More

  VIDEO|ಮಹಾತ್ಮ ಗಾಂಧಿ 72ನೇ ಪುಣ್ಯತಿಥಿ: ಪ್ರಧಾನಿ, ರಾಷ್ಟ್ರಪತಿಗಳಿಂದ ಗಾಂಧಿ ಸಮಾಧಿಗೆ ಪುಷ್ಪನಮನ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸೇರಿದಂತೆ ಪ್ರಮುಖ ಗಣ್ಯರು ಮಹಾತ್ಮ ಗಾಂಧಿ ಅವರ 72ನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ದೆಹಲಿಯ ರಾಜ್​ಘಾಟ್​ನಲ್ಲಿರುವ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿ, ಗಾಂಧಿಯನ್ನು ಸ್ಮರಿಸಿದರು.

  ರಕ್ಷಣಾ ಸಚಿವರಾದ ರಾಜನಾಥ್​ ಸಿಂಗ್​ ಕೂಡ ಗಾಂಧಿ ಸಮಾಧಿಗೆ ನಮಸ್ಕರಿಸಿದರು. ಈ ವೇಳೆ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​, ಸೇನಾ ಮುಖ್ಯಸ್ಥ ಜನರಲ್​ ಎಂ.ಎಂ. ನರಾವಣೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್​ ಕರಂಬಿರ್​ ಸಿಂಗ್​ ಮತ್ತು ವಾಯುಪಡೆಯ ಮುಖ್ಯಸ್ಥರಾದ ಏರ್​ ಚೀಫ್​ ಮಾರ್ಷಲ್​ ಆರ್​.ಕೆ.ಎಸ್​ ಭಡೂರಿಯಾ ಅವರು ಕೂಡ ಗಾಂಧಿ ಸಮಾಧಿಗೆ ನಮಸ್ಕರಿಸಿದರು.

  ಇದೇ ವೇಳೆ ಹಿರಿಯ ಬಿಜೆಪಿ ನಾಯಕ ಎಲ್​.ಕೆ.ಅಡ್ವಾಣಿ ಕೂಡ ರಾಜಘಾಟ್​ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts