More

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ಮುಂಬೈ: ಮಹಾರಾಷ್ಟ್ರದ ಅಹಮದ್​​ನಗರ ಜಿಲ್ಲೆಯಲ್ಲಿ ಪ್ರತಿದಿನ 350 ಕರೊನಾ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಸಾಮಾಜಿಕ ಅಂತರ ಕಾಪಾಡಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ನಿಯಂತ್ರಿಸಲು ಮದುವೆ ಮಂಟಪಗಳಲ್ಲಿ ಪೊಲೀಸರನ್ನು ನಿಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ.

    ಅಹಮದ್​ನಗರ್ ಜಿಲ್ಲೆಯು, ಕರೊನಾ ಪ್ರಕರಣಗಳು ಉಲ್ಬಣಿಸಿರುವ ಪುಣೆ ಮತ್ತು ಔರಂಗಾಬಾದ್​ ಜಿಲ್ಲೆಗಳ ಗಡಿಯಲ್ಲಿದ್ದು, ಕರೊನಾ ಸೋಂಕನ್ನು ತಡೆಗಟ್ಟಲು ಜಿಲ್ಲಾ ಆಡಳಿತ ಹರಸಾಹಸ ಮಾಡುತ್ತಿದೆ. ಜಿಲ್ಲೆಯಲ್ಲಿ ಜನರ ಓಡಾಟದ ಮೇಲೆ ನಿರ್ಬಂಧ ಅಥವಾ ಭಾಗಶಃ ಲಾಕ್​ಡೌನ್ ಮಾಡುವ ಪ್ರಸ್ತಾಪವೂ ಬಂದಿತ್ತು. ಆದರೆ, ರಾಜ್ಯದ ಸಿಎಂ ಉದ್ಧವ್​ ಠಾಕ್ರೆಯೊಂದಿಗೆ ನಡೆದ ಜಿಲ್ಲಾಧಿಕಾರಿಗಳ ಸಭೆಯ ನಂತರ ಯಾವುದೇ ಹೊಸ ನಿರ್ಬಂಧಗಳನ್ನು ಹೇರದಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಬದಲಿಗೆ, ಈಗಾಗಲೇ ವಿಧಿಸಲಾಗಿರುವ ನಿರ್ಬಂಧಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭೋಸಲೆ ಹೇಳಿದ್ದಾರೆ.

    ಇದನ್ನೂ ಓದಿ: ಅನುಮತಿ ಕೊಡಿ ನಾವೇ ಹುಲಿಯನ್ನು ಕೊಂದು ಹಾಕ್ತೀವಿ ಎಂದ ಶಾಸಕರು

    ಹೆಚ್ಚು ಜನ ಸೇರದಂತೆ ವಿಧಿಸಿರುವ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು, ಮದುವೆ ಮಂಟಪಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ಇಡೀ ದಿನ ಮದುವೆ ಹಾಲ್​ಗಳಲ್ಲಿ ಡ್ಯೂಟಿ ಮಾಡಲಿರುವ ಪೊಲೀಸ್​ ಸಿಬ್ಬಂದಿ, 50 ಜನರಿಗಿಂತ ಹೆಚ್ಚು ಅತಿಥಿಗಳು ಆಗಮಿಸಿದರೆ ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರಂತೆ. ಬರುವ ವಾರದಲ್ಲಿ ಜಿಲ್ಲೆಯಲ್ಲಿ 44 ಮದುವೆ ಸಮಾರಂಭಗಳು ಆಯೋಜಿತವಾಗಿದ್ದು, ಈ ಸ್ಥಳಗಳಲ್ಲಿ ಸ್ಥಳೀಯ ಪೊಲೀಸರು ಹೆಚ್ಚಿನ ನಿಗಾ ವಹಿಸಲಿದ್ದಾರಂತೆ.

    “ಜಿಲ್ಲೆಯಲ್ಲಿ ಮದುವೆಗಳು ಮತ್ತು ಇತರ ಸಮಾರಂಭಗಳು ಹೆಚ್ಚು ಜನಸಂದಣಿಯೊಂದಿಗೆ ನಡೆಯುತ್ತಿರುವುದು ಕಂಡುಬಂದಿದೆ. ಕರೊನಾ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಇದು ಚಿಂತಾಜನಕ ವಿಷಯ. ಆದ್ದರಿಂದ ವಿವಾಹೋತ್ಸವದ ಬುಕ್ಕಿಂಗ್​ಗಳಿರುವ ಮಂಟಪಗಳಲ್ಲಿ ಪೊಲೀಸ್​ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅವರು 50 ಕ್ಕಿಂತ ಹೆಚ್ಚು ಜನರು ಭಾಗವಹಿಸಿದರೆ ವೀಡಿಯೋ ದಾಖಲಿಸಿಕೊಂಡು, ನಿಯಮ ಉಲ್ಲಂಘಿಸುವವರ ಮೇಲೆ ದಂಡ ವಿಧಿಸಲಿದ್ದಾರೆ” ಎಂದು ಜಿಲ್ಲಾಧಿಕಾರಿ ಭೋಸಲೆ ತಿಳಿಸಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಾವಿರ ಮಹಿಳೆಯರ ಬಾಯಲ್ಲಿ ಶಿವ ತಾಂಡವ! ಶಿವನ ಭಕ್ತಿಯಲ್ಲಿ ಮಿಂದೆದ್ದ ವಾರಣಾಸಿ

    ಗೀರ್ ಅರಣ್ಯ ಪ್ರದೇಶದಲ್ಲಿ ‘ಲಯನ್​ ಶೋ’ : ಏಳು ಜನರಿಗೆ ಜೈಲು ಶಿಕ್ಷೆ

    “ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts