More

    ಐಟಿ ದಾಳಿ ವಿರೋಧಿಸಿ ಕೆಜಿಎಫ್​ ಬಾಬು ಮನೆ ಮುಂದೆ ಪ್ರತಿಭಟನೆ; ಪೊಲೀಸರಿಂದ ಲಾಠಿ ಚಾರ್ಜ್​

    ಬೆಂಗಳೂರು: ಉದ್ಯಮಿ, ಕಾಂಗ್ರೆಸ್​ ಮುಖಂಡ ಯೂಸುಫ್ ಶರೀಪ್​ ಅಲಿಯಾಸ್​ ಕೆಜಿಎಫ್​ ಬಾಬು ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಶಾಕ್​ ನೀಡಿದ್ದು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

    ಹೈಗ್ರೌಂಡ್ಸ್​ ಬಳಿ ಇರುವ ರುಕ್ಸಾನಾ ಪ್ಯಾಲೇಸ್​ಗೆ ಬೆಳಗ್ಗೆ 6 ಘಂಟೆ ಸುಮಾರಿಗೆ ದಾಳಿ ಮಾಡಿದ ಅಧಿಕಾರಿಗಳು ಅಪಾರ ಪ್ರಮಾಣದ ಸೀರೆ ಹಾಗೂ ಡಿಡಿಗಳನ್ನು ವಶಕ್ಕೆ ಪಡೆದಿದ್ಧಾರೆ.

    ಆಕ್ರೋಶ

    ಇನ್ನು ಕೆಜಿಎಫ್​ ಬಾಬು ಮನೆ ಮೇಲೆ ಐಟಿ ದಾಳಿಯಾಗಿರುವ ವಿಷಯ ತಿಳಿದು ಅವರ ನಿವಾಸದ ಬಳಿ ಬೆಂಬಲಿಗರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ತಮ್ಮ ನಾಯಕನ ಪರ ಘೋಷಣೆಗಳನ್ನು ಕೂಗಿದರು.

    ಈ ವೇಳೆ ಮಾತನಾಡಿದ ಅಭಿಮಾನಿಯೊಬ್ಬರು ಕೆಜಿಎಫ್ ಬಾಬು ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದು ಅವರು ಎಲ್ಲಿ ಗೆದ್ದು ಬಿಡುತ್ತಾರೋ ಎಂಬ ಭಯದಿಂದ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ದಾಳಿ ಮಾಡಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

    It Raid

    ಇದನ್ನೂ ಓದಿ: ಕೆಜಿಎಫ್​ ಬಾಬು ಮನೆ ಮೇಲೆ ಐಟಿ ದಾಳಿ ಪ್ರಕರಣ; ಸಾವಿರಾರು ಸೀರೆ-ಡಿಡಿ ವಶಕ್ಕೆ

    ಲಾಠಿ ಚಾರ್ಜ್​

    ಹೆಚ್ಚಿನ ಜನರು ಕೆಜಿಎಫ್​ ಬಾಬು ಮನೆ ಬಳಿ ಹೆಚ್ಚಿನ ಜನ ಜಮಾವಣೆಗೊಂಡು ಘೋಷಣೆಗಳನ್ನು ಕೂಗಿದ ಕಾರಣ ಐಟಿ ಅಧಿಕಾರಿಗಳ ಕರ್ತ್ಯವಕ್ಕೆ ಅಡ್ಡಪಡಿಸಿದಂತಾಗುತ್ತದೆ ಎಂದು ಪೊಲೀಸರು ತಿಳಿ ಹೇಳಿದರು.

    ಇದಕ್ಕೊಪ್ಪದ ಅಭಿಮಾನಿಗಳು ಹಾಗೂ ಬೆಂಬಲಿಗರು ಘೋಷಣೆಗಳನ್ನು ಕೂಗಲು ಮುಂದುವರೆಸಿದರು. ಈ ವೇಳೆ ಪರಿಸ್ಥಿತಿಯನ್ನು ಹತ್ತೋಟಿಗೆ ತರಲು ಪೊಲೀಸರು ಮಹಿಳೆಯರು, ವೃದ್ದರು ಎಂದು ನೋಡದೆ ಲಾಠಿ ಚಾರ್ಜ್​ ಮಾಡಿದ್ದಾರೆ.

    Lathi charge

    ನಾಮಪತ್ರ ಸಲ್ಲಿಸಬೇಕಾಗಿತ್ತು

    ಕಾಂಗ್ರೆಸ್​ ಪಕ್ಷದಿಂದ ಚಿಕ್ಕಪೇಟೆ ವಿಧಾನಸಬಾ ಕ್ಷೇತ್ರದ ಟಿಕೆಟ್​ ಸಿಗದ ಹಿನ್ನಲೆಯಲ್ಲಿ ಕೆಜಿಎಫ್​ ಬಾಬು ಬುಧವಾರ ಮಧ್ಯಾಹ್ನ 2:00 ಘಂಟೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವವರಿದ್ದರು. ಆದರೆ, ನಾಮಪತ್ರ ಸಲ್ಲಿಕೆಗೂ ಮುನ್ನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ಮಾಡುವ ಮೂಲಕ ಶಾಕ್​ ನೀಡಿದ್ಧಾರೆ.

    ಇನ್ನು ಇತ್ತಿಚಿಗೆ ಪಕ್ಷ ವಿರೋಧಿ ಹೇಳಿಕೆ ನೀಡುತ್ತ ಇರುಸು-ಮುರುಸು ಉಂಟು ಮಾಡಿದ ಆರೋಪದ ಮೇಲೆ ಕೆಜಿಎಫ್​ ಬಾಬು ಅವರನ್ನು ಕಾಂಗ್ರೆಸ್​ ಪಕ್ಷದಿಂದ ಉಚ್ಛಾಟಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts