More

    ಮತ್ತೊಮ್ಮೆ ವಿಶ್ವದ ಗಮನ ಸೆಳೆದ ಭಾರತ: ರಾಷ್ಟ್ರಪತಿ, ಪ್ರಧಾನಿಯ ಟ್ವಿಟರ್‌ ಖಾತೆ ಫಾಲೋ ಮಾಡುತ್ತಿರುವ ಶ್ವೇತ ಭವನ

    ವಾಷಿಂಗ್ಟನ್‌: ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕರೊನಾ ವೈರಸ್‌ಗೆ ಸಂಬಂಧಿಸಿದಂತೆ ಇಡೀ ವಿಶ್ವವೇ ಭಾರತವನ್ನು ಶ್ಲಾಘಿಸುತ್ತಿರುವ ಬೆನ್ನಲ್ಲೇ ಇದೀಗ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಯವರ ಟ್ವಿಟರ್‌ ಖಾತೆಯನ್ನು ಅಮೆರಿಕದ ಶ್ವೇತ ಭವನ ಫಾಲೋ ಮಾಡುತ್ತಿರುವ ಸಂಗತಿ ತಿಳಿದುಬಂದಿದೆ.

    ಅಮೆರಿಕ ಅಧ್ಯಕ್ಷರ ಸಚಿವಾಲಯವು ಕೇವಲ 19 ಟ್ವಿಟರ್‌ ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದೆ. ಆ ಖಾತೆಯೆಲ್ಲವೂ ಅಮೆರಿಕದ ಮೂಲದವೇ. ಆದರೆ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಖಾತೆಯೂ ಸೇರ್ಪಡೆಯಾಗಿರುವುದು ವಿಶೇಷ. ಇದನ್ನು ಹೊರತುಪಡಿಸಿದರೆ ಅಮೇರಿಕೇತರ ದೇಶಗಳ ಯಾವುದೇ ನಾಯಕರ ಖಾತೆಗಳನ್ನು ಇಲ್ಲಿ ಫಾಲೋ ಮಾಡಲಾಗುವುದಿಲ್ಲ.

    ವಿಶ್ವನಾಯಕರ ಪಟ್ಟಿಯಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದಾರೆ. ಇವರ ವೈಯಕ್ತಿಯ ಖಾತೆಗೆ 42 ದಶಲಕ್ಷ ಬೆಂಬಲಿಗರು ಇದ್ದರೆ, ಪ್ರಧಾನಿ ಎಂಬ ಹೆಸರಿನಲ್ಲಿ ಇರುವ ಖಾತೆಗೆ 26 ದಶಲಕ್ಷ ಬೆಂಬಲಿಗರಿದ್ದಾರೆ.

    ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ ಅವರನ್ನು ಭಾರತಕ್ಕೆ ಮಾತ್ರವಲ್ಲದೇ ತಮ್ಮ ತವರು ಗುಜರಾತ್‌ಗೂ ಕರೆದೊಯ್ದಿದ್ದರು. ಈ ಎರಡು ದೇಶಗಳ ಸಂಬಂಧ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆಗಳೂ ನಡೆದಿವೆ. ಇವೆಲ್ಲವೂ ಅಮೆರಿಕದ ಮೇಲೆ ಪ್ರಭಾವ ಬೀರಿವೆ ಎನ್ನಲಾಗಿದೆ. (ಏಜೆನ್ಸೀಸ್‌)

    ಇಪಿಎಫ್​ನಿಂದ ಹತ್ತೇ ದಿನದಲ್ಲಿ 280 ಕೋಟಿ ರೂ. ವಿತ್​ಡ್ರಾ: ಕೇಂದ್ರದ ನಿರ್ಧಾರದಿಂದ ಸಂಕಷ್ಟದ ಸಮಯದಲ್ಲಿ ನೌಕರರಿಗೆ ಬಿಗ್​ ರಿಲೀಫ್​

    ಒಡಿಶಾ ಬಳಿಕ ಪಂಜಾಬ್‌ನಲ್ಲಿ ಲಾಕ್‌ಡೌನ್‌ ಅವಧಿ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts