More

    515 ವಾಹನಗಳು ಪೊಲೀಸರ ವಶ ; ಸೋಂಕಿನ ವಿರುದ್ಧ ಸಮರ

    ತುಮಕೂರು : ಮಿತಿಮೀರಿ ವ್ಯಾಪಿಸಿರುವ ಕರೊನಾ ನಿಯಂತ್ರಿಸಲು ರಾಜ್ಯಾದ್ಯಂತ ಜಾರಿಯಾಗಿರುವ ಜನತಾ ಕರ್ಯ್ೂಗೆ ಜಿಲ್ಲೆಯಲ್ಲಿ ಜನಬೆಂಬಲ ವ್ಯಕ್ತವಾಯಿತು, ತುಮಕೂರು ಸೇರಿ ಜಿಲ್ಲೆಯೆಲ್ಲೆಡೆ ಜನರು ಮನೆಯಲ್ಲಿಯೇ ಉಳಿದು ಸೋಂಕಿನ ವಿರುದ್ಧ ಸಮರದಲ್ಲಿ ಯೋಧರಾದರು.

    ಬೆಳಗ್ಗೆ 10ರವರೆಗೆ ಕೆಲವು ವಲಯಗಳಿಗೆ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಜನರ ಓಡಾಟವಿತ್ತು, 10ರ ನಂತರ ಆಸ್ಪತ್ರೆ, ಬ್ಯಾಂಕ್, ಕೃಷಿ ಮತ್ತಿತರ ತೀರ ಅಗತ್ಯದ ಕೆಲಸವಿದ್ದವರಷ್ಟೇ ಮನೆಯಿಂದ ಹೊರಬಂದರು. ಕೆಲವರು ಸಕಾರಣ ನೀಡಲಾಗದೆ ಪೊಲೀಸರ ಕೈಗೆ ಸಿಕ್ಕಿ ಬಿದ್ದರು, 515 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಬಿಸಿ ಮುಟ್ಟಿಸಿದರು.

    ಗ್ರಾಮೀಣ ಭಾಗದಲ್ಲಿ ರೈತರು ಹೊಲ, ತೋಟಗಳಿಗೆ ಬೈಕ್‌ನಲ್ಲಿ ತೆರಳುವುದು ಅನಿವಾರ್ಯವಾಗಿದ್ದು ಪೊಲೀಸರ ಜತೆ ಮಾತಿನ ಚಕಮಕಿಗೆ ಕಾರಣವಾಗಿತ್ತು, ಕೆಲವು ಪೊಲೀಸರು ತಾಳ್ಮೆ ಕಳೆದುಕೊಂಡು ಹೊರಟಾಗಿ ವರ್ತಿಸಿದ್ದು ನಡೆಯಿತು, ಇನ್ನೂ ಕೆಲವು ಜನರು ಪೊಲೀಸರೊಂದಿಗೂ ಜಗಳಕ್ಕೆ ನಿಂತಿದ್ದೂ ಕಾಣಿಸಿತು, ಬಹುತೇಕರು ಪ್ರಜ್ಞಾವಂತಿಕೆ ಮೆರೆದರು.
    ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಖುದ್ದು ರಸ್ತೆಗಿಳಿದು ನಿಗಾ ವಹಿಸಿದ್ದರು, ರಸ್ತೆಯಲ್ಲಿ ಓಡಾಡುವವರನ್ನು ನಿಲ್ಲಿಸಿ ಕಾರಣ ಕೇಳಿ ಮಾರ್ಗದರ್ಶನ ಮಾಡುತ್ತಿದ್ದರು. ಎಲ್ಲೆಡೆಯೂ ಪೊಲೀಸ್ ಅಲರ್ಟ್ ವ್ಯವಸ್ಥೆ ಮಾಡಲಾಗಿದ್ದು ಜನರು ಹೊರಗೆ ಅನಗತ್ಯವಾಗಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಿಸಿತ್ತು.

    ಕರ್ಯ್ೂ ಮುಗಿದ ವಾಹನಗಳ ಬಿಡುಗಡೆ: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಜನತಾ ಕರ್ಯ್ೂ ಜಾರಿಯಾಗಿದ್ದು ಮುನ್ನೆಚ್ಚರಿಕೆ ಕಡೆಗಣಿಸಿ ವಾಹನಗಳಲ್ಲಿ ಸೂಕ್ತ ಕಾರಣ ಇಲ್ಲದೆ ತಿರುಗಾಡುತ್ತಿದ್ದ 515 ವಾಹನಗಳನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ತುಮಕೂರು ನಗರ ಉಪ ವಿಭಾಗದಲ್ಲಿ 239, ಕುಣಿಗಲ್ ವಿಭಾಗ 56, ಮಧುಗಿರಿ ಉಪವಿಭಾಗ 66, ತಿಪಟೂರು ಉಪವಿಭಾಗ 59, ಶಿರಾ ಉಪ ವಿಭಾಗ 95 ಸೇರಿ ಜಿಲ್ಲೆಯಲ್ಲಿ ಒಟ್ಟು 515 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಜನತಾ ಕರ್ಯ್ೂ ಮುಗಿದ ನಂತರ ಮಾಲೀಕರ ಕೈಗೆ ವಾಹನ ಸಿಗಲಿವೆ.

    ದಿನಪತ್ರಿಕೆ ವಿತರಣೆಗೆ ಯಾವುದೇ ನಿರ್ಬಂಧವಿಲ್ಲ. ಕರ್ತವ್ಯದಲ್ಲಿರುವ ಪೊಲೀಸರು ತಡೆದರೆ ತಮ್ಮಲ್ಲಿರುವ ಬಿಲ್ ಪುಸ್ತಕ ತೋರಿಸಬೇಕು. ಪಾವಗಡದ ಘಟನೆ ಬಗ್ಗೆ ಪರಿಶೀಲಿಸುತ್ತೇನೆ, ಇಂತಹ ಘಟನೆ ಮರುಕಳುಹಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
    ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ಆಧೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts