More

    ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

    ಹೊಸಪೇಟೆ
    ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಿನ್ನಲೆಯಲ್ಲಿ ತಾಲೂಕಿನ ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಕ್ಕಳಿಗೆ ಪೋಲಿಯೋ ಹಾಕುವ‌ ಮೂಲಕ‌ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿ,
    ಬೆಂಗಳೂರಿನ ರಾಮೇಶ್ವರ ಕೆಫೆಗೆ ಬಾಂಬ್ ಹಾಕಿದ ಪ್ರಕರಣಕ್ಕೆ ಎರಡು ಮೂರು ದಿನಗಳಲ್ಲಿ ಬಂಧಿಸುತ್ತೇವೆ ಎಂದಿದ್ದರು. ಅದರ ಕ್ಲ್ಯೂ ಸಿಕ್ಕಿದೆ. ನಿನ್ನೆಯ ವರೆಗೆ ಬಂಧನ ಆಗಿಲ್ಲ. ಇವತ್ತಿನ ಮಾಹಿತಿ ಬಂದಿಲ್ಲ. ಈಗ ನಾನು ಪೊಲೀಸರಿಗೆ ಕೇಳಬೇಕು. ಪ್ರಕರಣ ಸಿಸಿಬಿಗೆ ವಹಿಸಿದ್ದೇವೆ. ಅವರ ಮೇಲೆ ನಂಬಿಕೆ ಇದೆ. ವಿಧಾನ ಸೌಧದಲ್ಲಿ ಘೋಷಣೆ ಪ್ರಕರಣ ಎಫ್ ಎಸ್ ಎಲ್ ವರದಿ ಇನ್ನು ತನಿಖೆ ನಡೆಯುತ್ತದ್ದು, ವರದಿ ಇನ್ನೂ ಬಂದಿಲ್ಲಾ.

    ಯಾರ್ರಿ ಅದು ವೇದಿಕೆ?
    ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ವೇದಿಕೆ ಮಾಡಿದ್ದನ್ನು ನೋಡಿ ಸಿಎಂ ಸಿದ್ದರಾಮಯ್ಯ ಗರಂ ಆದರು. ಯಾರ್ರಿ ಅದು ವೇದಿಕೆ ಮಾಡಿದ್ದು ಎಂದು ಶಾಸಕ ಗವಿಯಪ್ಪ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಗದರಿದರು. ಮೇಲೆನೇ ಹನಿ ಹಾಕೋದು ಬನ್ನಿ ಸರ್ ಎಂದು ಸಚಿವ ನಾಗೇಂದ್ರ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಕರೆದುಕೊಂಡು ಹೋದರು.

    *ಗರಂ ಆದ ಸಿಎಂ ಸಿದ್ದರಾಮಯ್ಯ
    ಹಂಪಿ ಕನ್ನಡ ವಿವಿಯ ಸಮಸ್ಯೆಗಳ ಕುರಿತು ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಗರಂ ಆದರು. ಯಾರ್ರೀ ಅದಕ್ಕೆ ಕಾರಣ? ಹೇಳ್ರೀ, ನಿಮ‌್ಮ‌ ಪ್ರಶ್ನೆಗೆ ನಾವು ಬರಿ ಉತ್ತರ ಕೋಡಬೇನೆಂಡ್ರೀ? ಎಂದು ಮಾತನಾಡುತ್ತಲೇ ಹೊರಟು ಹೋದರು.

    ಸಚಿವ ಬಿ.ನಾಗೇಂದ್ರ, ಕೆ.ಎಂ.ಎಫ್ ರಾಜ್ಯಾಧ್ಯಕ್ಷ ಎಲ್.ಭೀಮನಾಯ್ಕ, ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಎಸ್ಪಿ ಬಿ.ಎಲ್.ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಡಿಎಚ್ ಒ ಶಂಕರ್ ನಾಯ್ಕ, ಆರ್.ಸಿ.ಎಚ್.ಜಂಬ್ಬಯ್ಯನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts