More

    ವ್ಯತ್ಯಾಸ ಗಮನಿಸಿ; ನುಡಿದಂತೆ ನಡೆದರಾ ಪ್ರಧಾನಿ ಮೋದಿ?

    ನವದೆಹಲಿ: ಪ್ರಧಾನಿ ಮೋದಿ ಗಡ್ಡಧಾರಿ. ಗೌರವರ್ಣದ ಮುಖಾರವಿಂದಕ್ಕೆ ಶ್ವೇತ ಕೇಶದ ಗುಚ್ಛ ವಿಶೇಷ ಕಳೆ ನೀಡಿದೆ. ಅದನ್ನು ಅಷ್ಟೇ ನಾಜೂಕಾಗಿಯೇ ನೋಡಿಕೊಳ್ಳುತ್ತಾರೆ ಎಂಬುದು ಅವರನ್ನು ನೋಡಿದವರಿಗೆ ಟಿವಿ ಹಾಗೂ ಫೋಟೋಗಳಲ್ಲಿ ಗಮನಿಸಿದರೆ ಗೊತ್ತಾಗುತ್ತದೆ.

    ಅಂತೆಯೇ, ಮೇಲಿನ ಎರಡು ಚಿತ್ರಗಳಲ್ಲಿರುವ ವ್ಯತ್ಯಾಸ ಕಂಡು ಹಿಡಿಯಬಲ್ಲಿರಾ? ಕಳೆದ ಕೆಲ ತಿಂಗಳಿನಿಂದ ಅವರ ಗಡ್ಡ ಸಾಮಾನ್ಯಕ್ಕಿಂತಲೂ ಹೆಚ್ಚು ಉದ್ದವಾಗಿರುವುದನ್ನು ಅವರ ಅಭಿಮಾನಿಗಳು ಗಮನಿಸಿದ್ದಾರೆ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಮೋದಿ ಈ ಮೂಲಕ ನೀಡುತ್ತಿರುವ ಸಂದೇಶವಾದರೂ ಏನು ಎಂಬುದು ಗಮನಾರ್ಹ ಸಂಗತಿ.

    ಇದನ್ನೂ ಓದಿ; ರೋಗ ಪ್ರತಿರೋಧಕ ಶಕ್ತಿ ಕುಂದಿದವರಿಗೂ ಆಕ್ಸ್​ಫರ್ಡ್​ ಕರೊನಾ ಲಸಿಕೆ ಸುರಕ್ಷಿತ; ಫಲಿತಾಂಶ ಪ್ರಕಟಿಸಿದ ತಜ್ಞರು 

    ಕಳೆದ ಮಾರ್ಚ್​ ಅಂತ್ಯದಲ್ಲಿ ದೂರದರ್ಶನದಲ್ಲಿ ಹಾಜರಾಗಿ ಒಂದಿಡೀ ದಿನದ ಜನತಾ ಕರ್ಫ್ಯೂ ಘೋಷಿಸಿದಾಗ ಅವರ ಗಡ್ಡ ಎಂದಿನಂತೆ ಟ್ರಿಮ್​ ಆಗಿತ್ತು. ಆದರೆ, ಇತ್ತೀಚೆಗೆ ಕರೊನಾ ಕುರಿತಾಗಿ ಮಾತನಾಡುವಾಗ ಅವರ ಗಡ್ಡ ಎಂದಿಗಿಂತಲೂ ಹೆಚ್ಚು ಉದ್ದವಾಗಿರುವುದು ಆದರೆ, ಟ್ರಿಮ್​ ಆಗಿರುವುದು ಗೊತ್ತಾಗುತ್ತದೆ.

    ಇವೆರಡು ಸಂದರ್ಭಗಳ ನಡುವೆ 70 ದಿನಗಳ ಅಂತರವಿದೆ. ಕರೊನಾ ವೈರಸ್​ ಹಬ್ಬುವುದನ್ನು ತಡೆಯಲು ದೇಶಾದ್ಯಂತ ಲಾಕ್​ಡೌನ್​ ವಿಧಿಸಿದ ಅವಧಿ ಇದಾಗಿತ್ತು ಎಂಬುದು ಕೂಡ ಗಮನಿಸಬೇಕಾದ ಅಂಶ.

    ಈ ಅವಧಿಯಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಸ್ವತಃ ಮೋದಿಯೇ ಕರೆ ನೀಡಿದ್ದರು. ಜತೆಗೆ ಅದನ್ನೇ ಪಾಲಿಸಿದ್ದಾರೆಯೇ? ಅಂದರೆ, ಈ ಅವಧಿಯಲ್ಲಿ ಅವರು ತಮ್ಮ ಕ್ಷೌರಿಕನಿಂದಲೂ ಅಂತರ ಕಾಯ್ದುಕೊಂಡಿದ್ದರೆ? ಅಥವಾ ಕನಿಷ್ಠ ಒಂದು ತಿಂಗಳ ಅವಧಿಗಾದರೂ ದೂರಿವಿದ್ದಿರಲೇಬೇಕು ಎಂದೇ ಹೇಳಲಾಗಿದೆ.

    ಇದನ್ನೂ ಓದಿ; ಅಮೆರಿಕದಲ್ಲಿ ಚೀನಾದ ದೈತ್ಯ ಕಂಪನಿಗಳನ್ನು ನಿಷೇಧಿಸಿದ ಭಾರತೀಯ ಸಂಜಾತ; ರಾಷ್ಟ್ರೀಯ ಭದ್ರತೆಗೆ ಮಾರಕವೆಂದು ಆದೇಶ

    ಲಾಕ್​ಡೌನ್​ ಅವಧಿಯಲ್ಲಿ ಹಲವು ಬಾರಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಆಗ ಅವರ ಮುಖವನ್ನು ಗಮಿಸಿದರೆ, ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಧಿಕೃತ ನಿವಾಸದಿಂದಲೇ ಹಲವು ಸಭೆ, ಸಂವಾದಗಳನ್ನು ನಡೆಸಿದ್ದಾರೆ. ಹಲವರನ್ನು ಭೇಟಿಯಾಗಿದ್ದಾರೆ. ಆದರೆ, ಕ್ಷೌರಿಕನನ್ನು ಭೇಟಿಯಾಗುವುದು ಅದೇಕೋ ಅವರಿಗೆ ಅನಿವಾರ್ಯ ಎನಿಸಲೇ ಇಲ್ಲವೇನೋ?

    ಜನರಿಗೆ ಮನೆಯಲ್ಲೇ ಇರಿ ಎಂದು ಸಂದೇಶ ನೀಡಿದ ಪ್ರಧಾನಿ, ತಾವು ಕೂಡ ಅದನ್ನೇ ಪಾಲಿಸಿದ್ದಾರೆ. ಅನಿವಾರ್ಯವಲ್ಲದ ಯಾವುದನ್ನು ಬಯಸಿಲ್ಲ ಎಂಬುದು ಇದರ ಸಂದೇಶ ಎಂಬುದು ಅಭಿಮಾನಿಗಳ ವಿಶ್ಲೇಷಣೆ.

    ಕರೊನಾ ಲಸಿಕೆ ಮೊದಲಿಗೆ ಸಿಗೋದು ಯಾರಿಗೆ? ಪ್ರಧಾನಿ ಮೋದಿಯೇ ಸಿದ್ಧಪಡಿಸಿದ್ದಾರೆ ವಿತರಣಾ ಯೋಜನೆ ರೂಪುರೇಷೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts