More

    ಜಾಗತಿಕ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ: ಭಾರತದೊಟ್ಟಿಗೆ ಕೆಲಸ ಮಾಡಲು ಕ್ವಾಲ್ಕಾಮ್ ಕಂಪನಿ ಉತ್ಸುಕ

    ವಾಷಿಂಗ್ಟನ್​: ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕ್ವಾಲ್ಕಾಮ್ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕ್ರಿಶ್ಚಿಯನೋ ಇ ಅಮನ್​ ಅವರನ್ನು ಭೇಟಿ ಮಾಡಿದ್ದಾರೆ.

    ಕ್ವಾಲ್ಕಮ್​ ಮಾತ್ರವಲ್ಲದೆ, ಅಮೆರಿಕದ ಮುಂಚೂಣಿ ಕಂಪನಿಗಳಾದ ಅಡೋಬ್, ಫಸ್ಟ್ ಸೋಲಾರ್, ಜನರಲ್ ಆಟಾಮಿಕ್ಸ್, ಬ್ಲ್ಯಾಕ್​ ಸ್ಟೋನ್ ಸೇರಿದಂತೆ ಇನ್ನಿತರ ಕಂಪನಿಗಳ ಸಿಇಒಗಳ ಜತೆಯಲ್ಲಿ ಪ್ರಧಾನಿ ಮೋದಿ ಮುಖಾಮುಖಿ ಚರ್ಚೆಯನ್ನು ಆರಂಭಿಸಿದ್ದು, ಭಾರತದಲ್ಲಿ ಬಂಡವಾಳ ಹೂಡಿಕೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸುತ್ತಿದ್ದಾರೆ.

    ಭಾರತ ನೀಡುತ್ತಿರುವ ವಿಶಾಲ ಅವಕಾಶಗಳನ್ನು ಪ್ರಧಾನಿ ಮೋದಿ ಸಭೆಯಲ್ಲಿ ಉಲ್ಲೇಖಿಸಿದ್ದಾರೆ. 5ಜಿ ಮತ್ತು ಇತರ ಡಿಜಿಟಲ್ ಇಂಡಿಯಾ ಪ್ರಯತ್ನಗಳಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಕ್ವಾಲ್ಕಾಮ್ ಕಂಪನಿಯ ಸಿಇಒ ಕ್ರಿಶ್ಚಿಯನೋ ಇ ಅಮನ್​ ಉತ್ಸುಕತೆ ವ್ಯಕ್ತಪಡಿಸಿದ್ದಾರೆಂದು ಪ್ರಧಾನಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.

    ಸಿಇಒಗಳ ಜತೆಗಿನ ಸರಣಿ ಸಭೆಯ ಬಳಿಕ ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜತೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಬಳಿಕ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಭೇಟಿ ಮಾಡಲಿದ್ದಾರೆ. ಒಟ್ಟು ಮೂರು ದಿನಗಳ ಕಾಲ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಮಾಡಲಿದ್ದು, ಅವರ ವೇಳಾಪಟ್ಟಿ ಈ ಕೆಳಕಂಡಂತಿದೆ.

    ಪ್ರಧಾನಿ ಮೋದಿ ವೇಳಾಪಟ್ಟಿ (ಭಾರತೀಯ ಕಾಲಮಾನ ಪ್ರಕಾರ)

    ಗುರುವಾರ
    # ವಾಷಿಂಗ್ಟನ್​ಗೆ ನಸುಕಿನ 3.30ಕ್ಕೆ ಆಗಮನ
    # ಸಂಜೆ 7.15ರಿಂದ ಕ್ವಾಲ್ಕಾಮ್ ಆಪಲ್, ಅಡೋಬ್, ಫಸ್ಟ್ ಸೋಲಾರ್, ಜನರಲ್ ಆಟಾಮಿಕ್ಸ್, ಬ್ಲಾ್ಯಕ್ ಸ್ಟೋನ್, ಇನ್ನಿತರ ಕಂಪನಿಗಳ ಸಿಇಒಗಳ ಜತೆ ಸರಣಿ ಸಭೆ.
    # ರಾತ್ರಿ 11ಕ್ಕೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜತೆ ದ್ವಿಪಕ್ಷೀಯ ಚರ್ಚೆ.

    ಶುಕ್ರವಾರ:
    # ಮಧ್ಯಾಹ್ನ 12.45- ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ
    # ಮಧ್ಯಾಹ್ನ 3- ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಜತೆ ಚರ್ಚೆ
    # ರಾತ್ರಿ 8.30- ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ದ್ವೀಪಕ್ಷೀಯ ಮಾತುಕತೆ.
    # ರಾತ್ರಿ 11.30- ಕ್ವಾಡ್ ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗಿ.

    ಶನಿವಾರ
    # ಸಂಜೆ 7.30- ನ್ಯೂಯಾರ್ಕ್​ನಲ್ಲಿ ವಿಶ್ವಸಂಸ್ಥೆಯ 76ನೇ ಮಹಾಧಿವೇಶನದಲ್ಲಿ ಭಾಷಣ
    # ರಾತ್ರಿ 9.15- ಭಾರತಕ್ಕೆ ಮರಳಿ ಪಯಣ
    # ಭಾನುವಾರ ಬೆಳಗ್ಗೆ 11.30ಕ್ಕೆ ನವದೆಹಲಿಗೆ ಆಗಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts