More

    VIDEO | ಅಪರಿಚಿತ ಶವಗಳ ಗುರುತು ಪತ್ತೆಗೆ ಸಿಸಿಟಿಎನ್​ಎಸ್​; ಫಿಂಗರ್​ ಪ್ರಿಂಟ್​ ಪಡೆದು ಹೆಸರು, ವಿಳಾಸ ಪತ್ತೆ

    ಗೋವಿಂದರಾಜು ಚಿನ್ನಕುರ್ಚಿ
    ಬೆಂಗಳೂರು: ಬೆಂಗಳೂರು: ರಾಜ್ಯ ಪೊಲೀಸರಿಗೆ ಸವಾಲಾಗಿದ್ದ ಅಪರಿಚಿತ ಶವಗಳ ಗುರುತು ಪತ್ತೆಗೆ ಕೊಂಚ ಮುಕ್ತಿ ಸಿಕ್ಕಂತೆ ಆಗಿದೆ. ಮೊಬೈಲ್​& ಕ್ರೈಂ ಮತ್ತು ಕ್ರಿಮಿನಲ್​ ಟ್ರ್ಯಾಕಿಂಗ್​ ನೆಟ್​ವರ್ಕ್​ ಸಿಸ್ಟಂ (ಎಂ&ಸಿಸಿಟಿಎನ್​ಎಸ್​) ಬಳಸಿಕೊಂಡು ಅಪರಿಚಿತ ಶವಗಳ ಗುರುತು ಪತ್ತೆಹಚ್ಚುವಲ್ಲಿ ಪೊಲೀಸ್​ ಇಲಾಖೆ ಯಶಸ್ವಿಯಾಗಿದೆ.

    ದಾವಣಗೆರೆ ಜಿಲ್ಲೆ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಹತ್ಯೆಗೆ ಒಳಗಾಗಿದ್ದ ಅಪರಿಚಿತವ್ಯಕ್ತಿ ಗುರುತನ್ನು ಎಂ&ಸಿಸಿಟಿಎನ್​ಎಸ್​ ಸಹಾಯದಿಂದ ಪತ್ತೆಹಚ್ಚಿದ್ದು, ರಾಜ್ಯದಲ್ಲಿ ಮೊದಲ ಪ್ರಕರಣ ಎನ್ನಲಾಗಿದೆ.

    ರಾಜ್ಯದಲ್ಲಿ ಪ್ರತಿದಿನ 7 ರಿಂದ 10 ಅಪರಿಚಿತ ಶವಗಳು ಪತ್ತೆಯಾಗುತ್ತಿವೆ. ಅಂದರೇ ತಿಂಗಳಿಗೆ ಅಂದಾಜು 200 ರಿಂದ 250 ಶವಗಳ ಗುರುತು ಪತ್ತೆಯಾಗುತ್ತಿಲ್ಲ. ಈ ಶವಗಳು ಕೊಲೆ, ಆತ್ಮಹತ್ಯೆ, ಅನಾರೋಗ್ಯದಿಂದ ಸಾವು, ಸಹಜ ಸಾವು, ಅಪಘಾತ ಇನ್ನಿತ್ತರ ಕಾರಣಗಳಿಂದ ಪ್ರಾಣ ಬಿಟ್ಟಿರುತ್ತವೆ. ಮೃತ ದೇಹದಲ್ಲಿ ಯಾವುದೇ ಗುರುತಿನ ಚೀಟಿ, ಮುಖ ಚಹರೆ, ಮೊಬೈಲ್​ ಸಿಗದೆ ಹೆಸರು ವಿಳಾಸ ಮತ್ತು ವಾರಸುದಾರರನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಶೇ.10 ಗುರುತು ಪತ್ತೆಯಾದರೇ ಹೆಚ್ಚು. ಉಳಿ ಶವಗಳಿಗೆ ಕಾನೂನು ಪ್ರಕಾರ ಪೊಲೀಸರೇ ಶವ ಸಂಸ್ಕಾರ ನಡೆಸುತ್ತಾರೆ.

    ಇದನ್ನೂ ಓದಿ: ಟೀಕೆಗೆ ತಲೆ ಕೆಡಿಸಿಕೊಂಡಿಲ್ಲ… ನಾನು ಅಂದಿನಿಂದ ಹೀಗೆಯೇ ಓಡಾಡುತ್ತಿದ್ದೇನೆ; ದೆಹಲಿ ಮೆಟ್ರೋದಲ್ಲಿ ಅರೆ ಬೆತ್ತಲಾದ ಯುವತಿ

    VIDEO | ಅಪರಿಚಿತ ಶವಗಳ ಗುರುತು ಪತ್ತೆಗೆ ಸಿಸಿಟಿಎನ್​ಎಸ್​; ಫಿಂಗರ್​ ಪ್ರಿಂಟ್​ ಪಡೆದು ಹೆಸರು, ವಿಳಾಸ ಪತ್ತೆಇದೀಗ ಅಪರಿಚಿತ ಶವಗಳ ಗುರುತು ಪತ್ತೆಗೆ ಎಂ&ಸಿಸಿಟಿಎನ್​ಎಸ್​ ಅನುಕೂಲದ ಭರವಸೆಯನ್ನು ಪೊಲೀಸರಿಗೆ ಮೂಡಿಸಿದೆ. ಇತ್ತೀಚೆಗೆ ದಾವಣಗೆರೆ ಜಿಲ್ಲೆ ವಿದ್ಯಾನಗರ ಪೊಲೀಸ್​ ಠಾಣಾ ವ್ಯಾಕ್ತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹತ್ಯೆಗೆ ಒಳಗಾಗಿದ್ದ. ಜಿಲ್ಲೆಯ ಎಲ್ಲ ಕಡೆ ಮಾಹಿತಿ ರವಾನೆ ಮಾಡಿದರೂ ವಾರಸುದಾರರು ಪತ್ತೆ ಆಗಿರಲಿಲ್ಲ. ಇದೇ ವೇಳೆ ಎಂ&ಸಿಸಿಟಿಎನ್​ಎಸ್​ನಲ್ಲಿ ಮೃತ ವ್ಯಕ್ತಿಯ ಬೆಳಚ್ಚರು ಮುದ್ರೆ ಸಂಗ್ರಹಿಸಿ ಪರಿಶೀಲನೆ ನಡೆಸಿದಾಗ ಮೂಲತ@ ಹಾವೇರಿ ಜಿಲ್ಲೆ ಎಂಬುದು ಖಚಿತವಾಗಿದೆ. ಆನಂತರ ಹಾವೇರಿ ಜಿಲ್ಲಾ ಪೊಲೀಸರು, ಬೆರಳಚ್ಚು ಮುದ್ರೆಯನ್ನು ಎಂ&ಸಿಸಿಟಿಎನ್​ಎಸ್​ ಡೇಟಾ ಸಹಾಯದಿಂದ ಪರಿಶೀಲನೆ ನಡೆಸಿದಾಗ ಕೊಲೆಯಾದ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಪೂರ್ಣ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಮೇರೆಗೆ ಕೊಲೆ ಮಾಡಿದ ಆರೋಪಿಗಳನ್ನು ಪತ್ತೆ ಕಾರ್ಯಕ್ಕೂ ಅನುಕೂಲವಾಗಿದೆ ಎಂದು ದಾವಣಗೆರೆ ಜಿಲ್ಲಾ ಎಸ್​ಪಿ ಸಿ.ಬಿ. ರಿಷ್ಯಂತ್​ ತಿಳಿಸಿದ್ದಾರೆ.

    ಎಂ&ಸಿಸಿಟಿಎನ್​ಎಸ್​ನಲ್ಲಿ ಎಲ್ಲ ಅಪರಾಧಿಗಳ ಬೆರಳಚ್ಚು, ಮುಖ ಚಹರೆ, ಹೆಸರು, ವಿಳಾಸ, ಆಧಾರ್​ ಮಾಹಿತಿ ಸಂಗ್ರಹಿಸಿದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯ ಮಾಹಿತಿ ಒಮ್ಮೆ ಅಪ್​ಲೋಡ್​ ಆದರೆ, ದೇಶದ ಯಾವ ಪ್ರದೇಶದಲ್ಲಿ ಬೇಕಾದರು ಆತನ ಮಾಹಿತಿ ಲಭ್ಯವಾಗಲಿದೆ.

    ಪೊಲೀಸರು ಗಸ್ತು ಮತ್ತು ನಾಕಬಂದಿ ಕರ್ತವ್ಯದ ವೇಳೆ ರಾತ್ರಿ ಓಡಾಡುವ ವ್ಯಕ್ತಿಗಳ ಬೆರಳಚ್ಚನ್ನು ಮೊಬೈಲ್​ ಅಪ್ಲಿಕೇಷನ್​ನಲ್ಲಿ ಪರಿಶೀಲನೆಗೆ ಬಳಸುತ್ತಿದ್ದಾರೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ ಅಥವಾ ಕದ್ದಿರುವ ವಾಹನವಾಗಿದ್ದರೇ ತಕ್ಷಣ ತಿಳಿಯಲಿದೆ. ಇದೀಗ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೂ ಬಳಸಿದ್ದು, ಯಶಸ್ವಿಯಾಗಿದೆ ಎಂದು ಎಸ್​ಪಿ ಸಿ.ಬಿ. ರಿಷ್ಯಂತ್​ ಮಾಹಿತಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಬಸ್ಸಿನಲ್ಲಿ ಹಿಂದು ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಹಲ್ಲೆ

    ಕ್ರಿಮಿನಲ್​ ಹಿನ್ನೆಲೆ ಇದ್ದರೇ ಮಾತ್ರ

    ಮೊಬೈಲ್​ ಕೆಮ್​ ಮತ್ತು ಕ್ರಿಮಿನಲ್​ ಟ್ರಾಕಿಂಗ್​ ನೆಟ್​ವರ್ಕ್​ ಸಿಸ್ಟಂ (ಎಂ&ಸಿಸಿಟಿಎನ್​ಎಸ್​) ಯೋಜನೆಯು ಕೇಂದ್ರ ಸರ್ಕಾರದ ಮಿಷಿನ್​ಮೋಡ್​ ಪ್ರಾಜೆಕ್ಟ್​ಗಳಲ್ಲಿ ಒಂದಾಗಿದೆ. ದೇಶದಲ್ಲಿ ಒಂದೇ ಮಾದರಿ ಪೊಲೀಸಿಂಗ್​, ಅಪರಾಧ ಮತ್ತು ಅಪರಾಧಿಗಳ ಟ್ರ್ಯಾಕಿಂಗ್​ ಮಾಡುವ ಉದ್ದೇಶ ಮತ್ತು ತ್ವರಿತಗತಿಯ ತನಿಖೆ, ಆರೋಪಿಗಳ ಪತ್ತೆಹಚ್ಚುವ ಕಾರ್ಯವನ್ನು ಗಣಕೀಕರಣದ ಉದ್ದೇಶ ಇದಾಗಿದೆ. ಕ್ರಿಮಿನಲ್​ ಕೇಸಿನಲ್ಲಿ ಆರೋಪಿ ಸಿಕ್ಕಿಬಿದ್ದರೇ ಆತನ ಬೆರಳಚ್ಚು, ಪೋಟೋ, ವಿಳಾಸ, ಆಧಾರ್​, ಮೊಬೈಲ್​ ನಂಬರ್​ ನಂಬರ್​ ಸಂಗ್ರಹಿಸಲಾಗುತ್ತದೆ. ಮಾಬೈಲ್​ ಮಾದರಿ ಡಿವೈಸ್​ನ್ನು ಎಲ್ಲ ಪೊಲೀಸ್​ ಠಾಣೆಗೆ ವಿತರಿಸಲಾಗಿದೆ. ಅಪರಿಚಿತ ವ್ಯಕ್ತಿ ಬೆರಳಚ್ಚುನ್ನು ಎಂ&ಸಿಸಿಟಿಎನ್​ಎಸ್​ನಲ್ಲಿ ಪರಿಶೀಲನೆ ನಡೆಸಿದಾಗ ಕ್ರಿಮಿನಲ್​ ಹಿನ್ನೆಲೆ ಇದ್ದರೇ ಮಾಹಿತಿ ಸಿಗಲಿದೆ. ಇಲ್ಲವಾದರೆ, ಅಸಾಧ್ಯ.

    ಯುಐಡಿಎಐ ಒಪ್ಪಿರಲಿಲ್ಲ

    ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಆಧಾರ್​ ಸಹಾಯದಿಂದ ಅಪರಿಚಿತ ಶವಗಳ ಗುರುತು ಪತ್ತೆಗೆ ಪೊಲೀಸ್​ ಇಲಾಖೆ ಸಾಕಷ್ಟು ಪ್ರಯತ್ನ ನಡೆಸಿತ್ತು. ಆದರೆ, ಯುಐಡಿಎಐ ಒಪ್ಪಿರಲಿಲ್ಲ.

    ಎಂ&ಸಿಸಿಟಿಎನ್​ಎಸ್​ ತಂತ್ರಜ್ಞಾನದಿಂದ ಅಪರಿಚಿತ ಶವಗಳ ಗುರುತು ಪತ್ತೆಹಚ್ಚಲು ಸಾಧ್ಯವಾಗಿದೆ. ಇದರೊಂದು ಅನಿರೀತ ಪ್ರಯೋಜನವಾಗಿದ್ದು, ಪೊಲೀಸ್​ ಇಲಾಖೆಗೆ ಅನುಕೂಲವಾಗಿದೆ ಎಂದು ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವಿಣ್​ ಸೂದ್ ಹೇಳಿದ್ದಾರೆ.​

    ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಪರಂವಃ ಸ್ಟುಡಿಯೋಸ್ ಮೂಲಕ ವಿಶ್ ಮಾಡಿದ ರಕ್ಷಿತ್ ಶೆಟ್ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts