More

    ಪಾಲಿಕೆ ಅಳವಡಿಸಿದ್ದ ನೆಲಹಾಸಿಗಿಲ್ಲ ಕಿಮ್ಮತ್ತು!

    ಬೆಳಗಾವಿ: ನಗರದ ವಿವಿಧ ಭಾಗಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಂದಾಗಿ ಮಹಾನಗರ ಪಾಲಿಕೆ ಈ ಹಿಂದೆ ಅಳವಡಿಸಿದ್ದ ಪೇವರ್ಸ್‌ಗಳನ್ನು ಸುರಕ್ಷಿತವಾಗಿ ಸ್ಥಳಾಂತರಗೊಳಿಸುವ ಕೆಲಸ ಆಗುತ್ತಿಲ್ಲ. ಇದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗಿದ್ದು, ಬೀದಿ ದೀಪದ ಕಂಬ ಸಂರಕ್ಷಣೆಗೂ ಅಕಾರಿಗಳು ಕ್ರಮ ಕೈಗೊಂಡಿಲ್ಲ.

    2015 ರಿಂದ 2020ರ ಅವಯಲ್ಲಿ ಪಾಲಿಕೆಯು ತನ್ನ 58 ವಾರ್ಡ್ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ, ಅಂಗಳದ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಪೇವರ್ಸ್ ಅಳವಡಿಕೆಗೆ ಕೋಟ್ಯಂತರ ರೂ. ವೆಚ್ಚ ಮಾಡಿದೆ. ಪ್ರತಿ ವಾರ್ಡ್‌ನಲ್ಲಿ
    ಪೇವರ್ಸ್‌ಗಾಗಿಯೇ ವಾರ್ಷಿಕ 2 ರಿಂದ 3 ಲಕ್ಷ ರೂ. ಖರ್ಚು ಮಾಡಿದೆ. ಆದರೆ, ಸ್ಮಾರ್ಟ್‌ಸಿಟಿ ಕಾಮಗಾರಿಯಿಂದಾಗಿ ಇಂತಹ ಪ್ರದೇಶಗಳಲ್ಲಿ ಪಾಲಿಕೆ ಅಳವಡಿಸಿದ್ದ ಪೇವರ್ಸ್ ಸಂರಕ್ಷಣೆ ಮಾಡಿಲ್ಲ. ಬದಲಿಗೆ ಜೆಸಿಬಿ ಬಳಸಿ ಸಂಪೂರ್ಣ ತೆರವು ಮಾಡಲಾಗುತ್ತಿದೆ.

    ಗುಜರಿ ಪಾಲಾದ ಕಂಬಗಳು: ನಗರದ ವಿವಿಧೆಡೆ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ಡಿವೈಡರ್ ಮಧ್ಯೆ ಸುಮಾರು 800ಕ್ಕೂ ಅಕ ಬೀದಿದೀಪ ಹಾಗೂ ಚಿತ್ತಾಕರ್ಷಕ ದೀಪಗಳ ಕಂಬ ಅಳವಡಿಸಲಾಗಿತ್ತು. ಇದೀಗ ಸ್ಮಾರ್ಟ್‌ಸಿಟಿ ಕಾಮಗಾರಿ ಕೈಗೊಂಡಿರುವ ಪ್ರದೇಶಗಳಲ್ಲಿ ಪಾಲಿಕೆ ಅಳವಡಿಸಿರುವ ಬೀದಿ ದೀಪದ ಕಂಬಗಳನ್ನು ತೆರವುಗೊಳಿಸಲಾಗುತ್ತಿದೆ. ಅದರಲ್ಲಿ ಕೆಲ ಕಂಬಗಳು, ಬಲ್ಬ್, ವಿದ್ಯುತ್ ತಂತಿಯನ್ನು ಗುಜರಿಗೆ ಹಾಕಲಾಗಿದೆ.

    ಸ್ಥಳೀಯರ ಪ್ರಶ್ನೆ: ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿರುವ ಆಯಾ ಭಾಗದಲ್ಲಿ ಪಾಲಿಕೆ ಅಕಾರಿಗಳು ಮುಂಜಾಗ್ರತವಾಗಿ ಪೇವರ್ಸ್, ವಿದ್ಯುತ್ ಕಂಬ ಇನ್ನಿತರ ವಸ್ತುಗಳನ್ನ ಸುರಕ್ಷಿತವಾಗಿ ತೆರವುಗೊಳಿಸಿ ವಶಕ್ಕೆ ಪಡೆದುಕೊಂಡಿಲ್ಲ. ಸ್ಮಾರ್ಟ್‌ಸಿಟಿ ಕಾಮಗಾರಿ ವೇಳೆ ಪೇವರ್ಸ್ ಸಂಪೂರ್ಣ ಹಾಳಾಗಿವೆ. ಇದರಿಂದ ಪಾಲಿಕೆಗಾಗಿರುವ ಲಕ್ಷಾಂತರ ರೂ. ನಷ್ಟಕ್ಕೆ ಯಾರು ಹೊಣೆ ಎಂದು ಸ್ಥಳೀಯರಾದ ರಮೇಶ ಎಸ್.ಅನಗೋಳಕರ್, ಜಯಶ್ರೀ ಎಸ್.ಗೋಂದಳಿ, ಶಿವಪ್ರಸಾದ ಎಸ್.ಹೆಗಡೆ ಇತರರು ಪ್ರಶ್ನಿಸಿದ್ದಾರೆ.

    ಬೆಳಗಾವಿ ನಗರದಲ್ಲಿ ಡಿವೈಡರ್ ಮಧ್ಯೆ ಅಳವಡಿಸಲಾದ ಹಳೆಯ ಬೀದಿ ದೀಪ ಕಂಬಗಳನ್ನು ಪಾಲಿಕೆ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆ ಸ್ಥಳದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಹೊಸದಾಗಿ ಬೀದಿ ದೀಪ ಅಳವಡಿಸಲಾಗುತ್ತಿದೆ. ಸಂಪೂರ್ಣ ಹಾಳಾಗಿರುವ ಪೇವರ್ಸ್ ಹೊರತುಪಡಿಸಿ ಇನ್ನುಳಿದ ಪೇವರ್ಸ್ ಸಂಗ್ರಹಿಸಲಾಗುತ್ತಿದೆ.
    | ಶಶಿಧರ ಕುರೇರ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

    ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿ ವೇಳೆ ತೆರವುಗೊಳಿಸಲಾಗಿರುವ ಬೀದಿದೀಪದ ಕಂಬಗಳನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಲಾಗಿದೆ. ಅಲ್ಲದೆ, ಅವಶ್ಯಕತೆ ಇರುವ ಕಡೆ ವಿದ್ಯುತ್ ಕಂಬ, ಬಲ್ಬ್ ಬಳಕೆ ಮಾಡಲು ಕ್ರಮ ವಹಿಸಲಾಗಿದೆ. ಪಾದಚಾರಿ ಮಾರ್ಗ ಇತರ ಕಡೆಗಳಲ್ಲಿ ಅಳವಡಿಸಿರುವ ಪೇವರ್ಸ್ ಹಾಳಾಗದಂತೆ ಮುನ್ನಚ್ಚರಿಕೆ ವಹಿಸಿ, ಅವುಗಳನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳಲಾಗುವುದು.
    | ಜಗದೀಶ ಕೆ.ಎಚ್ ಮಹಾನಗರ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts