗಿದೆ ಎಂದು ಆರೋಪಿಸಿದ್ದಾರೆ.

    “ಈ ದೇಶದಲ್ಲಿ ಪ್ರಜಾಪ್ರಭುತ್ವ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ” ಎಂದೂ ಅವರು ಹೇಳಿದ್ದಾರೆ.

    ಫಲಿತಾಂಶ ಖಚಿತ ಎಂಬ ಕಾರಣಕ್ಕೆ ಮತದಾನ ಮಾಡಿಲ್ಲ ಎಂದು ಹಲವರು ಹೇಳಿದರು. “ಒಂದು ಪಕ್ಷ ಭಾಗವಹಿಸುತ್ತಿರುವಾಗ, ಇನ್ನೊಂದು ಪಕ್ಷ ಭಾಗವಹಿಸದಿರುವಾಗ, ನಾನು ಏಕೆ ಮತ ಹಾಕಲು ಹೋಗುತ್ತೇನೆ?” ಎಂದು ರಿಕ್ಷಾ ಎಳೆಯುವ 31 ವರ್ಷದ ಮೊಹಮ್ಮದ್ ಸೈದೂರ್ ಹೇಳಿದ್ದಾರೆ.

    ಯಾರು ಗೆಲ್ಲುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದು 27 ವರ್ಷದ ವಿದ್ಯಾರ್ಥಿನಿ ಫರ್ಹಾನಾ ಮಾಣಿಕ್ ಅಭಿಪ್ರಾಯಪಟ್ಟಿದ್ದಾರೆ.

    ಧರ್ಮಾರ್ಥ ಕಾರ್ಯಕರ್ತ ಶಹರಿಯಾರ್ ಅಹ್ಮದ್ ಅವರು, ಈ ಚುನಾವಣೆಯನ್ನು “ಪ್ರಹಸನ” ಎಂದು ಟೀಕಿಸಿದ್ದಾರೆ.

    ದೇಶಭ್ರಷ್ಟರಾಗಿ ಬ್ರಿಟನ್‌ನಲ್ಲಿ ವಾಸಿಸುವ ಬಿಎನ್​ಪಿ ಮುಖ್ಯಸ್ಥ ತಾರಿಕ್ ರೆಹಮಾನ್ ಅವರು,
    “ಚುನಾವಣಾ ಆಯೋಗವು ನಕಲಿ ಮತಗಳನ್ನು ಬಳಸಿಕೊಂಡು ಮತದಾನದ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ನಾನು ಭಯಪಡುತ್ತೇನೆ” ಎಂದಿದ್ದಾರೆ.

    ವಿಶ್ವದ ಎಂಟನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ರಾಜಕೀಯದಲ್ಲಿ ದೇಶದ ಸ್ಥಾಪಕ ನಾಯಕನ ಮಗಳು ಹಸೀನಾ ಮತ್ತು ಮಾಜಿ ಮಿಲಿಟರಿ ಆಡಳಿತಗಾರನ ಪತ್ನಿ, ಮಾಜಿ ಪ್ರಧಾನಿ ಖಲೀದಾ ಜಿಯಾ ನಡುವೆ ಪೈಪೋಟಿ ಇದೆ.

    ದೆಹಲಿ ತಲಾದಾಯ ರೂ. 4.44 ಲಕ್ಷಕ್ಕೆ ಏರಿಕೆ: ಜನರ, ಸರ್ಕಾರದ ಪರಿಶ್ರಮ ಶ್ಲಾಘಿಸಿದ ಕೇಜ್ರಿವಾಲ್​

    140 ಭಾಷೆಗಳಲ್ಲಿ ಹಾಡಿ ಗಿನ್ನೆಸ್ ದಾಖಲೆ ಬರೆದ ಕೇರಳದ ಮಹಿಳೆ: ಈ ಸಂಗೀತಗಾರ್ತಿ ಯಾರು ಗೊತ್ತೆ?

    ವೈಯಕ್ತಿಕ ಹೇಳಿಕೆ, ಸರ್ಕಾರದ್ದಲ್ಲ: ಮೋದಿ ವಿರುದ್ಧ ಸಚಿವೆ ಶಿಯುನಾ ಅವಹೇಳನಕಾರಿ ಅಭಿಪ್ರಾಯಕ್ಕೆ ಮಾಲ್ಡೀವ್ಸ್​ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts