More

    ದೆಹಲಿ ಹುಡುಗರ ಅಶ್ಲೀಲ ಚಾಟ್​ ಪ್ರಕರಣಕ್ಕೆ ಟ್ವಿಸ್ಟ್​; ಶಾಕಿಂಗ್​ ಸತ್ಯ ಬಿಚ್ಚಿಟ್ಟ ಪೊಲೀಸರು

    ನವದೆಹಲಿ: ಸ್ವಲ್ಪ ದಿನಗಳ ಹಿಂದೆ ದೆಹಲಿಯ ಪ್ರತಿಷ್ಠಿತ ಶಾಲೆಗಳ ಗಂಡುಮಕ್ಕಳ ಆನ್​ಲೈನ್​ ಚಾಟ್​ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು.

    ಇನ್ನೂ 18ವರ್ಷ ತುಂಬದ ಗಂಡು ಮಕ್ಕಳು ಇನ್ಸ್ಟಾಗ್ರಾಂ ಗ್ರುಪ್​ ರಚಿಸಿಕೊಂಡು ಅದರಲ್ಲಿ ಗ್ಯಾಂಗ್​ ರೇಪ್​, ಸೆಕ್ಸ್​, ಹುಡುಗಿಯರ ನಗ್ನ ದೇಹಗಳ ಫೋಟೋ ಶೇರ್​ ಮಾಡಿದ್ದು ವೈರಲ್​ ಆಗಿತ್ತು. ಟ್ವಿಟರ್​ನಲ್ಲಂತೂ ಬಾಯ್ಸ್​ ಲಾಕರ್​ ರೂಂ ಹ್ಯಾಷ್​​ಟ್ಯಾಗ್​ ಟ್ರೆಂಡ್​ ಆಗಿಬಿಟ್ಟಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರುಪ್​​​ನ್ನು ಡಿ ಆ್ಯಕ್ಟಿವೇಟ್​ ಮಾಡಿ, ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

    ಇದನ್ನೂ ಓದಿ: ಆನ್​ಲೈನ್​ ಚಾಟಿಂಗ್​ನಲ್ಲಿ 18 ತುಂಬದ ಹುಡುಗರ ಪೋಲಿ ಮಾತು ಕೇಳಿ ಬೆಚ್ಚಿಬಿದ್ದ ಪೊಲೀಸರು!

    ಈಗ ಬಾಯ್ಸ್ ಲಾಕರ್​ ರೂಂ ಅಶ್ಲೀಲ ಚಾಟ್​ಗಳ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಒಂದು ಶಾಕಿಂಗ್​ ಸತ್ಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

    ಈ ಗ್ಯಾಂಗ್​ರೇಪ್​ ಬಗ್ಗೆ ಮೊದಲು ಮಾತು ಶುರುವಾಗಿದ್ದು ಬಾಯ್ಸ್ ಲಾಕರ್​ ರೂಂ ಎಂಬ ಆನ್​ಲೈನ್​ ಗ್ರುಪ್​​ನಲ್ಲಿ ಅಲ್ಲ. ಓರ್ವ ಹುಡುಗಿ ಮಾಡಿದ ಕೆಲಸ. ಹುಡುಗನ ಹೆಸರಿನಲ್ಲಿ ಇನ್ನೋರ್ವ ಹುಡುಗನಿಗೆ ಗ್ಯಾಂಗ್​ರೇಪ್​ ಬಗ್ಗೆ ಮೆಸೇಜ್​ ಕಳಿಸಿದ್ದಾರೆ.

    ಮೊದಲು ಸೆಕ್ಸ್​, ರೇಪ್​ ಸಂಭಾಷಣೆ ಶುರುವಾಗಿದ್ದು ಸ್ನ್ಯಾಪ್​ಚಾಟ್​ ಆ್ಯಪ್​ನಲ್ಲಿ. ಅದೂ ಓರ್ವ ಹುಡುಗಿ ಸಿದ್ಧಾರ್ಥ್​ ಎಂಬ ಹೆಸರಿನ ಅಕೌಂಟ್​ ಕ್ರಿಯೇಟ್​ ಮಾಡಿ ಅದರಿಂದ ಮತ್ತೋರ್ವ ಹುಡುಗನಿಗೆ ಗ್ಯಾಂಗ್​ ರೇಪ್​ಗೆ ಸಂಬಂಧಪಟ್ಟಂತೆ ಮೆಸೇಜ್​ ಮಾಡಿದ್ದಾಳೆ. ಕಾರಣ ಆ ಹುಡುಗನ ಪ್ರತಿಕ್ರಿಯೆ ಏನು ಎಂಬುದನ್ನು ತಿಳಿಯಲು. ಇವರಿಬ್ಬರೂ ಬಾಯ್ಸ್ ಲಾಕರ್​ ರೂಂ ಎಂಬ ಇನ್ಸ್ಟಾಗ್ರಾಂ ಗ್ರುಪ್​​ಗೆ ಸೇರಿದವರಲ್ಲ.

    ಇದನ್ನೂ ಓದಿ: ಹುಡುಗಿಯರ ಅಶ್ಲೀಲ​ ಚಾಟ್​, ಹುಡುಗರ ದೇಹದ ಬಗ್ಗೆ ಮಾತು; ಸ್ಕ್ರೀನ್​ ಶಾಟ್​ ನೋಡಿ ಹೌಹಾರಿದ ನೆಟ್ಟಿಗರು..!

    ಆದರೆ ಇವರಿಬ್ಬರ ಸ್ನ್ಯಾಪ್​ಚಾಟ್​ ಮೆಸೇಜ್​​ಗಳ ಸ್ಕ್ರೀನ್​ಶಾಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಶೇರ್​ ಆದವು. ಹಾಗೇ ಬಾಯ್ಸ್ ಲಾಕರ್​ ರೂಂ ಗ್ರುಪ್​​ನಲ್ಲೂ ಶೇರ್​ ಆಯಿತು. ಅದನ್ನೇ ಇಟ್ಟುಕೊಂಡು ಗ್ರುಪ್​ನಲ್ಲಿರುವ ಹುಡುಗರೂ ಚಾಟ್​ ಮಾಡತೊಡಗಿದರು. ಅದು ಅಶ್ಲೀಲವಾಗಿ ಮಾರ್ಪಟ್ಟಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮೊದಲು ಚಾಟ್​ ಮಾಡಿದ ಹುಡುಗ-ಹುಡುಗಿಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ನಕಲಿ ಐಡಿಗಳನ್ನು ರಚಿಸುವುದು ಅಪರಾಧ. ಆದರೆ ಈ ಹುಡುಗಿಯ ಉದ್ದೇಶ ಕೆಟ್ಟದ್ದಾಗಿರಲಿಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಆದ್ದರಿಂದ ತಿಳಿವಳಿಕೆ ಹೇಳಿದ್ದೇವೆ. ಯಾವುದೇ ಕಂಪ್ಲೇಂಟ್​ ಪೈಲ್​ ಮಾಡಿಲ್ಲ ಎಂದಿದ್ದಾರೆ.

    ಈಕೆ ಹುಡುಗನ ಹೆಸರಲ್ಲಿ ಅಕೌಂಟ್​ ಕ್ರಿಯೇಟ್ ಮಾಡಿಕೊಂಡು ಮೆಸೇಜ್​ ಮಾಡಿದ್ದರೂ ಕೂಡ ಅದರಲ್ಲಿ ಲೈಂಗಿಕ ದೌರ್ಜನ್ಯವನ್ನು ತಡೆಯುವ ಬಗ್ಗೆ ಮಾತನಾಡಿದ್ದಾಳೆ. ಹಾಗಾಗಿ ಇಲ್ಲಿ ನಕಲಿ ಐಡಿ ಕ್ರಿಯೇಟ್ ಮಾಡಿದ್ದಷ್ಟೇ ತಪ್ಪು ಹೊರತು ಅಶ್ಲೀಲತೆ ಏನೂ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಪೋರ್ನ್​ ವೆಬ್​​ಸೈಟ್​ನಲ್ಲಿ ಅಪ್ಲೋಡ್ ಆಗುತ್ತಿವೆ ಕೊರೊನಾ ವೈರಸ್ ಹೆಸರಿನ ಅಶ್ಲೀಲ ವಿಡಿಯೋಗಳು; ಟ್ರೆಂಡ್ ಆಗುತ್ತಿದೆ ಮಾಸ್ಕ್​, ಹಜ್ಮತ್ ಸೂಟ್​ನಲ್ಲಿನ ಸೆಕ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts