More

    ವಿಷ ಕುಡಿದು ಒದ್ದಾಡುತ್ತಿದ್ದ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು 2 ಕಿ.ಮೀ ಓಡಿ ಪ್ರಾಣ ಉಳಿಸಿದ ಕಾನ್ಸ್​ಟೆಬಲ್!

    ಹೈದರಾಬಾದ್: ಹುಟ್ಟು ಉಚಿತ ಸಾವು ಖಚಿತ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹುಟ್ಟು ನಮಗೆ ಸಿಕ್ಕಿರುವ ಕೊಡುಗೆಯಾಗಿದ್ದು, ನಾವು ಯಾವುದೇ ಕಷ್ಟ ಮತ್ತು ಸಂಕಟಗಳನ್ನು ಎದುರಿಸಲು ಧೈರ್ಯದಿಂದ ನಿಲ್ಲಬೇಕು. ಆದರೆ, ಇಂದು ಕೆಲವರಲ್ಲಿ ಆ ಧೈರ್ಯದ ಕೊರತೆಯಿದೆ. ತುಂಬಾ ಸೂಕ್ಷ್ಮಮತಿಗಳಾಗುತ್ತಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೇ ಇದೆ ಎಂಬುದನ್ನು ಮರೆತು, ಸಣ್ಣ ಸಣ್ಣ ವಿಚಾರಕ್ಕೂ ಸಾವಿನ ಹಾದಿ ಹಿಡಿಯುತ್ತಾರೆ. ಜೀವನದ ಮೌಲ್ಯ ತಿಳಿಯದೇ ಕೆಲವೊಮ್ಮೆ ಆತ್ಮಹತ್ಯೆಯಂತಹ ಹುಚ್ಚು ಕೆಲಸವನ್ನು ಮಾಡಲು ಯತ್ನಿಸಿದಾಗ, ದೇವರು ಯಾವುದೋ ರೂಪದಲ್ಲಿ ಬಂದು ಕೆಲವರ ಪ್ರಾಣ ಉಳಿಸುತ್ತಿದ್ದಾನೆ. ಇತ್ತೀಚೆಗೆ ತೆಲಂಗಾಣದ ಕರೀಮ್​ನಗರದಲ್ಲಿ ನಡೆದ ಈ ಘಟನೆ ಅದಕ್ಕೆ ತಾಜಾ ಉದಾಯಣೆಯಾಗಿದೆ.

    ಪೊಲೀಸರೆಂದರೆ ಸಾಮಾನ್ಯವಾಗಿ ಮೂಗು ಮುರಿಯುವವರೇ ಹೆಚ್ಚು. ಏಕೆಂದರೆ, ಕೆಲ ಪೊಲೀಸರು ಎಸಗುವ ದೌರ್ಜನ್ಯ, ಲಂಚಗುಳಿತನ ಹಾಗೂ ಏರು ಧ್ವನಿಯಲ್ಲೇ ಮಾತನಾಡಿಸುವ ಮೂಲಕ ಜನರಲ್ಲಿ ಭಯ ಹುಟ್ಟಿಸುವುದು ಮತ್ತು ದುಡ್ಡು ಇರುವವರ ಪರ ಕೆಲಸ ಮಾಡುತ್ತಾರೆ ಎಂಬ ಆರೋಪ ಪೊಲೀಸರ ಮೇಲೆ ನಕಾರಾತ್ಮಕ ಭಾವನೆ ಉಂಟು ಮಾಡಿದೆ. ಆದರೆ, ಎಲ್ಲ ಪೊಲೀಸರು ಆ ರೀತಿ ಇರಲ್ಲ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಅನೇಕ ಪೊಲೀಸರು ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವದಿಂದ ಜನರ ಸೇವೆ ಮಾಡುತ್ತಿದ್ದು ಉತ್ತಮ ಮನ್ನಣೆ ಪಡೆಯುತ್ತಿದ್ದಾರೆ. ಅಲ್ಲದೆ, ಕೆಲ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಅಪಾಯದಲ್ಲಿರುವ ಎಷ್ಟೋ ಜನ ಸಾಮಾನ್ಯರನ್ನು ರಕ್ಷಿಸಿ ಪ್ರಾಣ ಉಳಿಸುತ್ತಿದ್ದಾರೆ. ಈ ಹಿಂದೆ ಹೃದಯಾಘಾತಕ್ಕೆ ಒಳಗಾದವರನ್ನು ಸಿಪಿಆರ್ ಮಾಡಿ ರಕ್ಷಿಸಿದ ಘಟನೆಗಳು ಸಾಕಷ್ಟಿವೆ. ಆದರೆ ಇತ್ತೀಚೆಗೆ ಕಾನ್ಸ್​ಟೆಬಲ್ ಒಬ್ಬರು ಮಾಡಿದ ಕೆಲಸವನ್ನು ನೋಡಿದರೆ ನೀವು ನಮಸ್ಕಾರ ಮಾಡದೇ ಇರಲಾರಿರಿ.

    ಹೌದು, ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಗದ್ದೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಸಕಾಲಕ್ಕೆ ಬಂದ ಓರ್ವ ಕಾನ್ಸ್​ಟೆಬಲ್​​, ವಿಷ ಕುಡಿದಿದ್ದ ವ್ಯಕ್ತಿಯನ್ನು 2 ಕಿಲೋ ಮೀಟರ್‌ವರೆಗೆ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಪ್ರಾಣ ಉಳಿಸಿದ್ದಾರೆ. ಈ ಘಟನೆ ತೆಲಂಗಾಣದ ಕರೀಮ್​ನಗರ ಜಿಲ್ಲೆಯಲ್ಲಿ ನಡೆದಿದೆ.

    ವಿವರಣೆಗೆ ಬರುವುದಾದರೆ, ತೆಲಂಗಾಣ ರಾಜ್ಯದ ಕರೀಮ್​ನಗರ ಜಿಲ್ಲೆಯ ವೀಣವಂಕ ಮಂಡಲದ ಭೇತಿಗಲ್‌ನಲ್ಲಿ ಕುರ್ರಾ ಸುರೇಶ್ ಎಂಬಾತ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಸುರೇಶ್​ ಬುಧವಾರ ಮನೆಯವರೊಂದಿಗೆ ಜಗಳವಾಡಿದ್ದ. ಬಳಿಕ ಸಮೀಪದ ಜಮೀನಿಗೆ ತೆರಳಿ ಕೀಟನಾಶಕ ಸೇವಿಸಿದ್ದ. ಸುರೇಶನ ಪಕ್ಕದ ಗದ್ದೆಯಲ್ಲಿದ್ದವರು ಕ್ರಿಮಿನಾಶಕ ಕುಡಿಯುತ್ತಿರುವುದನ್ನು ಗಮನಿಸಿ, ತಕ್ಷಣ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಕಾನ್ಸ್​ಟೆಬಲ್​ ಜಯಪಾಲ್ ಹಾಗೂ ಗೃಹ ರಕ್ಷಕ ದಳದ ಕಿನ್ನೇರ ಸಂಪತ್ ಘಟನಾ ಸ್ಥಳಕ್ಕೆ ಧಾವಿಸಿದರು. ಈ ವೇಳೆ ಸುರೇಶ್ ಪ್ರಜ್ಞಾಹೀನರಾಗಿದ್ದರು. ತಡಮಾಡಿದರೆ ಪ್ರಾಣಕ್ಕೆ ಅಪಾಯ ಬರುತ್ತದೆ ಎಂಬುದನ್ನು ಮನಗಂಡ ಕಾನ್ಸ್​ಟೆಬಲ್ ಜಯಪಾಲ್, ಸಮಯ ಪ್ರಜ್ಞೆ ಮೆರೆದರು.

    ಕಾನ್ಸ್​ಟೆಬಲ್ ಜಯಪಾಲ್, ಸುರೇಶನನ್ನು ಭುಜದ ಮೇಲೆ ಹೊತ್ತುಕೊಂಡು ಹೊಲಗಳಲ್ಲಿ ಸುಮಾರು 2 ಕಿಲೋಮೀಟರ್ ಓಡಿದರು. ಗದ್ದೆಗಳ ಗದ್ದೆಗಳ ಮೇಲೆ ಓಡಿ ಗ್ರಾಮಕ್ಕೆ ಕರೆತರಲಾಯಿತು. ಬಳಿಕ ಕುಟುಂಬಸ್ಥರ ನೆರವಿನಿಂದ ಜಮ್ಮಿಕುಂಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಸುರೇಶ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ತಿಳಿಸಿದ್ದಾರೆ. ಸಕಾಲದಲ್ಲಿ ಸುರೇಶ್ ಅವರನ್ನು ರಕ್ಷಿಸಿದ ಜಯಪಾಲ್ ಅವರನ್ನು ಗ್ರಾಮಸ್ಥರು ಶ್ಲಾಘಿಸಿದರು.

    ತಮ್ಮ ಮಗನನ್ನ ರಕ್ಷಿಸಲು ಪೊಲೀಸ್ ರೂಪದಲ್ಲಿ ದೇವರಂತೆ ಬಂದಿದ್ದಕ್ಕೆ ಸುರೇಶ್ ಕುಟುಂಬಸ್ಥರು ಧನ್ಯವಾದ ಅರ್ಪಿಸಿದರು. ಸುರೇಶ್ ಅವರ ಜೀವ ಉಳಿಸಿದ ಜಯಪಾಲ್ ಹಾಗೂ ಇತರೆ ಸಿಬ್ಬಂದಿಯನ್ನು ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅಭಿನಂದಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಅನೇಕ ಪೊಲೀಸರು, ಅಪಾಯದಲ್ಲಿರುವ ಸಾಮಾನ್ಯ ಜನರನ್ನು ರಕ್ಷಿಸುತ್ತಿದ್ದಾರೆ ಮತ್ತು ಅಪಾಯದಲ್ಲಿರುವವರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಇಂತಹ ಪೊಲೀಸರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ಈ ಸಿನಿಮಾದಲ್ಲಿ ನಟಿಸಿದ್ದೇ ನಾನು ಮಾಡಿದ ದೊಡ್ಡ ತಪ್ಪು! ನಟಿ ಕಿರಣ್​ ರಾಥೋಡ್ ಪಶ್ಚಾತಾಪ

    ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

    ಈ ಒಂದು ಗಿಫ್ಟ್​ ಕೊಟ್ಟರೆ ನಾನು ನಿಮ್ಮವಳು! ಅಭಿಮಾನಿಗಳಿಗೆ ಬಂಪರ್​ ಆಫರ್​ ಕೊಟ್ಟ ಅನುಪಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts