More

    ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ್ದವನ ಬಂಧನ; 8 ದಿನಗಳ ಕಾಲ ಕಸ್ಟಡಿಗೆ..

    ಬೆಂಗಳೂರು: ಹಿಜಾಬ್ ವಿವಾದ ಕುರಿತು ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಪ್ರಕರಣದ ಆರೋಪಿಯನ್ನು ವಿಧಾನಸೌಧ ಪೊಲೀಸರು ಎಂಟು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ತಮಿಳುನಾಡಿನ ತೌಹೀದ್ ಜಮಾದ್ ಮುಸ್ಲಿಂ ಸಂಘಟನೆ ಮುಖಂಡ ರೆಹಮತ್ ಉಲ್ಲಾ ಬಂಧಿತ. ತಮಿಳುನಾಡಿನ ತಿರುಪತ್ತೂರು ಜೈಲಿನಿಂದ ಬಾಡಿ ವಾರಂಟ್ ಮೇಲೆ ಆರೋಪಿ ರೆಹಮತ್ ಉಲ್ಲಾನನ್ನು ವಶಕ್ಕೆ ಪಡೆದ ವಿಧಾನಸೌಧ ಪೊಲೀಸರು ಮಂಗಳವಾರ ನಗರಕ್ಕೆ ಕರೆತಂದು 37ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.

    ಶಾಲಾ-ಕಾಲೇಜು ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ತಮಿಳುನಾಡಿನ ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರೆಹಮತ್ ಉಲ್ಲಾ, ಹಿಜಾಬ್ ಕುರಿತು ತೀರ್ಪು ಉಲ್ಲೇಖಿಸಿ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಪರೋಕ್ಷವಾಗಿ ಬೆದರಿಕೆ ಹಾಕಿದ್ದ. ಹೇಳಿಕೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೊ ಆಧರಿಸಿ ವಕೀಲ ಸುಧಾ ಕಟ್ವ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು.

    ನ್ಯಾಯಮೂರ್ತಿಗಳಿಗೆ ಬೆದರಿಕೆ ಸಂಬಂಧ ತಮಿಳುನಾಡು ಪೊಲೀಸರು ರೆಹಮತ್ ಉಲ್ಲಾನನ್ನು ಬಂಧಿಸಿ ತಿರುಪತ್ತೂರು ಜೈಲಿಗೆ ಕಳುಹಿಸಿದ್ದರು. ಹೀಗಾಗಿ ವಿಧಾನಸೌಧ ಪೊಲೀಸರು, ಬಾಡಿ ವಾರಂಟ್ ಪಡೆದು ಆರೋಪಿಯನ್ನು ನಗರಕ್ಕೆ ಕರೆತಂದು ಕೋರ್ಟ್‌ಗೆ ಹಾಜರುಪಡಿಸಿ ವಶಕ್ಕೆ ಪಡೆದು ಎಸಿಪಿ ದರ್ಜೆ ಅಧಿಕಾರಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಕರೊನಾ ಲಸಿಕೆ ಕಡ್ಡಾಯ ವಿಚಾರ: ಸುಪ್ರೀಂಕೋರ್ಟ್​ನಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿದ ಸ್ಪಷನೆ ಇದು..

    ಜೇಮ್ಸ್​ಗೆ ಎತ್ತಂಗಡಿ ಆತಂಕ!; ನಿರ್ಮಾಪಕರು ಏನೆಂದರು?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts