More

    ದಾಂಪತ್ಯಕ್ಕೆ ಕಾಲಿಟ್ಟ ಲಿಂಗ ಪರಿವರ್ತನೆ ಮಾಡಿಕೊಂಡ ಪೊಲೀಸ್​ ಕಾನ್ಸ್​ಟೆಬಲ್​: ಲಲಿತಾ ಲಲಿತ್​ ಆಗಿ ಬದಲಾದ ಕಥೆ

    ಮುಂಬೈ: ಪೊಲೀಸ್​ ಇಲಾಖೆಯಲ್ಲಿ ಮಹಿಳಾ ಕಾನ್ಸ್​ಟೆಬಲ್​ ಆಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಯೊಬ್ಬಳು ಲಿಂಗ ಪರಿವರ್ತನೆ ಮಾಡಿಸಿಕೊಂಡು ಯುವತಿಯೊಬ್ಬಳನ್ನು ಮದುವೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    1988ರಲ್ಲಿ ಹೆಣ್ಣಾಗಿ ಜನಿಸಿದ ಲಲಿತಾಳಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ತನ್ನಲ್ಲಿ ಪುರುಷ ಗುಣಲಕ್ಷಣಗಳು ಇರುವುದಾಗಿ ತಿಳಿದುಬಂದಿತ್ತು. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ನಂತರ ತನ್ನಲ್ಲಿ XY ಕ್ರೋಮೋಸೋಮ್​ಗಳು ಇರುವುದು ಗೊತ್ತಾಗಿದೆ. ಪುರುಷರಲ್ಲಿ ಮಾತ್ರ ಇರುವ ಈ ಕ್ರೋಮೋಸೋಮ್​ ತನ್ನಲ್ಲಿರುವುದು ತಿಳಿದ ನಂತರ ಆಕೆ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ತೀರ್ಮಾನ ತೆಗೆದುಕೊಂಡಿದ್ದಾಳೆ.

    ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವುದಕ್ಕೆ ತನಗೆ ರಜೆ ಕೊಟ್ಟು ಅವಕಾಶ ನೀಡಿ ಎಂದು ಆಕೆ ಪೊಲೀಸ್​ ಇಲಾಖೆಯಲ್ಲಿ ಕೇಳಿಕೊಂಡಿದ್ಧಾಳೆ. ಆದರೆ ಮಹಿಳಾ ಪೊಲೀಸ್​ಗೂ ಪುರುಷ ಪೊಲೀಸ್​ಗೂ ನಿಯಮಗಳಲ್ಲಿ ಬಹಳಷ್ಟು ವ್ಯತ್ಯಾಸವಿರುವ ಕಾರಣ ಆಕೆಗೆ ಅವಕಾಶ ನೀಡಲು ಪೊಲೀಸ್​ ಇಲಾಖೆ ಒಪ್ಪಿರಲಿಲ್ಲ. ಹಾಗಾಗಿ ಆಕೆ ಹೈಕೋರ್ಟ್​ನಲ್ಲಿ ತನಗೆ ಅವಕಾಶ ನೀಡಲು ತಿಳಿಸಿ ಎಂದು ಅರ್ಜಿ ಹಾಕಿದ್ದಳು. ಈ ವಿಚಾರವು ಸೇವೆಯ ಕುರಿತಾದ್ದರಿಂದ ಮಹಾರಾಷ್ಟ್ರದ ಆಡಳಿತ ನ್ಯಾಯಮಂಡಳಿಯನ್ನು ಕೇಳುವಂತೆ ಹೈ ಕೋರ್ಟ್​ ಸೂಚಿಸಿತ್ತು. ನಂತರ ರಾಜ್ಯದ ಗೃಹ ಮಂಡಳಿಯು ಆಕೆಗೆ ಒಂದು ತಿಂಗಳ ರಜೆ ನೀಡಿತ್ತು.

    2018ರ ಮೇನಲ್ಲಿ ಲಿಂಗ ಪರಿವರ್ತನೆಯ ಮೊದಲ ಆಪರೇಷನ್​ ಮಾಡಿಸಿಕೊಂಡಿದ್ದ ಲಲಿತಾ ಮುಂದಿನ ತಿಂಗಳುಗಳಲ್ಲಿ ಎರಡು ಮತ್ತು ಮೂರನೇ ಆಪರೇಷನ್​ ಮಾಡಿಸಿಕೊಂಡು ಗಂಡಾಗಿ ಪರಿವರ್ತನೆಗೊಂಡಿದ್ದಾಳೆ. ಲಿಂಗ ಪರಿವರ್ತನೆಯ ನಂತರ ತನ್ನ ಲಲಿತಾ ಹೆಸರನ್ನು ಲಲಿತ್​ ಆಗಿ ಬದಲಿಸಿಕೊಂಡು ಪೊಲೀಸ್​ ಇಲಾಖೆಯಲ್ಲಿ ಪುರುಷ ಪೇದೆಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದಾನೆ.

    ಇದೀಗ ಲಲಿತ್​ ಯುವತಿಯೊಬ್ಬಳನ್ನು ಮದುಯೆಯಾಗುವ ಮೂಲಕ ದಾಂಪತ್ಯಕ್ಕೂ ಸಹ ಕಾಲಿಟ್ಟಿದ್ದಾನೆ. ಭಾನುವಾರದಂದು ತನ್ನ ಹಳ್ಳಿಯಲ್ಲಿ ಯುವತಿಯೊಬ್ಬಳನ್ನು ಮದುವೆಯಾಗಿರುವ ಲಲಿತ್​, ತನ್ನ ಜೀವನ ಮರುಹುಟ್ಟು ಪಡೆದುಕೊಂಡಿದೆ, ಈ ಮದುವೆಯಿಂದ ನನ್ನ ಹೊಸ ಜೀವನ ಆರಂಭವಾಗಿದೆ. ನಮ್ಮ ಮದುವೆಯ ಬಗ್ಗೆ ಎರಡೂ ಕುಟುಂಬಗಳು ಸಂತಸ ಪಟ್ಟಿವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts