More

    ರಾಜಕೀಯ ವೈಷಮ್ಯಕ್ಕೆ ಮೈದುನನ ಕೊಲೆ

    ವಿಜಯಪುರ : ಸಿಂದಗಿ ತಾಲೂಕಿನ ಕಣ್ಣಗುಡ್ಡಿಹಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ರಾಜಕೀಯ ವೈಷಮ್ಯಕ್ಕೆ ಗ್ರಾಮದ ಮಲ್ಲಿಕಾರ್ಜುನ ಮಾರುತಿ ನಾಯ್ಕೋಡಿ(36) ಎಂಬ ವ್ಯಕ್ತಿ ಕೊಲೆಯಾಗಿದ್ದಾನೆ.

    ಭಾನುವಾರ ಸಾಯಂಕಾಲ 4 ಗಂಟೆ ಸುಮಾರಿಗೆ ಗ್ರಾಮದ ಚಹಾದ ಅಂಗಡಿಯಲ್ಲಿ ಆರೋಪಿ ಧರೆಪ್ಪ ಶರಣಪ್ಪ ಅಡವಿ, ಮಲ್ಲಿಕಾರ್ಜುನ ತನ್ನ ಮಗ್ಗಲು ಕುಳಿತು ಚಹಾ ಕುಡಿಯುತ್ತಿರುವುದಕ್ಕೆ ಆಕ್ಷೇಪಿಸಿ, ನಿನ್ನ ತಮ್ಮನ ಹೆಂಡತಿ ಅಧ್ಯಕ್ಷೆಯಾಗಿದ್ದಕ್ಕೆ ನನ್ನ ಬಳಿ ಕುಳಿತಿರುವಿ ಅಂತಾ ಜಾತಿ ನಿಂದನೆ ಮಾಡಿದ್ದ.

    ಇದರಿಂದ ಬೇಸತ್ತ ಮಲ್ಲಿಕಾರ್ಜುನನು ಊರಿನ ಬಸವಣ್ಣ ದೇವರ ಗುಡಿಯ ಹಿಂದೆ ಹೋಗಿ ಮಲಗಿದ್ದ ವೇಳೆ, ಆರೋಪಿ ಧರೆಪ್ಪ ತನ್ನ ಇತರ ಮೂವರು ಸಹೋದರರಾದ ದಾದಪ್ಪ, ರಾಜಕುಮಾರ, ಬಸವರಾಜ ಅವರೆಲ್ಲರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಪಕ್ಕದಲ್ಲಿಯೇ ಚರಂಡಿ ಕೆಲಸಕ್ಕೆ ಇಟ್ಟಿದ್ದ ಸಲಿಕೆಯಿಂದ ಬೋರಲಾಗಿ ಮಲಗಿದ್ದ ಮಲ್ಲಿಕಾರ್ಜುನನ ತಲೆ ಹಿಂಬದಿಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮತನ ಸಹೋದರ ಮಂಜುನಾಥ ನಾಯ್ಕೋಡಿ ಕಲಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಘಟನಾ ಸ್ಥಳಕ್ಕೆ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಕಲಕೇರಿ ಠಾಣಾಧಿಕಾರಿ ರೇಣುಕಾ ಹಳ್ಳಿ ಹಾಗು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಲ್ಲಿಕಾರ್ಜುನನ ಶವ ಪರೀಕ್ಷೆಗಾಗಿ ಸಿಂದಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.

    • ಘಟನೆ ಹಿನ್ನಲೆ :
      ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತನ ಸಹೋದರ ಮಂಜುನಾಥ ನಾಯ್ಕೋಡಿ ಪತ್ನಿ ಸುನಿತಾ ಅವರು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಧರೆಪ್ಪ ಅಡವಿ ಕುಟುಂಬದ ವಿರುದ್ಧ ಚುನಾವಣೆ ಕಣಕ್ಕಿಳಿದಿದ್ದರು.

      ಅಂದಿನ ಚುನಾವಣೆ ಪ್ರಚಾರ ಸಂದರ್ಭದಲ್ಲಿಯೂ ಸಹ ಕೊಲೆಯಾದ ಮಲ್ಲಿಕಾರ್ಜುನನ ಜೊತೆಗೂ ಮಾತಿಗೆ ಮಾತು ಬೆಳಸಿ, ಧಮಕಿ ಹಾಕಿದ್ದರು. ನಾಯ್ಕೋಡಿ ಕುಟುಂಬದ ಸುನಿತಾ ನಿರೀಕ್ಷೆಯಂತೆ ಗೆಲುವು ಸಾಧಿಸಿದ್ದನ್ನು ಅರಗಿಸಿಕೊಳ್ಳದ ಅಡವಿ ಕುಟುಂಬದವರು ಜಗಳಕ್ಕಾಗಿ ಹಪಿಹಪಿಸುತ್ತಲೇ ಇದ್ದರು.

      ಆ ನಂತರ ಗ್ರಾಪಂ ಅಧ್ಯಕ್ಷ ಹಾಗು ಉಪಾಧ್ಯಕ್ಷ ಚುನಾವಣೆಯಲ್ಲೂ ಸ್ಪರ್ಧಿಸಿದ ಸುನಿತಾ ನಾಯ್ಕೋಡಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಇದನ್ನು ಸಹಿಸದೇ ಭಾನುವಾರ ನಡೆದ ಕ್ಷುಲ್ಲಕ ಮಾತಿನ ಚಕಮಕಿಯಿಂದಾಗಿ ಅಮಾಯಕ ಮಲ್ಲಿಕಾರ್ಜುನ ಬೇಸತ್ತು ಚುನಾವಣೆ, ಅಧಿಕಾರವೆಂದರೆ ಇದೆಲ್ಲ ಸಹಜ ಎಂದು ಮೈ ಮರೆತು ನಿದ್ದೆಗೆ ಜಾರಿದ್ದ ವೇಳೆ ಅಡವಿ ಕುಟುಂದಬವರು ಕೊಲೆ ಮಾಡುವ ಕತ್ಯಕ್ಕೆ ಇಳಿದಿರುವುದು ಮಾತ್ರ ವಿಪರ್ಯಾಸ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts