More

    ‘ಪೊಗರು’ ಚಿತ್ರದ ತೆಲುಗು ಡಬ್ಬಿಂಗ್​ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ?

    ಬೆಂಗಳೂರು: ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರವು ತೆಲುಗಿಗೆ ಡಬ್​ ಆಗುತ್ತಿರುವುದು, ತೆಲುಗಿನ ಡಬ್ಬಿಂಗ್​ ರೈಟ್ಸ್​ ಮಾರಾಟವಾಗಿರುವ ವಿಷಯ ಗೊತ್ತಿದ್ದೇ? ಆದರೆ, ಎಷ್ಟಕ್ಕೆ ಮಾರಾಟವಾಗಿದೆ ಎಂಬ ವಿಷಯ ಬಹಿರಂಗಗೊಂಡಿರಲಿಲ್ಲ.

    ಇದನ್ನೂ ಓದಿ: ಅನಿಲ್ ಕಪೂರ್, ವರುಣ್​ ಧವನ್​ಗೆ ಕರೊನಾ; ‘ಜುಗ್ ಜುಗ್​ ಜೀಯೊ’ ಚಿತ್ರೀಕರಣ ಸ್ಥಗಿತ

    ಇದೀಗ ಬಂದಿರುವ ಸುದ್ದಿಯ ಪ್ರಕಾರ, ‘ಪೊಗರು’ ಚಿತ್ರದ ತೆಲುಗು ರೀಮೇಕ್​ ಹಕ್ಕುಗಳು ಮೂರೂವರೆ ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆಯಂತೆ. ಕೆಲವು ದಿನಗಳ ಹಿಂದಷ್ಟೇ, ಚಿತ್ರದ ಹಿಂದಿ ಡಬ್ಬಿಂಗ್​ ಹಕ್ಕುಗಳು ಏಳೂವರೆ ಕೋಟಿಗೆ ಮಾರಾಟವಾಗಿದೆ ಎಂದು ಹೇಳಲಾಗಿತ್ತು. ಈಗ ತೆಲುಗು ಡಬ್ಬಿಂಗ್​ ಹಕ್ಕುಗಳಿಂದ ಮೂರೂವರೆ ಕೋಟಿ ಬಂದಿದ್ದು, ಎರಡು ಭಾಷೆಗಳ ಡಬ್ಬಿಂಗ್​ ಹಕ್ಕುಗಳಿಂದಲೇ ನಿರ್ಮಾಪಕರು ಅರ್ಧ ಸೇಫ್​ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಆಂಧ್ರ ಮತ್ತು ತೆಲಂಗಾಣದಲ್ಲಿ ಧ್ರುವಗೆ ದೊಡ್ಡ ಮಾರ್ಕೆಟ್​ ಇಲ್ಲದಿದ್ದರೂ, ರಶ್ಮಿಕಾ ಮಂದಣ್ಣಗೆ ದೊಡ್ಡ ಮಾರುಕಟ್ಟೆ ಇದೆ. ಚಿತ್ರದ ಡಬ್ಬಿಂಗ್​ ಹಕ್ಕುಗಳು ಅಷ್ಟೊಂದು ಹಣಕ್ಕೆ ಮಾರಾಟವಾಗುವುದಕ್ಕೆ ಬರೀ ಧ್ರುವ ಅಷ್ಟೇ ಅಲ್ಲ, ರಶ್ಮಿಕಾ ಸಹ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಕಾರಣ ಯಾರೇ ಇದ್ದರೂ, ಕನ್ನಡದ ಚಿತ್ರವೊಂದರ ಡಬ್ಬಿಂಗ್​ ಹಕ್ಕುಗಳು ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿರುವುದು ಖುಷಿಪಡಬೇಕಾದ ವಿಷಯ.

    ‘ಪೊಗರು’ ಚಿತ್ರದ ಕೆಲಸಗಳು ಈಗಾಗಲೇ ಸಂಪೂರ್ಣವಾಗಿದ್ದು, ಸದ್ಯದಲ್ಲೇ ಸೆನ್ಸಾರ್​ ಆಗಲಿದೆ. ಇನ್ನು ಈ ಚಿತ್ರವನ್ನು ಜನವರಿ ಮೊದಲ ಅಥವಾ ಎರಡನೆಯ ವಾರದಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

    ಇದನ್ನೂ ಓದಿ: ನಟ ಚಂದು ಗೌಡ ಆ್ಯಂಡ್​ ಗ್ಯಾಂಗ್​ಗೆ ಹೊಡೆಯಿತು ಜಾಕ್​ಪಾಟ್​!

    ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಲ್ಲದೆ, ಧನಂಜಯ್​, ರಾಘವೇಂದ್ರ ರಾಜಕುಮಾರ್​, ರವಿಶಂಕರ್​, ಕುರಿ ಪ್ರತಾಪ್​, ಚಿಕ್ಕಣ್ಣ, ಮಯೂರಿ ಮುಂತಾದವರು ನಟಿಸಿರುವ ಈ ಚಿತ್ರವನ್ನು ನಂದಕಿಶೋರ್​ ನಿರ್ದೇಶಿಸಿದ್ದು, ಬಿ.ಕೆ. ಗಂಗಾಧರ್​ ನಿರ್ಮಾಣ ಮಾಡಿದ್ದಾರೆ.

    ಹಪ್ಪಳ ಮಾಡೋಕೆ ಹೊರಟಿದ್ದಾರೆ ಕಿಯಾರಾ ಅಡ್ವಾನಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts