More

    ಕ್ರಿಸ್​ಮಸ್​ ಅಥವಾ ಸಂಕ್ರಾಂತಿಗೆ ‘ಪೊಗರು’ ಅಬ್ಬರ

    ಬೆಂಗಳೂರು: ಧ್ರುವ ಸರ್ಜಾ ಮತ್ತು ನಂದಕಿಶೋರ್​ ಕಾಂಬಿನೇಷನ್​ನಲ್ಲಿ ಪೊಗರು ಸಿನಿಮಾ ಸಿದ್ಧವಾಗಿದೆ. ಈಗಾಗಲೇ ಹಾಡುಗಳು, ಡೈಲಾಗ್​ ಟೀಸರ್​ ಮೂಲಕ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಕನ್ನಡದ ಜತೆಗೆ ತೆಲುಗಿನಲ್ಲೂ ಈ ಸಿನಿಮಾ ತೆರೆಕಾಣುತ್ತಿರುವುದರಿಂದ, ತೆಲುಗು ಪ್ರೇಕ್ಷಕರಲ್ಲೂ ಈ ಚಿತ್ರದ ಬಗ್ಗೆ ಕುತೂಹಲವಿದೆ. ಇಷ್ಟೆಲ್ಲ ಕೌತುಕ ಸೃಷ್ಟಿಸಿರುವ ಈ ಸಿನಿಮಾ ಬಿಡುಗಡೆ ಆಗುವುದಾದರೂ ಯಾವಾಗ? ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

    ಇದನ್ನೂ ಓದಿ: ಪವನ್ ಜತೆ ನಟಿಸ್ತಾರಾ ಸುದೀಪ್?; ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ ಹೀಗೊಂದು ಸುದ್ದಿ

    ಹೌದು, ಉದಯ್ ಕೆ, ಮೆಹ್ತಾ ನಿರ್ಮಾಣದ ನೂತನ ಚಿತ್ರದ ಮುಹೂರ್ತ ಶುಕ್ರವಾರವಷ್ಟೇ ನೆರವೇರಿದೆ. ನಂದಕಿಶೋರ್​ ಅವರೇ ಮತ್ತೊಮ್ಮೆ ಧ್ರುವ ಸರ್ಜಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಚಿತ್ರಕ್ಕೆ ದುಬಾರಿ ಎಂಬ ಶೀರ್ಷಿಕೆ ಅಂತಿಮವಾಗಿದೆ. ಆ ಚಿತ್ರದ ಮುಹೂರ್ತದ ಬಳಿಕ ನಿರ್ದೇಶಕ ನಂದಕಿಶೋರ್​ ಪೊಗರು ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ‘777 ಚಾರ್ಲಿ’ ಟೀಮ್​ಗೆ ಬಂದ ಕಾಲಿವುಡ್​ನ ಬಾಬ್ಬಿ ಸಿಂಹ

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ನಲ್ಲಿಯೇ ಪೊಗರು ಸಿನಿಮಾ ಬಿಡುಗಡೆ ಆಗಬೇಕಿತ್ತು. ಇದೀಗ ಡಿಸೆಂಬರ್​ ತಿಂಗಳ ಕ್ರಿಸ್​ಮಸ್​ ಅಥವಾ ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ರಿಲೀಸ್​ ಆಗಲಿದೆ ಎಂದಿದ್ದಾರೆ. ಇನ್ನು ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗಾಗಿ ಸಿದ್ಧವಾಗಿ ಕುಳಿತಿವೆ. ಬಹುತೇಕರು ಮುಂದಿನ ವರ್ಷವೇ ಬರುವ ಬಗ್ಗೆ ಮುನ್ಸೂಚನೆ ನೀಡಿದ್ದರಾದರೂ, ಯಾವ ಚಿತ್ರತಂಡವೂ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿಲ್ಲ.

    ಬೀಚ್​ನಲ್ಲಿ ಅಶ್ಲೀಲ ನೃತ್ಯ ಪ್ರಕರಣ: ಬಂಧನವಾದ ಕೆಲವೇ ಗಂಟೆಯಲ್ಲಿ ಹೊರಬಂದ ಪೂನಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts