More

    ಅಲ್ಲಿ ಪೊಲೀಸರೇ ಬಾಗಿಲು ಮುರಿಯಲೆತ್ನಿಸಿದ್ದೇಕೆ?; ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಜಿಮ್ ಮಾಲೀಕ!

    ಲಂಡನ್​: ಸಾಮಾನ್ಯವಾಗಿ ಪೊಲೀಸರದು ಬಾಗಿಲು ಮುಚ್ಚಿಸುವ ಕೆಲಸ. ಸಮಯ ಮೀರಿ ತೆರೆದಿದ್ದರೆ ಬಂದು ಬಾಗಿಲು ಮುಚ್ಚಿಸುತ್ತಾರೆ ಅಥವಾ ಯಾರಾದರೂ ಕಳ್ಳಕಾಕರು ಬಾಗಿಲು ಮುರಿದಿದ್ದರೆ ಬಂದು ತನಿಖೆ ನಡೆಸುತ್ತಾರೆ. ಆದರೆ ಇಲ್ಲಿ ಸ್ವತಃ ಪೊಲೀಸರೇ ಬಾಗಿಲು ಮುರಿಯಲೆತ್ನಿಸಿದ್ದಾರೆ.

    ಹೌದು… ಜಿಮ್​ ಸೆಂಟರ್ ಒಂದರ ಬಾಗಿಲು ಬಡಿದು ಬಡಿದು ಸಾಕಾದ ಪೊಲೀಸರು ಕೊನೆಗೆ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಪೊಲೀಸರ ಈ ನಡೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಮ್ ಮಾಲೀಕ, ಇದೀಗ ಪೊಲೀಸರ ವಿರುದ್ಧವೇ ಕ್ರಮ ಜರುಗುವಂತೆ ಮಾಡಲು ನ್ಯಾಯಾಲಯದ ಮೆಟ್ಟಿಲೇರುವುದಾಗಿ ತೊಡೆತಟ್ಟಿದ್ದಾನೆ.

    ಇಷ್ಟೆಲ್ಲ ನಡೆದದ್ದು ಲಂಡನ್​ನಲ್ಲಿ.. ಇಲ್ಲಿನ ಹ್ಯಾಂಪ್​ಸ್ಟೆಡ್​ನಲ್ಲಿ ಜೇಮ್ಸ್​ ಕೂಪರ್ ಎಂಬಾತ ಜಿಮ್ ಹೊಂದಿದ್ದಾನೆ. ಆದರೆ ಲಾಕ್​ಡೌನ್​ ಅವಧಿಯಲ್ಲೂ ಅದನ್ನು ಆತ ಬಳಸುತ್ತಿದ್ದಾನೆ ಎಂಬ ಗುಮಾನಿ ಮೇರೆಗೆ ಜಿಮ್​ನತ್ತ ಬಂದಿದ್ದ ಏಳು ಪೊಲೀಸರು ತುಂಬ ಹೊತ್ತು ಬಾಗಿಲು ಬಡಿದಿದ್ದಾರೆ. ಕೊನೆಗೆ ಪೊಲೀಸರಲ್ಲಿ ಒಬ್ಬ ಗೋಡೆ ಮೇಲಿದ್ದ ಕೀ-ಬಾಕ್ಸ್​ ಒಡೆದು ಬಾಗಿಲು ಮುರಿಯುವ ಪ್ರಯತ್ನ ಮಾಡಿದ್ದಾನೆ.

    ಈ ಬಗ್ಗೆ ತನ್ನ ಸೆಕ್ಯುರಿಟಿ ಸಿಸ್ಟಮ್​ ಮೂಲಕ ತಿಳಿದು ಸಿಟ್ಟಾಗಿರುವ ಜೇಮ್ಸ್​ ಕೂಪರ್, ವಾರಂಟ್ ಇಲ್ಲದೆ ಹೀಗೆ ಒಳಗೆ ನುಗ್ಗಲು ಯತ್ನಿಸಿರುವುದು ಕಾನೂನುಬಾಹಿರ. ಜಿಮ್​ ಬಾಗಿಲು ಬಡಿಯುತ್ತಲೇ ಇರುವ ಬದಲು ಅದಕ್ಕೂ ಮುಖ್ಯವಾದ ಕೆಲಸ ಲಂಡನ್​ನಲ್ಲಿ ಬೇಕಾದಷ್ಟಿವೆ. ಅಷ್ಟಕ್ಕೂ ಜಿಮ್​ ಒಳಗೆ ಯಾರೂ ಆಪತ್ತಿಗೆ ಸಿಕ್ಕಿರಲಿಲ್ಲ. ಅದಾಗ್ಯೂ ಬಾಗಿಲು ಮುರಿದು ಪ್ರವೇಶಿಸಲು ಯತ್ನಿಸಿದ್ದು ತಪ್ಪು. ಆ ಜಿಮ್ ಕಟ್ಟಿ ಬೆಳೆಸಲು ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಅವರು ಎದುರು ಹಾಕಿಕೊಳ್ಳಬಾರದವನನ್ನು ಎದುರು ಹಾಕಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗುವಂತೆ ಮಾಡುತ್ತೇನೆ ಎಂದು ಜೇಮ್ಸ್​​ ಕೂಪರ್ ತಿರುಗಿ ಬಿದ್ದಿದ್ದಾನೆ.

    ಅಲ್ಲಿ ಪೊಲೀಸರೇ ಬಾಗಿಲು ಮುರಿಯಲೆತ್ನಿಸಿದ್ದೇಕೆ?; ಪೊಲೀಸರ ವಿರುದ್ಧವೇ ತಿರುಗಿ ಬಿದ್ದ ಜಿಮ್ ಮಾಲೀಕ!

    ಕೂಪರ್ ತನ್ನ ಜಿಮ್​ನಲ್ಲಿ ಹಲವು ಗಣ್ಯರಿಗೆ ತರಬೇತಿ ನೀಡುತ್ತಿದ್ದು, ಹೈಪ್ರೊಫೈಲ್ ಜಿಮ್​ ಟ್ರೇನರ್ ಎನಿಸಿಕೊಂಡಿದ್ದಾನೆ. ಲಂಡನ್​ನಲ್ಲಿ ಲಾಕ್​ಡೌನ್​ ಅವಧಿಯಲ್ಲಿ ಜಿಮ್​ ತೆರೆಯದಂತೆ ಅಲ್ಲಿನ ಸರ್ಕಾರ ಸೂಚನೆ ನೀಡಿದ್ದು, ಡಿಸೆಂಬರ್ 2ರ ಬಳಿಕ ನಿರ್ಬಂಧ ತೆರವುಗೊಳಿಸುವುದಾಗಿದೆ ಹೇಳಿದೆ. ಮತ್ತೊಂದೆಡೆ ನಮ್ಮದು ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೆಚ್ಚಿಸುವ ಕೆಲಸ ಎಂದು ಕೆಲವರು ಜಿಮ್ ನಡೆಸುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು. (ಏಜೆನ್ಸೀಸ್​)

    ಹಸೆಮಣೆ ಏರಬೇಕಿದ್ದ ವರ ದಿಬ್ಬಣ ಸಮೇತ ಬೀದಿಗಿಳಿದ; ಅದಕ್ಕೆ ಕಾರಣ ಒಬ್ಬಿಬ್ಬರಲ್ಲ..!

    ವಸಿಷ್ಠಸಿಂಹ ವರ್ಸಸ್ ಕಿಶೋರ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts