More

    ಹೃದಯ ಮುಟ್ಟುವಂತಿರಬೇಕು ಕಾವ್ಯ; ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್

    ಕೊಪ್ಪಳ: ಕವಿಗಳು ರಚಿಸುವ ಕಾವ್ಯ ಹೃದಯ ಮುಟ್ಟುವಂತಿರಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇಳಿದರು.


    ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಯುವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಯುವ ಕವಿಗಳಿಗೆ ಪ್ರತ್ಯೇಕ ಗೋಷ್ಠಿ ಏರ್ಪಡಿಸಿರುವುದು ಸಮಂಜಸವಾಗಿದೆ. ರವಿ ಕಾಣದ್ದನ್ನು ಕವಿ ಕಂಡ ಎನ್ನುವುದನ್ನು ಆದಿಕವಿ ಪಂಪನಿಂದ ಈಗಿನ ಕವಿಗಳ ಕಾವ್ಯಗಳಲ್ಲಿ ಕಾಣಬಹುದು. ಕವಿಗಳು ಅಧ್ಯಯನಶೀಲರಾಗಬೇಕು. ಸಾಹಿತ್ಯ ಬದುಕಿನ ಅಂಗವಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಡಾ.ಮಮ್ತಾಜ್ ಬೇಗಂ ಮಾತನಾಡಿ, ಯುವ ಕವಿಗಳು ವಾಚಿಸಿದ ಕವಿತೆಗಳು ವಾಸ್ತವಿಕತೆಗೆ ಕನ್ನಡಿ ಹಿಡಿದಂತಿವೆ ಎಂದರು. ಗೋಷ್ಠಿಯಲ್ಲಿ ಸಂಗೀತಾ ಶೆಟ್ಟರ್, ಶಕುಂತಲಾ ನಾಯಕ, ಉಮಾದೇವಿ, ಶ್ರೀಗೌರಿ, ಶಿವಲೀಲಾ, ಮುಮ್ತಾಜ್ ಬೇಗಂ, ಮಹಾಲಕ್ಷ್ಮೀ, ಮೌನೇಶ ಬಡಿಗೇರ್, ಸುರೇಶ ಜಿ.ಎಸ್., ಡಾ.ಪ್ರವೀಣ್ ಪೊ.ಪಾಟೀಲ್, ಜಿ.ಎಸ್.ಶರಣು, ಡಿ.ಬಸವ, ಮಂಜುನಾಥ, ವೆಂಕಟೇಶ ರಡ್ಡಿ, ಅಮರಯ್ಯ ಕಂದಗಲ್‌ಮಠ, ಮೈಲಾರಪ್ಪ, ದೇವರಾಜ, ಅರ್ಚನಾ ಕವನಗಳನ್ನು ವಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts