More

    ರಾಮಲಲ್ಲಾ ದೇವರ ಪ್ರಾಣಪ್ರತಿಷ್ಠೆಗೆ ವಿರೋಧ: ಮಣಿಶಂಕರ್ ಅಯ್ಯರ್ ಪುತ್ರಿ ವಿರುದ್ಧ ಎಫ್​ಐಆರ್​

    ನವದೆಹಲಿ: ಒಂದು ವರ್ಗದ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರನ್ಯಾ ವಿರುದ್ಧ ಪ್ರಕರಣ ದಾಖಲಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

    ಇದನ್ನೂ ಓದಿ: ಅಯೋಧ್ಯೆ ರಾಮನ ದರ್ಶನಕ್ಕೆ ಮೈಸೂರಿನಿಂದ ವಿಶೇಷ ರೈಲು

    ಕಳೆದ ತಿಂಗಳು 20 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದ ಸುರನ್ಯಾ ಮಾಡಿದ್ದರು. ಕಾರ್ಯಕ್ರಮವನ್ನು ವಿರೋಧಿಸಿ ಮೂರು ದಿನಗಳ ಕಾಲ ಉಪವಾಸ ಮಾಡುವುದಾಗಿ ಘೋಷಿಸಿದ್ದರು. ಈ ಪೋಸ್ಟ್ ಕುರಿತು ವಿವಾದ ಹುಟ್ಟಿಕೊಂಡಿತ್ತು.

    ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕ ಅಜಯ್ ಅಗರ್ವಾಲ್ ಅವರು ಕಳೆದ ಶನಿವಾರ ದೆಹಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಎಫ್ಎಆರ್ ದಾಖಲಿಸಿದ್ದಾರೆ.

    ರಾಮಲಲ್ಲಾ ದೇವರನ್ನು ಅವಮಾನಿಸಿದ ಹಿನ್ನೆಲೆಯಲ್ಲಿ ಜಾಂಗ್‌ಪರ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಸುರನ್ಯಾ ಮನೆಯನ್ನು ಖಾಲಿ ಮಾಡುವಂತೆ ಒತ್ತ್ಆಯಿಸಿತ್ತು. ಶಾಂತಿ, ಸೌಹಾರ್ದತೆ ಕದಡಲು ಆಕೆ ಮುಂದಾಗುತ್ತಿರುವುದರಿಂದ ತಮ್ಮ ಕಾಲೋನಿ ತೊರೆಯುವಂತೆ ಬುಧವಾರ ಪತ್ರ ಬರೆದಿದ್ದರು.

    ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್​ ಹಾಕಿರುವ ಆಕೆ, ತಾನು ವಾಸಿಸುವ ಮನೆಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಮೆಗಾಸ್ಟಾರ್ ಮನೆಯಲ್ಲಿ ಶಿವಣ್ಣಗೆ ಡಿನ್ನರ್​: ಡಾ.ರಾಜ್​ ಕುಟುಂಬ ಜತೆಗಿನ ಒಡನಾಟದ ಮೆಲಕು ಹಾಕಿದ ಚಿರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts