More

    ಪ್ರಧಾನಿ ಮೋದಿಯೊಂದಿಗಿನ ಪರೀಕ್ಷಾ ಪೆ ಚರ್ಚಾಗೆ ವಿಜಯಪುರದ ವಿದ್ಯಾರ್ಥಿನಿ ಶ್ವೇತಾ ಆಯ್ಕೆ

    ವಿಜಯಪುರ: ಪರೀಕ್ಷೆ ಒತ್ತಡ ಹಾಗೂ ಆತಂಕವನ್ನು ದೂರಗೊಳಿಸಲು ಕೆಲವು ವರ್ಷಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸುತ್ತಿರುವ ‘ಪರೀಕ್ಷಾ ಪೆ ಚರ್ಚಾ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಆರ್‌ ಎಂ ಎಸ್‌ ಎ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಶ್ವೇತಾ ಮಲ್ಲಿಕಾರ್ಜುನ ಜಲಪೂರ ಆಯ್ಕೆಯಾಗಿದ್ದಾಳೆ.

    ಕಳೆದ ಡಿ.16ರಂದು ಆನ್‌ಲೈನ್ ಮುಖಾಂತರ ವಿದ್ಯಾರ್ಥಿಗಳು ಪ್ರಬಂಧ ಜತೆಗೆ ಸವಿವರ ಒಳಗೊಂಡ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಬಸವನ ಬಾಗೇವಾಡಿ ನಿವಾಸಿಯಾದ ವಿದ್ಯಾರ್ಥಿನಿ ಶ್ವೇತಾ ಜಲಪೂರ ಸೇರಿದಂತೆ ಒಟ್ಟು 5 ವಿದ್ಯಾರ್ಥಿಗಳು ಪ್ರಬಂಧ ಸಲ್ಲಿಸಿದ್ದರು. ನಮ್ಮ ಕರ್ತವ್ಯಗಳು ಹಾಗೂ ನೀವು ತೆಗೆದುಕೊಳ್ಳುವಿಕೆ ವಿಷಯ ಕುರಿತು ಪ್ರಬಂಧ ಮಂಡಿಸಿದ್ದ ಶ್ವೇತಾ ಆಯ್ಕೆಯಾಗಿದ್ದಾಳೆ.

    ಕರ್ನಾಟಕ ರಾಜ್ಯದ ಪೈಕಿ 15ಸಾವಿರ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದ್ದು, ಒಟ್ಟು 42 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ವಿಜಯಪುರ ಜಿಲ್ಲೆಗೆ ಶ್ವೇತಾ ಆಯ್ಕೆಯಾಗಿದ್ದಾಳೆ.

    ಜ.16ರಂದು ಬೆಂಗಳೂರಿನಲ್ಲಿ ಕರ್ನಾಟಕ ಸಮಗ್ರ ಶಿಕ್ಷಣ ಸಂಸ್ಥೆ ನೇತೃತ್ವದಲ್ಲಿ ಪೂರ್ವ ಸಿದ್ಧತೆ ತರಬೇತಿ ನಡೆಯಲಿದ್ದು, ಜ.20ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ.

    ಅಸ್ಪಶ್ಯತೆ ಕುರಿತಾಗಿ ಪ್ರಬಂಧ ಮಂಡಿಸಿದ್ದೆ. ಇದೀಗ ಪರೀಕ್ಷಾ ಪೆ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಘಟನೆ ನನ್ನ ಮೇಲೆ ಪರಿಣಾಮ ಬೀರಿತ್ತು. ಸಂವಿಧಾನ ಅವಕಾಶ ನೀಡಿದ್ದರೂ ಶಿಕ್ಷಿತರೇ ದೂರು ನೀಡದೆ ದೂರಾಗುತ್ತಿದ್ದಾರೆ. ಅಲ್ಲದೆ ದೌರ್ಜನ್ಯ ನಡೆಸುತ್ತಿರುವುದು ಬೇಸರವನ್ನುಂಟು ಮಾಡುತ್ತದೆ. ಬೀದಿ ನಾಟಕ, ಜನಜಾಗೃತಿ ಮುಖಾಂತರ ಪರಿವರ್ತನೆ ಸಾಧ್ಯವಿದೆ ಎಂದು ನಾನು ಮಂಡಿಸಿದ ಪ್ರಬಂಧದಿಂದಾಗಿ ನನಗೆ ಅವಕಾಶ ಸಿಕ್ಕಿದೆ ಎಂದು ಶ್ವೇತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts