More

    ಬೇಗೂರಿನ ವಿಶ್ವಪ್ರಿಯ ಲೇಔಟ್​ನಲ್ಲಿ ಗಾಂಜಾ ಮಾರುತ್ತಿದ್ದವರು ಪೊಲೀಸ್​ ಬಲೆಗೆ

    ಬೆಂಗಳೂರು: ಬೇಗೂರಿನ ವಿಶ್ವಪ್ರಿಯ ಲೇಔಟ್​ನಲ್ಲಿ ವಿದ್ಯಾರ್ಥಿ, ಯುವಜನರಿಗೆ ಗಾಂಜಾ ಮಾರಾಟ ಮಾಡ್ತಾ ಇದ್ದ ಮೂವರನ್ನು ಬಂಧಿಸಿರುವುದಾಗಿ ಬೇಗೂರು ಪೊಲೀಸರು ತಿಳಿಸಿದ್ದಾರೆ. ಬೇಗೂರಿನ ವಿಶ್ವಪ್ರಿಯ ಲೇಔಟ್​ನ ಮುನೇಶ್ವರ ದೇವಸ್ಥಾನದ ಹಿಂಭಾಗದ ಕಾಂಪೌಂಡ್​ನಲ್ಲಿ ಇವರು ಆಗಸ್ಟ್ 27ರಂದು ಮಧ್ಯಾಹ್ನ 3 ಗಂಟೆಗೆ ಗಾಂಜಾ ಮಾರುತ್ತಿದ್ದಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಬಂಧಿತರನ್ನು ವಿಶ್ವಪ್ರಿಯ ಲೇಔಟ್​ನ 11ನೇ ಕ್ರಾಸ್ ನಿವಾಸಿಗಳಾದ ಮೊಹಮ್ಮದ್ ಆಲಂಗೀರ್​ ಬಿನ್ ಮೊಹಮ್ಮದ್​ ನೂರುಲ್​ ಹಕ್​ (44), ಮೊಹಮ್ಮದ್ ರಿಪುನ್​ ಬಿನ್ ಮೊಶಾರೀರ್ಫ್ (33), ಮೋಹರ್ ಅಲಿ ಮೊಂಡಲ್ ಬಿನ್​ ಸುಬೀದ್ ಮೊಂಡಲ್​ (23) ಎಂದು ಗುರುತಿಸಲಾಗಿದೆ. ಅವರಿಂದ 4.4 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಕೊಳ್ಳಲಾಗಿದೆ.

    ಇದನ್ನೂ ಓದಿ: ಐವರು ನಕ್ಸಲರ ಬಂಧನ, ಜೈಲ್ಲಿನಲ್ಲಿದ್ದ ನಕ್ಸಲ್ ಒಬ್ಬನ ಸಾವು

    ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ನಡೆಸಿದ್ದರು. ಬಂಧಿತ ಆರೋಪಿಗಳೆಲ್ಲರೂ ಪಶ್ಚಿಮ ಬಂಗಾಳದವರು. ಅಲ್ಲಿಂದ ಗಾಂಜಾ ಖರೀದಿಸಿ ರೈಲಿನಲ್ಲಿ ಬೆಂಗಳೂರಿಗೆ ತಂದು ವಿವಿಧ ಮಾರಾಟ ಮಾಡಿ ಅಕ್ರಮ ವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ದಾಳಿ ನಡೆದ ಸಂದರ್ಭದಲ್ಲಿ ಅವರ ಬಳಿ 11 ಕಿಲೋ ಗಾಂಜಾ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಉಗ್ರಪೀಡಿತ ಶ್ರೀನಗರ ಸೆಕ್ಟರ್​ನಲ್ಲಿ ಸಿಆರ್​ಪಿಎಫ್​ಗೆ ಮಹಿಳಾ ಐಪಿಎಸ್ ನೇತೃತ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts