ಸಮಾಜಕ್ಕೆ ಒಳಿತು ಮಾಡುವ ಗುಣ ಬೆಳೆಸಿಕೊಳ್ಳಿ

ಅಳವಂಡಿ: ಪ್ರತಿಯೊಂದು ಧರ್ಮವನ್ನು ಪ್ರೀತಿಸುವುದರ ಜತೆಗೆ ನಮ್ಮ ಧರ್ಮವನ್ನು ಗೌರವಿಸುವ ಹಾಗೂ ಸಮಾಜಕ್ಕೆ ಒಳಿತನ್ನು ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಮುಂಡರಗಿಯ ನಾಡೋಜ ಡಾ.ಅನ್ನದಾನೇಶ್ವರ ಮಹಾಸ್ವಾಮಿಗಳು ತಿಳಿಸಿದರು.

ಇದನ್ನೂ ಓದಿ: ಹಾನಗಲ್ ಶ್ರೀಗಳು ವೀರಶೈವ ಸಮಾಜದ ಮಹಾಚೇತನ

ನಿಲೋಗಿಪುರ ಗ್ರಾಮದ ಶ್ರೀಮಾರುತೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ 14ನೇ ವರ್ಷದ ಕಲಬುರಗಿ ಶ್ರೀಶರಣ ಬಸವೇಶ್ವರ ಪುರಾಣ ಮಹಾ ಮಂಗಲ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಹೂವಿನ ಹಡಗಲಿಯ ಶ್ರೀಹಿರೇಶಾಂತವೀರ ಸ್ವಾಮಿಗಳು ಮಾತನಾಡಿ, ಜಾತಿ, ಮತ, ಧರ್ಮ ಎನ್ನದೇ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ. ಇದರಿಂದ ಎಲ್ಲರಲ್ಲೂ ಸಾಮೂಹಿಕ ಒಗ್ಗಟ್ಟಿನ ಭಾವನೆ ಮೂಡಲಿದೆ. ಪಾಲಕರು ಮಕ್ಕಳಿಗೆ ಶಿಕ್ಷಣವೆಂಬ ಆಸ್ತಿ ನೀಡಿ.

ಬಾಹ್ಯ ಆಸ್ತಿಗಿಂತ ಶಿಕ್ಷಣವೇ ದೊಡ್ಡ ಅಸ್ತ್ರ. ಉತ್ತಮ ಶಿಕ್ಷಣ ಮಕ್ಕಳ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು. ಇದಕ್ಕೂ ಮೊದಲು ತಳಿರು, ತೋರಣ ಹಾಗೂ ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಶ್ರೀಶರಣಬಸವೇಶ್ವರರ ಭಾವಚಿತ್ರವನ್ನಿರಿಸಿ ವಾದ್ಯ ಮೇಳ ಹಾಗೂ ಬೊಮ್ಮಸಾಗರದ ಭಜನಾ ಮೇಳದೊಂದಿಗೆ ಮೆರವಣಿಗೆ ದೇವಸ್ಥಾನವನ್ನು ತಲುಪಿತು.ನಂತರ ಮಹಾದಾಸೋಹ ನಡೆಯಿತು.

ಪುರಾಣ ಪ್ರವಚನಕಾರರಾದ ಶ್ರೀಶಿವಯೋಗಿ ಶಾಸ್ತ್ರಿಗಳು ಹಿರೇಮಠ, ಪಠಣಕಾರ ಕಾಶಪ್ಪ ಮಾಸ್ತರ, ತಬಲಾ ವಾದಕ ಶರಣಪ್ಪ ಪ್ರಮುಖರಾದ ರಾಮಣ್ಣ, ಹನುಮಪ್ಪ, ಮಹೇಶರಡ್ಡಿ, ಪಕೀರಜ್ಜ, ಅಂದಪ್ಪ, ಮಂಜುನಾಥ ಕೇಸಲಾಪುರ, ಲಕ್ಷ್ಮಣ, ಅಶೋಕ, ಸ್ಣಪಕೀರಪ್ಪ, ನಾಗಪ್ಪ, ಶಿವಪ್ಪ, ಮಹೇಶ, ಶ್ರೀಕಾಂತ, ಶರಣಪ್ಪ, ವಿಶ್ವನಾಥ, ಪರಶುರಾಮ, ಈರಪ್ಪ, ಕನಕನಗೌಡ, ಶಿವಪ್ಪ, ರವಿ ಇದ್ದರು.

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…