More

    ಹೌರಾದ ಬೇಳೂರು ಮಠದಲ್ಲಿ ತಂಗಲಿರುವ ಪ್ರಧಾನಿ ಮೋದಿ; ಸಿದ್ಧತೆ ನಡೆಸಿರುವ ಮಠದ ಸನ್ಯಾಸಿಗಳು

    ಕೋಲ್ಕತ್ತ: ಇಲ್ಲಿನ ಫೋರ್ಟ್​ ಟ್ರಸ್ಟ್​ನ 150ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಲು ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಜಗದೀಪ್​ ಧನಕರ್​, ಮೇಯರ್​ ಪೀರ್ಹಾದ್​ ಹಕೀಂ, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​ ಘೋಷ್​ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

    ಪ್ರಧಾನಿ ಅವರ ಎರಡು ದಿನದ ಪ್ರವಾಸದಲ್ಲಿ ಕೊಂಚ ಬದಲಾವಣೆಗಳಾಗಿವೆ. ಇಂದು ಪ್ರಧಾನಿ ಅವರು ರಾಜಭವನದಲ್ಲಿ ತಂಗಲು ನಿರ್ಧರಿಸಲಾಗಿತ್ತು. ಆದರೆ ಇಂದು ಬೇಲೂರು ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

    ಹೌರಾ ಜಿಲ್ಲೆಯಲ್ಲಿರುವ ಮಠದಲ್ಲಿ ಪ್ರಧಾನಿ ವಾಸ್ತವ್ಯಕ್ಕೆ ಈಗಾಗಲೇ ಅಲ್ಲಿನ ಸನ್ಯಾಸಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಪ್ರಧಾನಿ ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳೊಂದಿಗೆ ಸಭೆ ನಂತರ ಬೇಲೂರು ಮಠಕ್ಕೆ ತೆರಳಲಿದ್ದಾರೆ.

    ಕೋಲ್ಕತ್ತಕ್ಕೆ ಆಗಮಿಸುವ ಮೊದಲು ಈ ಭೇಟಿಯ ಬಗ್ಗೆ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಇಂದು ಮತ್ತು ನಾಳೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲು ಕಾತುರನಾಗಿದ್ದೇನೆ. ರಾಮಕೃಷ್ಣಾಶ್ರಮ ಮಿಷನ್​ ಜತೆ ಸಮಯ ಕಳೆಯುವುದು ಸಂತೋಷದ ಸಂಗತಿ. ಕಳೆದ ವರ್ಷ ನಮ್ಮನ್ನು ಅಗಲಿದ ಆತ್ಮಾನಂದಜೀ ಮಹಾರಾಜ್​ ಅವರು ನೆನಪಾಗುತ್ತಾರೆ ಎಂದಿದ್ದಾರೆ.

    ಅವರ ಅನುಪಸ್ಥಿತಿಯನ್ನು ಊಹಿಸಿಕೊಳ್ಳಲು ಅಸಾಧ್ಯ. ಅವರು ನನಗೆ ಜನ ಸೇವೇಯೇ ಜನಾರ್ದನ ಸೇವೆ ಎಂಬುದನ್ನು ಕಲಿಸಿದ್ದರು. ಅವರಿಲ್ಲದೆ ರಾಮಕೃಷ್ಣ ಮಿಷನ್​ ಆಶ್ರಮವನ್ನು ನೆನಪಿಸಿಕೊಳ್ಳಲು ಆಗುವುದಿಲ್ಲ ಎಂದು ಟ್ವೀಟ್​ನಲ್ಲಿ ಹಂಚಿಕೊಂಡಿದ್ದರು.

    ಇನ್ನು ಭಾನುವಾರ ಬೆಳಗ್ಗೆ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಮತ್ತು ಕೋಲ್ಕತ್ತ ಪೋರ್ಟ್​ ಟ್ರಸ್ಟ್​ನ 150 ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ದೆಹಲಿಗೆ ಮರಳಲಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts