More

    ಭೂವಿವಾದಕ್ಕೆ ಕೊಡಲಿಯಿಂದ ಹಲ್ಲೆ; ರಕ್ತದ ಮಡುವಿನಲ್ಲಿದ್ದವನನ್ನು ಹೆಗಲ ಮೇಲೆ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು…!

    ಹೈದರಾಬಾದ್​: ಮಾರಕಾಸ್ತ್ರದಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ತೆಲಂಗಾಣದ ಇಬ್ಬರು ಪೊಲೀಸರು ಹೆಗಲ ಮೇಲೆ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರ ಈ ಕಾಳಜಿ ಹಾಗೂ ಕರ್ತವ್ಯಪರತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಮುಸ್ತಾಬಾದ್​ ಗ್ರಾಮದ ಬಳಿ ಕೃಷಿ ಭೂಮಿ ವಿವಾದದ ಹಿನ್ನೆಲೆಯಲ್ಲಿ ಪಂಡುಗ ರಾಜಯ್ಯ ಎಂಬುವವನನ್ನು ಆತನ ಸಂಬಂಧಿಯೇ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ.  ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಲಕ್ಷ್ಮಣ ರೆಡ್ಡಿ ಹಾಗೂ ಕಾನ್​ಸ್ಟೆಬಲ್​ ರವಿ ಸ್ಥಳಕ್ಕೆ ದೌಡಾಯಿಸಿದರು. ಜಮೀನಿನಲ್ಲೇ ರಕ್ತದ ಮಡುವಿನಲ್ಲಿ ಗಾಯಾಳು ಬಿದ್ದಿದ್ದ.

    ಇದನ್ನೂ ಓದಿ; ನಗರದ 10 ಜನರಲ್ಲಿ ಒಬ್ಬರಿಗೆ ಕೆಲಸವಿಲ್ಲ; ನಿರ್ಬಂಧ ಸಡಿಲಿಕೆ ಹೊರತಾಗಿಯೂ ಸೃಷ್ಟಿಯಾಗದ ಉದ್ಯೋಗಾವಕಾಶ

    ಅಂಬುಲೆನ್ಸ್​ಗಾಗಿ ಕಾಯದೇ, ಆತನನ್ನು ಅಕ್ಷರಶಃ ಹೊತ್ತುಕೊಂಡು ಅರ್ಧ ಕಿ.ಮೀ ದೂರದಲ್ಲಿದ್ದ ಮುಖ್ಯರಸ್ತೆಗೆ ಬಂದಿದ್ದಾರೆ. ಬಳಿಕ ಗಾಯಾಳುವನ್ನು ಹಿಡಿದುಕೊಂಡು ಒಬ್ಬ ಪೊಲೀಸ್​ ಬೈಕ್​ ಮೇಲೆ ಕುಳಿತುಕೊಂಡರೆ, ಮತ್ತೊಬ್ಬ ಬೈಕ್ ಚಲಾಯಿಸಿಕೊಂಡು ಹತ್ತಿರದ ಕ್ಲಿನಿಕ್​ಗೆ ಕೊಂಡೊಯ್ದಿದ್ದಾರೆ. ಪೊಲೀಸರು ಇಷ್ಟೆಲ್ಲ ಶ್ರಮಪಟ್ಟರೂ, ಗಾಯಾಳುವನ್ನು ಉಳಿಸಲಾಗಲಿಲ್ಲ. ಆದರೆ, ಪೊಲೀಸರ ಈ ಕಾರ್ಯಕ್ಕೆ ಬಹುಮಾನ ನೀಡುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್​ ಹೆಗಡೆ ಹೇಳಿದ್ದಾರೆ.

    ಈ ನಡುವೆ, ಹಲ್ಲೆ ನಡೆಸಿದ ಮಲ್ಲೇಶ್​ ಎಂಬುವವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಕಲಹದಲ್ಲಿ ಪಾಲ್ಗೊಂಡಿದ್ದ ಕುಟುಂಬದ ಇತರ ಸದಸ್ಯರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

    ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts